ಗಾಗಿ ರವಿವಾರ ಸಂಜೆ ಸೆಣಸಲಿದ್ದಾರೆ.
Advertisement
ಮೊದಲ ಸೆಮಿಫೈನಲ್‌ನಲ್ಲಿ ನೊವಾಕ್ ಜೊಕೋವಿಕ್ 6-3, 7-5, 6-1, 6-1 ರಿಂದ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್ ಅವರನ್ನು ಮಣಿಸಿದರು. ದ್ವಿತೀಯ ಸೆಟ್ ಗೆದ್ದು ಪಂದ್ಯವನ್ನು ಸಮಬಲಕ್ಕೆ ತಂದ ಬಳಿಕ ಅಲ್ಕರಾಜ್ “ಕ್ರ್ಯಾಂಪ್ಸ್’ ಸಮಸ್ಯೆಗೆ ಸಿಲುಕಿದರು. ಹೀಗಾಗಿ ಅವರಿಗೆ ಪೂರ್ಣ ಸಾಮರ್ಥ್ಯವನ್ನು ತೋರಲಾಗಲಿಲ್ಲ. ಆದರೂ 3 ಗಂಟೆ, 23 ನಿಮಿಷಗಳ ಕಾಲ ಹೋರಾಟ ನಡೆಸಿದರು.
Related Articles
Advertisement
ಇದು 36 ವರ್ಷದ ನೊವಾಕ್ ಜೊಕೋವಿಕ್ ಅವರ 34ನೇ ಗ್ರ್ಯಾನ್‌ಸ್ಲಾಮ್ ಫೈನಲ್ ಹಾಗೂ 7ನೇ ಫ್ರೆಂಚ್ ಓಪನ್ ಫೈನಲ್ ಆಗಿದೆ. ರವಿವಾರ ರೂಡ್ ಅವರನ್ನು ಮಣಿಸಿದರೆ ಪುರುಷರ ಸಿಂಗಲ್ಸ್‌ನಲ್ಲಿ ಸರ್ವಾಧಿಕ 23 ಗ್ರ್ಯಾನ್‌ಸ್ಲಾಮ್ ಗೆದ್ದ ದಾಖಲೆ ಜೊಕೋ ಅವರದ್ದಾಗಲಿದೆ. ಸದ್ಯ ಜೊಕೋ ಮತ್ತು ರಫೆಲ್ ನಡಾಲ್ ತಲಾ 22 ಗ್ರ್ಯಾನ್‌ಸ್ಲಾಮ್ ಗೆದ್ದು ಜಂಟಿ ಅಗ್ರಸ್ಥಾನಿಯಾಗಿದ್ದಾರೆ.
ರವಿವಾರ ಫ್ರೆಂಚ್ ಓಪನ್ ಚಾಂಪಿ ಯನ್ ಆಗಿ ಮೂಡಿಬಂದರೆ ಜೊಕೋ ವಿಕ್ ಮರಳಿ ವಿಶ್ವದ ನಂ.1 ಟೆನಿಸಿಗನೆಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ. ಸದ್ಯ ಈ ಪಟ್ಟದಲ್ಲಿರುವವರು ಕಾರ್ಲೋಸ್ ಅಲ್ಕರಾಜ್.
ಜೊಕೋವಿಕ್ 7 ಸಲ “ರೊಲ್ಯಾಂಡ್ ಗ್ಯಾರೋಸ್’ ಫೈನಲ್ ತಲುಪಿದರೂ ಗೆದ್ದದ್ದು ಕೇವಲ ಎರಡು ಸಲ. 2016ರಲ್ಲಿ ಆ್ಯಂಡಿ ಮರ್ರೆ ಅವರನ್ನು ಮಣಿಸಿದರೆ, 2021ರಲ್ಲಿ ಸ್ಟೆಫನಸ್ ಸಿಸಿಪಸ್ ಅವರನ್ನು ಕೆಡವಿ ಪ್ರಶಸ್ತಿ ಎತ್ತಿದ್ದರು.
ಈಗಿನ ಲೆಕ್ಕಾಚಾರದ ಪ್ರಕಾರ ಜೊಕೋವಿಕ್ ಅವರೇ ನೆಚ್ಚಿನ ಆಟಗಾರ. ಕ್ಯಾಸ್ಪರ್ ರೂಡ್ ವಿರುದ್ಧ ಆಡಿದ ನಾಲ್ಕೂ ಪಂದ್ಯಗಳಲ್ಲಿ ಅವರು ಜಯ ಸಾಧಿಸಿದ ದಾಖಲೆ ಹೊಂದಿದ್ದಾರೆ.