Advertisement

ಇಂದಿನಿಂದ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿ‌: ಸಾವಿರ ವೀಕ್ಷಕರಿಗೆ ಪ್ರವೇಶ

12:52 PM Sep 27, 2020 | keerthan |

ಪ್ಯಾರಿಸ್‌: ರವಿವಾರದಿಂದ ಆರಂಭಗೊಳ್ಳಲಿರುವ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಪ್ರತೀ ದಿನದ ಪಂದ್ಯಗಳಿಗೆ ಸೀಮಿತ ಸಂಖ್ಯೆಯ ಪ್ರೇಕ್ಷಕರಿಗೆ ಪ್ರವೇಶ ನೀಡುವಂತೆ ಫ್ರಾನ್ಸ್‌ ಸರಕಾರ ಸೂಚಿಸಿದೆ.

Advertisement

ದೇಶದ ಕ್ರೀಡಾಕೂಟಗಳಿಗಾಗಿ ಫ್ರಾನ್ಸ್‌ ಸರಕಾರ ನೂತನ ಕೋವಿಡ್-19 ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಇದರಲ್ಲಿ ಪ್ರಮುಖ ಟೂರ್ನಿಯಾದ ಫ್ರೆಂಚ್‌ ಓಪನ್‌ಗೂ ಕೆಲವು ನಿರ್ಬಂಧಗಳನ್ನು ಹೇರಲಾಗಿದೆ.

ಅದರಂತೆ, “ರೊಲ್ಯಾಂಡ್‌ ಗ್ಯಾರೋಸ್‌’ನ ವಿವಿಧ ಟೆನಿಸ್‌ ಅಂಕಣಗಳಲ್ಲಿ ನಡೆಯಲಿರುವ ಫ್ರೆಂಚ್‌ ಓಪನ್‌ ಕೂಟದ ಪಂದ್ಯಗಳನ್ನು ನೋಡಲು ಒಂದು ದಿನಕ್ಕೆ 1,000 ಮಂದಿ ಪ್ರೇಕ್ಷಕರಿಗೆ ಮಾತ್ರ ಅವಕಾಶ ಸಿಗಲಿದೆ.

ಇದನ್ನೂ ಓದಿ: ರಾಹುಲ್ Vs ಸ್ಮಿತ್:  ರಾಜಸ್ಥಾನಕ್ಕೆ ಬಟ್ಲರ್‌ ಬಲ; ಪಂಜಾಬ್‌ ನಿರಾಳ

ಈ ಕುರಿತಂತೆ ವಿವರಣೆ ನೀಡಿರುವ ಫ್ರಾನ್ಸ್‌ ಪ್ರಧಾನಿ ಜೀನ್‌ ಕ್ಯಾಸ್ಟೆಕ್ಸ್‌,  “ಕ್ರೀಡಾ ಚಟುವಟಿಕೆಗಳಿಗೆ ವಿಧಿಸಲಾಗಿರುವ ನಿರ್ಬಂಧಗಳು ಫ್ರೆಂಚ್‌ ಓಪನ್‌ಗೂ ಅನ್ವಯಿಸುತ್ತವೆ. ಮುನ್ನೆಚ್ಚರಿಕೆ ಕ್ರಮವಾಗಿ, ಫ್ರೆಂಚ್‌ ಓಪನ್‌ ಕೂಟದ ದಿನದ ಪ್ರೇಕ್ಷಕರ ಸಂಖ್ಯೆಯನ್ನು 5,000ದಿಂದ 1,000ಕ್ಕೆ ಇಳಿಸಲಾಗಿದೆ’ ಎಂದಿದ್ದಾರೆ.

Advertisement

ವರ್ಷಾಂತ್ಯದ ಕೂಟ

ಸಾಮಾನ್ಯವಾಗಿ ಫ್ರೆಂಚ್‌ ಓಪನ್‌ ವರ್ಷದ ದ್ವಿತೀಯ ಗ್ರ್ಯಾನ್‌ಸ್ಲಾಮ್‌ ಪಂದ್ಯಾವಳಿ ಎನಿಸಿಕೊಳ್ಳುತ್ತಿತ್ತು. ಆದರೆ ಈ ಬಾರಿ ಕೋವಿಡ್19 ಸೋಂಕಿನಿಂದ ವರ್ಷಾಂತ್ಯದ ಗ್ರ್ಯಾನ್‌ಸ್ಲಾಮ್‌ ಕೂಟವಾಗಿದೆ. ವರ್ಷದ ಅಂತಿಮ ಕೂಟವಾಗಬೇಕಿದ್ದ ಯುಎಸ್‌ ಓಪನ್‌ ಈ ಬಾರಿಯ ದ್ವಿತೀಯ ಟೂರ್ನಿ ಎನಿಸಿತು. ಸಕಾಲದಲ್ಲಿ ನಡೆದ ಗ್ರ್ಯಾನ್‌ಸ್ಲಾಮ್‌ ಕೂಟವೆಂದರೆ ಆಸ್ಟ್ರೇಲಿಯನ್‌ ಓಪನ್‌ ಮಾತ್ರ. ಈ ವರ್ಷದ ವಿಂಬಲ್ಡನ್‌ ಕೂಟವನ್ನು ರದ್ದುಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next