ಪ್ಯಾರಿಸ್: ಕ್ಲೇ ಕೋರ್ಟ್ ಕಿಂಗ್ ರಫೆಲ್ ನಡಾಲ್ ಅವರ ಫ್ರೆಂಚ್ ಓಪನ್ ಆಟ ಮೊದಲ ಸುತ್ತಿನಲ್ಲೇ ಕೊನೆಗೊಂಡಿದೆ. ಅವರನ್ನು ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ 6-3, 7-6 (7-5), 6-3 ಅಂತರದಿಂದ ಪರಾಭವಗೊಳಿಸಿದರು.
2015ರ ಚಾಂಪಿಯನ್ ಆಟಗಾರ ಆ್ಯಂಡಿ ಮರ್ರೆ ಅವರನ್ನು 3 ಗ್ರ್ಯಾನ್‌ಸ್ಲಾಮ್ ವಿಜೇತ ಟೆನಿಸಿಗ ಸ್ಟಾನಿಸ್ಲಾಸ್ ವಾವ್ರಿಂಕ 6-4, 6-4, 6-2 ನೇರ ಸೆಟ್‌ಗಳಿಂದ ಹಿಮ್ಮೆಟ್ಟಿಸಿದರು. ಬಳಿಕ ಮರ್ರೆ ಅವರನ್ನು “ಎ ಗ್ರೇಟ್ ಚಾಂಪಿಯನ್’ ಎಂದು ಪ್ರಶಂಸಿಸಿದರು.
ಇದು 37 ವರ್ಷದ ಮರ್ರೆ ಅವರ ಕೊನೆಯ ಫ್ರೆಂಚ್ ಓಪನ್ ಟೂರ್ನಿ ಆಗಿತ್ತು. ವಿಂಬಲ್ಡನ್ ಮತ್ತು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅವರು ಕೊನೆಯ ಸಲ ಕಣಕ್ಕಿಳಿಯಲಿದ್ದಾರೆ.
ಸೋಮವಾರದ ಪಂದ್ಯಗಳಲ್ಲಿ ಸ್ಟೆಫನಸ್ ಸಿಸಿಪಸ್, ಜಾನಿಕ್ ಸಿನ್ನರ್ ಕೂಡ ಗೆಲುವಿನ ಆರಂಭ ಪಡೆದಿದ್ದಾರೆ. ಸಿಸಿಪಸ್ ಹಂಗೇರಿಯ ಮಾರ್ಟನ್ ಫುಕೊÕàವಿಕ್ಸ್ ಅವರನ್ನು 7-6 (9-7), 6-4, 6-1ರಿಂದ; ಸಿನ್ನರ್ ಅಮೆರಿಕದ ಕ್ರಿಸ್ಟೋಫರ್ ಯುಬ್ಯಾಂಕ್ಸ್ ಅವರನ್ನು 6-3, 6-3, 6-4ರಿಂದ ಪರಾಭವಗೊಳಿಸಿದರು.
ವನಿತಾ ವಿಭಾಗ
ವನಿತಾ ಸಿಂಗಲ್ಸ್‌ನಲ್ಲಿ 4ನೇ ಫ್ರೆಂಚ್ ಓಪನ್ ಮೇಲೆ ಕಣ್ಣಿಟ್ಟಿರುವ ನಂ.1 ಆಟಗಾರ್ತಿ ಇಗಾ ಸ್ವಿಯಾಟೆಕ್ ಫ್ರಾನ್ಸ್‌ನ ಲಿಯೋಲಿಯಾ ಜೀನ್‌ಜಿàನ್ ವಿರುದ್ಧ 6-1, 6-2 ಜಯ ಸಾಧಿಸಿದರು. 8ನೇ ಶ್ರೇಯಾಂಕದ ಓನ್ಸ್ ಜೆಬ್ಯೂರ್ ಅಮೆರಿಕದ ಸಾಶಿಯಾ ವಿಕರಿ ವಿರುದ್ಧ 6-3, 6-2ರಿಂದ ಗೆದ್ದು ಬಂದರು.