Advertisement
ವಾರಾಂತ್ಯ, ರಜೆ ದಿನಗಳು, ಹಬ್ಬ, ಉತ್ಸವದ ಸಂದರ್ಭಗಳಲ್ಲಿ ಸಾಕಷ್ಟು ವಾಹನಗಳ ಸಂಚಾರ ಇರುವುದರಿಂದ ದೊಡ್ಡ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಸಂಭವಿಸಿ ಸಮಸ್ಯೆಗೆ ಕಾರಣವಾಗುತ್ತಿತ್ತು. ಸಂಚಾರ ಪೊಲೀಸರು, ಹೋಂಗಾರ್ಡ್ಸ್ ಟ್ರಾಫಿಕ್ ನಿರ್ವಹಣೆಯಲ್ಲಿ ಹೈರಾಣಾಗಿದ್ದರು. ಸಮೀಪದ ರಿಕ್ಷಾ ನಿಲ್ದಾಣದ ಚಾಲಕರು ಸಂಚಾರ ನಿಯಂತ್ರಣದಲ್ಲಿ ಪೊಲೀಸರಿಗೆ ಸಹಕಾರ ನೀಡುತ್ತಿದ್ದರು. ಅಂಬಾಗಿಲಿನಿಂದ ಉಡುಪಿ ಕಡೆಗೆ ಆಗಮಿಸುವ ಮತ್ತು ಉಡುಪಿ ಕಡೆಯಿಂದ ಗುಂಡಿಬೈಲು, ದೊಡ್ಡಣಗುಡ್ಡೆ ಕಡೆಗೆ ಹೋಗುವ, ಉಡುಪಿ ಸಿಟಿ ಬಸ್ ನಿಲ್ದಾಣ ಕಡೆಯಿಂದ ಮಣಿಪಾಲ, ಕೃಷ್ಣಮಠ ಕಡೆಗೆ ಸಾಗುವ-ಮಣಿಪಾಲದಿಂದ ಉಡುಪಿ ಸಿಟಿ ಬಸ್ ನಿಲ್ದಾಣ, ಅಂಬಾಗಿಲು -ಕೃಷ್ಣಮಠ ಕಡೆಗೆ ಸಾಗುವ ಪ್ರಮುಖ ವೃತ್ತವಾಗಿರುವುದು ಕಲ್ಸಂಕ ಜಂಕ್ಷನ್ ಇತ್ತೀಚೆಗೆ ಇಂದ್ರಾಣಿ ನದಿಯ ಸೇತುವೆ ವಿಸ್ತರಣೆಗೊಳಿಸಿದ್ದರೂ, ಸಂಚಾರ ದಟ್ಟಣೆಗೆ ಮಾತ್ರ ಪರಿಹಾರ ಸಿಕ್ಕಿರಲಿಲ್ಲ.
Related Articles
Advertisement
ಕಲ್ಸಂಕ ವೃತ್ತದಲ್ಲಿ ಟ್ರಾಫಿಕ್ ಸಮಸ್ಯೆ ಬಗ್ಗೆ ಇದರಿಂದಾಗಿ ಸವಾರರಿಗೆ ತೊಂದರೆಯಾಗುತ್ತಿರುವ ರೀತಿ, ಅವೈಜ್ಞಾ ನಿಕ ವೃತ್ತ ನಿರ್ಮಾಣಕ್ಕೆ ಸಂಬಂಧಿಸಿ ವಿಸ್ತೃತ ವರದಿಯನ್ನು ಉದಯವಾಣಿ ಸರಣಿರೂಪದಲ್ಲಿ ಪ್ರಕಟಿಸಿ ಗಮನ ಸೆಳೆದಿತ್ತು. ಸಂಚಾರ ಪೊಲೀಸ್ ಠಾಣೆ ಉಪ ನಿರೀಕ್ಷಕ ಖಾದರ್ ಅವರು ಸಲಹೆ ನೀಡಿದ್ದ ಪ್ರಮುಖ ವೃತ್ತಗಳಲ್ಲಿ ಫ್ರೀ-ಲೆಫ್ಟ್ ನಿಂದಾಗುವ ಅನುಕೂಲಗಳ ಬಗ್ಗೆಯೂ ವರದಿಯಲ್ಲಿ ಉಲ್ಲೇಖೀಸಲಾಗಿತ್ತು. ಫ್ರೀಲೆಫ್ಟ್ ನಿರ್ಮಾಣಗೊಂಡ ಬಳಿಕ ಸ್ವಲ್ಪ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ತಗ್ಗಲಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಸರಕು ತುಂಬಿದ ವಾಹನಗಳ ಕಿರಿಕಿರಿ
ಕಲ್ಸಂಕ ವೃತ್ತದಲ್ಲಿ ತೆಂಕಪೇಟೆ ರಸ್ತೆಯಲ್ಲಿ ಘನ ವಾಹನಗಳು, ಸಣ್ಣ ಟ್ರಕ್‌ಗಳು ಬೆಳಗ್ಗೆ, ಸಂಜೆ ಹೊತ್ತಿನಲ್ಲಿ ಸಂಚಾರ ಸಮಸ್ಯೆ ಉಂಟು ಮಾಡುತ್ತಿರುತ್ತವೆ. ಕೆಲವು ಟ್ರಕ್, ಲಾರಿಗಳು ಪಾದಚಾರಿ ಮಾರ್ಗದಲ್ಲಿ ನಿಲ್ಲಿಸಿ ಸರಕು ಸಾಮಗ್ರಿಗಳನ್ನು ಲೋಡ್, ಅನ್ ಲೋಡ್ ಮಾಡುವುದರಿಂದ ಪಾದಚಾರಿಗಳಿಗೆ ದ್ವಿಚಕ್ರವಾಹನ ಸಾವರರಿಗೆ ಕಿರಿಕಿರಿ ಉಂಟುಮಾಡುತ್ತಿವೆ ಎಂಬ ಆರೋಪ ಕೇಳಿಬರುತ್ತಿವೆ.