ಗ್ರೆನೋಬಲ್: ಫ್ರಾನ್ಸ್‌ನ ಮೌಂಟ್ ಬ್ಲಾಂಕ್ ಪರ್ವತ ಪ್ರದೇಶದಲ್ಲಿ ಸಿಕ್ಕಿದ್ದ ನೀಲಮಣಿ, ಪಚ್ಚೆ, ಮಾಣಿಕ್ಯಗಳನ್ನು ನೀಡುವ ಅಗತ್ಯವಿಲ್ಲ ಎಂದು ಚಾರಣಿಗರೊಬ್ಬರಿಗೆ ಸ್ಥಳೀಯ ಸರ್ಕಾರ ಆದೇಶ ನೀಡಿದೆ.
ಮೌಂಟ್ ಬ್ಲಾಂಕ್ ಪರ್ವತ ಪ್ರದೇಶಗಳಲ್ಲಿ 1950 ಮತ್ತು 1966ರಲ್ಲಿ ಏರ್ ಇಂಡಿಯಾದ ಎರಡು ವಿಮಾನಗಳು ಅಪಘಾತಕ್ಕೀಡಾಗಿದ್ದವು.
ಐವತ್ತು ವರ್ಷಗಳ ಬಳಿಕ ಅಂದರೆ, 2013ರಲ್ಲಿ ಆ ಪ್ರದೇಶಕ್ಕೆ ಚಾರಣಕ್ಕಾಗಿ ತೆರಳಿದ್ದ ಪರ್ವತಾರೋಹಿಗೆ ಎರಡು ಪೆಟ್ಟಿಗೆಗಳಲ್ಲಿ ತಲಾ 1,69,000 ಡಾಲರ್ ಮೌಲ್ಯದ ನೀಲಮಣಿ, ಪಚ್ಚೆ, ಮಾಣಿಕ್ಯಗಳ ಪೆಟ್ಟಿಗೆಗಳು ಲಭಿಸಿದ್ದವು.
ಅದನ್ನು ಫ್ರಾನ್ಸ್‌ನ ಚಮೋನಿಕ್ಸ್ ನಗರದ ಆಡಳಿತಕ್ಕೆ ಒಪ್ಪಿಸಿದ್ದರು.
ಇದನ್ನೂ ಓದಿ:ಹೆಲಿಕಾಪ್ಟರ್ ಪತನ: ಪ್ರತ್ಯಕ್ಷದರ್ಶಿಯ ಮೊಬೈಲ್ ಫೊರೆನ್ಸಿಕ್ ಪರೀಕ್ಷೆಗೆ
ಇದಾದ ಬಳಿಕ ಮೌಂಟ್ ಬ್ಲಾಂಕ್ ಪರ್ವತ ಪ್ರದೇಶಕ್ಕೆ ಚಾರಣಕ್ಕಾಗಿ ತೆರಳಿದವರಿಗೆ ಒಂದಲ್ಲ ಒಂದು ವಿಶೇಷ ವಸ್ತುಗಳು ಸಿಗುತ್ತಲೇ ಇದ್ದವು.