Advertisement

ಫ್ರೆಂಚ್‌ ಬಿರಿಯಾನಿ ಮಾಡೋದಕ್ಕೆ ರೆಡಿಯಾದ ಡ್ಯಾನಿಶ್‌ –ಪನ್ನಗ ಜೋಡಿ

01:37 PM May 11, 2020 | Suhan S |

ಪುನೀತ್‌ ರಾಜ್‌ಕುಮಾರ್‌ ಒಡೆತನದ ಪಿಆರ್‌ ಕೆ ಪ್ರೊಡಕ್ಷನ್ಸ್‌ ಬ್ಯಾನರ್‌ ನಲ್ಲಿ ನಿರ್ಮಾಣವಾಗುತ್ತಿರುವ ಫ್ರೆಂಚ್‌ ಬಿರಿಯಾನಿ ಚಿತ್ರ ಕೊನೆಯ ಹಂತಕ್ಕೆ ತಲುಪಿದೆ. ಅಂದಹಾಗೆ ಈ ಚಿತ್ರ ನೇರವಾಗಿ ಪಿಆರ್‌ಕೆ ಪ್ರೊಡಕ್ಷನ್‌ನಿಂದ ಒಟಿಟಿ ಪ್ಲಾಟ್‌ಫಾರ್ಮ್ನಲ್ಲಿ ಬಿಡುಗಡೆಯಾಗುತ್ತಿದೆ ಎನ್ನುವುದು ಸದ್ಯದ ಸುದ್ದಿ.  ಹಾಗೇನಾದರೂ ಆದರೆ ಒಟಿಟಿ ಪ್ಲಾಟ್‌ ಫಾರ್ಮ್ ನಲ್ಲಿ ಬಿಡುಗಡೆಯಾದ ಮೊದಲ ಚಿತ್ರ ಎಂಬ ಖ್ಯಾತಿಗೆ ಫ್ರೆಂಚ್‌ ಬಿರಿಯಾನಿ ಪಾತ್ರವಾಗಲಿದೆ.

Advertisement

ಪನ್ನಗ ಭರಣ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿದೆ. ಇದು ಶಿವಾಜಿನಗರ ಆಟೋ ಡ್ರೈವರ್‌ ಜತೆಗೆ ಫ್ರೆಂಚ್‌ ವಲಸಿಗನ 3 ದಿನಗಳ ಪ್ರಯಾಣದ ಕಥೆ ಹೊಂದಿದೆ. ಸಾಲ್‌ ಯೂಸುಫ್ ಮತ್ತು ಡ್ಯಾನಿಶ್‌ ಸೇಠ್ ಈ ಪಾತ್ರಗಳನ್ನು ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ದಿಶಾ ಮದನ್‌, ನಾಗಭೂಷಣ್‌, ಸಿಂಧು ಶ್ರೀನಿವಾಸಮೂರ್ತಿ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಪನ್ನಗ ಅವರ ವೈಯಕ್ತಿಕ ಅನುಭವವನ್ನು ಆಧರಿಸಿದ ಈ ಕಥೆಯನ್ನು ಅವಿನಾಶ್‌ ಬಾಳಕೇಳ ಬರೆದಿದ್ದರೆ, ಸಂಗೀತವು ವಾಸುಕಿ ವೈಭವ್‌ ಅವರದಾಗಿದೆ. ಕಾರ್ತಿಕ್‌ ಛಾಯಾಗ್ರಹಣ ನೆರವೇರಿಸಿದ್ದಾರೆ. ಸದ್ಯ ಈ ಚಿತ್ರದ ಬಿಡುಗಡೆಯ ಬಗ್ಗೆ ಪ್ರೊಡಕ್ಷನ್‌ ಹೌಸ್‌ ಮತ್ತು ಸ್ಟ್ರಿಮಿಂಗ್‌ ಚಾನೆಲ್‌ ನಡುವೆ ಚರ್ಚೆಗಳು ನಡೆಯುತ್ತಿವೆ, ಮತ್ತು ಎಲ್ಲವೂ ಯೋಜನೆಯ ಪ್ರಕಾರ ನಡೆದರೆ, ನಾವು ಜೂನ್‌ನಲ್ಲಿ ಡಿಜಿಟಲ್‌ ಮಾಧ್ಯಮದಲ್ಲಿ ಚಿತ್ರ ಬಿಡುಗಡೆ ಮಾಡಲಿದ್ದೇವೆ ಎಂದು ನಿರ್ದೇಶಕ ಪನ್ನಗ ಭರಣ ಹೇಳಿದ್ದಾರೆ.

ಲಾಕ್‌ಡೌನ್‌ ಸಮಯದಲ್ಲಿ ಒಟಿಟಿ ಪ್ಲಾಟ್‌ಫಾರ್ಮ್ ವೀಕ್ಷಕರು ಹೆಚ್ಚುತ್ತಿರುವ ಕಾರಣ. ಈ ರೀತಿಯ ಸಾಂಕ್ರಾಮಿಕ ಸಮಯದಲ್ಲಿ ಜನರು ಮನರಂಜನೆಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡಬೇಕಿದೆ ಎನ್ನುತ್ತಾರೆ ಪನ್ನಗ.

Advertisement

Udayavani is now on Telegram. Click here to join our channel and stay updated with the latest news.

Next