Advertisement

“ಮೀನುಮಾರುಕಟ್ಟೆಗಳಲ್ಲಿ ತಾಜಾ ಮೀನು ಲಭ್ಯ: ಆತಂಕ ಬೇಡ’

06:30 AM Jun 29, 2018 | Team Udayavani |

ಮಲ್ಪೆ: ಕರಾವಳಿ ಜಿಲ್ಲೆಗಳಲ್ಲಿ ವಿವಿಧ ಮೀನುಗಾರಿಕಾ ಬಂದರುಗಳಿಂದ ನೇರವಾಗಿ ಮೀನು ಮಾರುಕಟ್ಟೆಗಳಿಗೆ ಅತೀ ಶೀಘ್ರವಾಗಿ ತಂದು ಮಾರಾಟ ಮಾಡುತ್ತಿರುವುದರಿಂದ ಯಾವುದೇ ರಾಸಾಯನಿಕ ಬಳಕೆಯ ಅಗತ್ಯತೆ ಇರುವುದಿಲ್ಲ. 

Advertisement

ಮಳೆಗಾಲದಲ್ಲಿ ಇದೀಗ ಹೆಚ್ಚಿನ  ಎಲ್ಲ ಮೀನು ಮಾರುಕಟ್ಟೆಗಳಲ್ಲಿ ತಾಜಾ ಮೀನು ದೊರೆಯುತ್ತಿರುವುದರಿಂದ ಗ್ರಾಹಕರಿಗೆ ಯಾವುದೇ ಸಂದೇಹ ಬೇಡ ಎಂದು ಉಡುಪಿ ತಾಲೂಕು ಮಹಿಳಾ ಹಸಿಮೀನು ಮಾರಾಟಗಾರರ ಸಂಘದ ಅಧ್ಯಕ್ಷೆ ಬೇಬಿ ಎಚ್‌. ಸಾಲ್ಯಾನ್‌ ತಿಳಿಸಿದ್ದಾರೆ.

ಕರಾವಳಿಯ ಎಲ್ಲಾ ಮೀನು ಮಾರುಕಟ್ಟೆಯಲ್ಲಿ ಮಹಿಳೆಯರು ಸಾಂಪ್ರಾದಾಯಿಕ ರೀತಿಯಲ್ಲಿ ಮೀನು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದು, ಎಲ್ಲಾ ಮೀನು ಮಾರುಕಟ್ಟೆಗಳಲ್ಲಿ ತಾಜಾ ಮೀನು ವ್ಯಾಪಾರ ಸರಾಗವಾಗಿ ನಡೆಯುತ್ತಿದೆ. ಅನಾದಿಕಾಲದಿಂದಲೂ ಮೀನು ಮಾರುಕಟ್ಟೆಗಳಲ್ಲಿ ಸಾಂಪ್ರಾದಾಯಿಕ ಪದ್ಧತಿಯಲ್ಲಿ ಮಹಿಳೆಯರು ಮೀನು ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವುದರಿಂದ ಯಾವುದೇ ರಾಸಾಯನಿಕ ಬಳಸಿದ ಮೀನುಗಳಿಗೆ ಉತ್ತೇಜನ ನೀಡುತ್ತಿಲ್ಲ. ಹಾಗಾಗಿ ಗ್ರಾಹಕರು ಮೀನುಮಾರುಕಟ್ಟೆಗಳ ಮಹಿಳೆಯರಲ್ಲಿ ದೊರೆಯುವ ತಾಜಾ ಮೀನಿನ ಬಗ್ಗೆ ಭರವಸೆ ಹೊಂದಿದ್ದಾರೆ.

ಕರಾವಳಿಯ ಬೇರೆ ಬೇರೆ ಕಡೆಗಳಲ್ಲಿ ಮೀನಿನ ಅಂಗಡಿಗಳಲ್ಲಿ ಹಾಗೂ ವಿವಿಧ ಮಾಲ್‌ಗ‌ಳಲ್ಲಿ ಮಾರಾಟ ಮಾಡಲಾಗುತ್ತಿರುವ ಶೀತಲೀಕೃತ ಮೀನುಗಳನ್ನು ಖರೀದಿಸುವ ಬದಲು ಮೀನು ಮಾರುಕಟ್ಟೆಗಳಲ್ಲಿ ಪ್ರತಿದಿನ ಶೇಖರಣೆ ಮಾಡುವ ಮೀನಿಗೆ ಹೆಚ್ಚಿನ ಬೇಡಿಕೆಯಿದೆ.

ಸೂಕ್ತ ಕ್ರಮ ಕೈಗೊಳ್ಳಬೇಕು
ಮೀನಿನ ಅಂಗಡಿಗಳಲ್ಲಿ ಕೆಲವು ದಿನಗಳ ಕಾಲ ಶೀತಲೀಕರಣ ಮಾಡಿ ಕಾಪಿಡುವ ಮೀನುಗಳ ಬಗ್ಗೆ ಗ್ರಾಹಕರ ಎಚ್ಚರ ವಹಿಸಬೇಕು. ಕರಾವಳಿಯ ಮೀನು ಮಾರಾಟಗಾರರ ಮಹಿಳೆಯರು ಪ್ರಾರಂಭದಿಂದಲೂ ಶೀತಲಿಕೃತ ಮೀನಿನ ಅಂಗಡಿಗಳನ್ನು ವಿರೋಧಿಸುತ್ತಾ ಬಂದಿರುವುದು ಇದೇ ಕಾರಣಕ್ಕಾಗಿ. ಈಗಲಾದರೂ ಸಂಬಂಧಪಟ್ಟ ಜಿಲ್ಲಾಡಳಿತ ಇಂತಹ ಮೀನಿನಂಗಡಿಗಳ ವಿರುದ್ಧ ಸೂಕ್ತ ಕ್ರಮ ಜರಗಿಸಬೇಕು ಮತ್ತು ಅನಧೀಕೃತವಾಗಿ ಕಾರ್ಯಾಚರಿಸುತ್ತಿರುವ ಶೀತಲೀಕರಣ ಮೀನಿನಂಗಡಿಗಳನ್ನು ನಿಷೇಧಿಸಬೇಕು. ಗ್ರಾಹಕರು ಕೂಡಾ ವಿವಿಧ ರಾಸಾಯನಿಕಗಳನ್ನು ಬಳಕೆ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಬೇಕು.

Advertisement

ಬೇರೆ ಬೇರೆ ಮೀನಿನ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ಹೆಚ್ಚಿದ್ದು, ನಮ್ಮ ಎಲ್ಲ ಮೀನು ಮಾರುಕಟ್ಟೆಗಳಲ್ಲಿ ಸಮುದ್ರದಿಂದ ತಂದಿರುವ ಮತ್ತು ಹೊಳೆಯಿಂದ ಹಿಡಿದ ತಾಜಾ ಮೀನು ಮಾರಾಟ ಮಾಡಲಾಗುತ್ತದೆ ಎಂದು ಬೇಬಿ ಸಾಲ್ಯಾನ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next