Advertisement
ಪ್ರಸಕ್ತ ನಡೆಯುತ್ತಿರುವ ಫ್ರೆಂಚ್ ಓಪನ್ ಮಹಿಳಾ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಕೆನಿನ್ ಜೆಕ್‌ನ ಪೆಟ್ರಾ ಕ್ವಿಟೋವಾ ವಿರುದ್ಧ 6-4, 7-5ರ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಕೆನಿನ್, ಪೋಲಂಡಿನ ಹದಿಹರೆಯದ ಇಗಾ ಸ್ವಿಯಾಟೆಕ್ ಅವರ ಸವಾಲು ಸ್ವೀಕರಿಸಲಿದ್ದಾರೆ.
ಪೋಲಂಡಿನ 19 ವರ್ಷದ ಇಗಾ ಸ್ವಿಯಾಟೆಕ್ ಇಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ಸೆಮಿಫೈನಲ್‌ನಲ್ಲಿ ನಾದಿಯ ಪೊಡೊರೋಸ್ಕಾ ವಿರುದ್ಧ 6-2, 6-1 ನೇರ ಸೆಟ್‌ಗಳ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದ್ದಾರೆ. ಇದರೊಂದಿಗೆ ಫ್ರೆಂಚ್ ಓಪನ್ ಫೈನಲ್‌ಗೇರಿದ ಪೋಲಂಡಿನ ಮೊದಲ ವನಿತೆ ಎಂಬ ಗೌರವಕ್ಕೆ ಸ್ವಿಯಾಟೆಕ್ ಪಾತ್ರರಾಗಿದ್ದಾರೆ.