Advertisement

ಫಾರಿನ್‌ ಬಿಸಿಲಿನ ಗುರು ಚರ್ಮ ಕಿತ್ಕೊಂಡು ಬಂತು!

11:37 AM May 02, 2017 | |

ಈ ಪಾಟಿ ಯಾರ ಚರ್ಮ ಕಿತ್ಕೊಂಡು ಬಂದಿದೆ, ಮೈಯೆಲ್ಲಾ ಈ ಮಟ್ಟಕ್ಕೆ ಸುಡಲು ಕಾರಣವೇನು ಎಂದು ನೀವು ಯೋಚಿಸಬಹುದು. ಚರ್ಮ ಕಿತ್ಕೊಂಡು ಬರುವ ಮಟ್ಟಿಗೆ ಶೂಟಿಂಗ್‌ನಲ್ಲಿ ತೊಡಗಿಕೊಂಡಿರುವ ನಟ ಬೇರಾರು ಅಲ್ಲ, ಗುರುನಂದನ್‌. ಹೌದು, ಗುರುನಂದನ್‌ “ರಾಜು ಕನ್ನಡ ಮೀಡಿಯಂ’ ಎಂಬ ಸಿನಿಮಾ ಮಾಡುತ್ತಿರೋದು ನಿಮಗೆ ಗೊತ್ತಿದೆ.

Advertisement

ಇತ್ತೀಚೆಗೆ ಹಾಡಿನ ಹಾಗೂ ಕೆಲವು ದೃಶ್ಯಗಳ ಚಿತ್ರೀಕರಣಕ್ಕಾಗಿ “ರಾಜು ಕನ್ನಡ ಮೀಡಿಯಂ’ ತಂಡ ಐಲ್ಯಾಂಡ್‌ವೊಂದಕ್ಕೆ ಹೋಗಿದೆ. ಮಟಮಟ ಬಿಸಿಲು. ಶೇ. 45 ಡಿಗ್ರಿಯ ಬಿಸಿಲಿನ ಕಾವು ಗುರುನಂದನ್‌ ಮೈಗೆ ಬೀಳುತ್ತಿದ್ದಂತೆ, ಅವರ ಚರ್ಮ ಅದನ್ನು ತಡೆದುಕೊಳ್ಳುವ ಸಾಮರ್ಥ್ಯ ಕಳೆದುಕೊಂಡಿದೆ. ಪರಿಣಾಮವಾಗಿ ಚರ್ಮ ಕಿತ್ತುಕೊಂಡು ಬಂದಿದೆ.

ಒಂದು ಕಡೆ ಬಿಸಿಲು, ಮತ್ತೂಂದು ಕಡೆ ಚರ್ಮದ ಉರಿ … ಎರಡನ್ನೂ ಅನಿವಾರ್ಯವಾಗಿ ಸಹಿಸಿಕೊಂಡು ಗುರುನಂದನ್‌ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಹಿಸಿದ್ದಾರೆ. ಆದರೆ ಕಿತ್ತುಕೊಂಡು ಹೋದ ಚರ್ಮದ ನೋವು ಹಾಗೆ ಇದೆ. ಈಗಷ್ಟೇ ಕಲೆ ಮಾಸುತ್ತಿದೆ. “ಸತತವಾಗಿ ಚಿತ್ರೀಕರಣವಿತ್ತು. ನಾವು ಎಷ್ಟೇ ಕ್ರೀಮ್‌ ಹಚ್ಚಿಕೊಂಡು ಶೂಟಿಂಗ್‌ ಮಾಡಿದರೂ ಅಲ್ಲಿನ ಬಿಸಿಲಿನ ತಾಪಕ್ಕೆ ಅದು ಸಾಕಾಗುತ್ತಿರಲಿಲ್ಲ.

ಹಾಗಾಗಿ ಚರ್ಮ ಕಿತ್ತುಕೊಂಡು ಬಂದಿದೆ. ಅದರ ನಡುವೆಯೂ ನಾವು ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿಕೊಂಡು ಬಂದಿದ್ದೇವೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ’ ಎನ್ನುವುದು ನಾಯಕ ಗುರುನಂದನ್‌ ಮಾತು. “ರಾಜು ಕನ್ನಡ ಮೀಡಿಯಂ’ ಚಿತ್ರವನ್ನು ಕೆ.ಎ.ಸುರೇಶ್‌ ನಿರ್ಮಾಣ ಮಾಡಿದ್ದು, ನರೇಶ್‌ ಕುಮಾರ್‌ ನಿರ್ದೇಶನ ಮಾಡಿದ್ದಾರೆ. ಈಗಗಾಲೇ ಚಿತ್ರೀಕರಣ ಮುಗಿದಿದ್ದು, ಆಡಿಯೋ ಬಿಡುಗಡೆ ಮಾಡುವ ಯೋಚನೆಯಲ್ಲಿದೆ ಚಿತ್ರತಂಡ.

Advertisement

Udayavani is now on Telegram. Click here to join our channel and stay updated with the latest news.

Next