ಪ್ಯಾರೀಸ್ : ದಕ್ಷಿಣ ಫ್ರಾನ್ಸ್ ನಲ್ಲಿ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬರು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ರಿಗೆ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ.
ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪ್ರಸಾರ ಸಂಸ್ಥೆಗಳಾದ ಬಿ ಎಫ್ ಎಂ ಟಿವಿ ಮತ್ತು ಆರ್ ಎಂ ಸಿ ರೇಡಿಯೋ ವರದಿ ಮಾಡಿವೆ.
ಇದನ್ನೂ ಓದಿ : ಬಾಹ್ಯಾಕಾಶ ತಾಲೀಮು ನಡೆಸಿದ ಡ್ರ್ಯಾಗನ್ ಯುದ್ಧ ವಿಮಾನಗಳು : ಭಾರತೀಯ ಸೇನೆ ನಿಗಾ
ಕೋವಿಡ್ ಇಳಿಮುಖಗೊಂಡ ಕಾರಣ ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಲೆಂದು ಆಗ್ನೇಯ ಫ್ರಾನ್ಸ್ ನ ಡ್ರೋಮ್ ಪ್ರದೇಶಕ್ಕೆ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಭೇಟಿ ನೀಡಿದ್ದರು. ಕೋವಿಡ್ ನಂತರದ ಜನ ಜೀವನದ ಬಗ್ಗೆ ಮಾತಾಡುವ ಉದ್ದೇಶದಿಂದ ಅಲ್ಲಿನ ನಾಗರಿಕರು ಹಾಗೂ ವಿಶೇಷವಾಗಿ ವಿದ್ಯಾರ್ಥಿಗಳನ್ನು ಭೇಟಿಮಾಡಿದ್ದರು.
Related Articles
ಇದಾದ ನಂತರ ಬಿಗಿ ಭದ್ರತೆಯೊಂದಿಗೆ, ನೆರೆದಿದ್ದ ಜನರನ್ನು ಮಾತನಾಡಲು ಮುಂದಾದಾಗ ಜನರ ಗುಂಪಿನಲ್ಲಿದ್ದ ಒಬ್ಬಾತ, ಮ್ಯಾಕ್ರನ್ ಅವರಿಗೆ ಕಪಾಳ ಮೋಕ್ಷ ಮಾಡಿದ್ದಾನೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವೀಡಿಯೋದಲ್ಲಿ, ಮ್ಯಾಕ್ರನ್ ಜನರನ್ನು ಮಾತನಾಡಿಸಲು ಬಂದಾಗ, ಜನರ ಗುಂಪಿನಲ್ಲಿ ಹಸಿರು ಟೀ ಶರ್ಟ್ ಧರಿಸಿ, ಕನ್ನಡಕ ಹಾಗೂ ಮಾಸ್ಕ್ ಧರಿಸಿದ್ದ . ಆ ವ್ಯಕ್ತಿ “ಡೌನ್ ವಿಥ್ ಮ್ಯಾಕ್ರೋನಿಯಾ” ಎಂದು ಆ ವ್ಯಕ್ತ ಕೂಗುತ್ತಿರುವುದು ವಿಡಿಯೋದಲ್ಲಿ ಕೇಳಬಹುದು.
ಇದನ್ನೂ ಓದಿ : ರಾಜ್ಯದಲ್ಲಿ ಕೈಗಾರಿಕೆ ನಡೆಸುವ ಕುರಿತು ನಾಳೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ : ಶೆಟ್ಟರ್