1870 -1968
ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಪ್ರತಿಯೊಬ್ಬರೂ ಒಂದೊಂದು ದಾರಿ ಹಿಡಿದಿದ್ದರು. ಅದರಲ್ಲಿ ಬಿಜಾಪುರ ಜಿಲ್ಲೆಯ ಜೈನಾಪುರದ ಆಗರ್ಭ ಶ್ರೀಮಂತ ಕುಟುಂಬದ ಸೊಸೆ ಕಾಶಿಬಾಯಿ ರೋಲ್ಸ್‌ರಾಯ್ ಕಾರನ್ನು ಹೊಂದಿದ್ದರು. ಒಮ್ಮೆ ಬ್ರಿಟಿಷ್ ಅಧಿಕಾರಿಯೊಬ್ಬ ಜಿಲ್ಲೆಗೆ ಬರುವವನಿದ್ದ. ಆಗ ಅಲ್ಲಿನ ಡಿಸಿ ಈ ಕಾರನ್ನು ಕೊಡುವಂತೆ ಕಾಶಿಬಾಯಿ ಅವರಿಗೆ ಕೇಳಿಕೊಂಡಿದ್ದ. ಈಕೆ ಬ್ರಿಟಿಷ್ ಅಧಿಕಾರಿಗಾಗಿ ತನ್ನ ಕಾರು ಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಈ ಬಗ್ಗೆ ಸಿಟ್ಟಾದ ಡಿಸಿ ಕಾರಿನ ನೋಂದಣಿ ಸಂಖ್ಯೆಯನ್ನೇ ರದ್ದು ಮಾಡಿದ್ದ. ಬಳಿಕ ಆಕೆ ಅದನ್ನು ಓಡಿಸದೆ ಸಗಣಿ ಬೆರಣಿ ತಟ್ಟಲು ಬಳಸಿಕೊಂಡಿದ್ದರು. ಸ್ವಾತಂತ್ರ್ಯ ಸಿಕ್ಕ ಬಳಿಕ ಅದನ್ನು ಉಪಯೋಗಿಸಿದರು.
Advertisement
ಮೈಲಾರ ಮಹದೇವಪ್ಪ1911 -1943
ಮಹಾತ್ಮಾ ಗಾಂಧೀಜಿ ಅವರು ನಡೆಸಿದ ದಂಡಿ ಸತ್ಯಾಗ್ರಹದಲ್ಲಿ ಭಾಗಿಯಾದ ಕರ್ನಾಟಕದ ಏಕೈಕ ಪ್ರತಿನಿಧಿ ಇವರು.
ಮೋಟೆಬೆನ್ನೂರಿನ ಇವರು ಮಹದೇವ ಎಂಬ ಹೆಸರಿನಿಂದಲೂ ಖ್ಯಾತರಾಗಿ ದ್ದರು. ಬ್ರಿಟಿಷರ ವಿರುದ್ಧ ಸಿಡಿದೆದ್ದಿ ದ್ದರು. ದೇಗುಲವೊಂದರಿಂದ ಬ್ರಿಟಿಷರು ಆದಾಯವನ್ನು ತೆಗೆದು ಕೊಂಡು ಹೋಗುವಾಗ ಅದನ್ನು ಲೂಟಿ ಮಾಡಲು ಇವರ ತಂಡ ಯತ್ನಿಸಿತ್ತು. ಆ ಸಂದರ್ಭ, ಅಂದರೆ, 1943ರ ಎಪ್ರಿಲ್ 1ರಂದು ಬ್ರಿಟಿಷರ ಗುಂಡಿನ ದಾಳಿಗೆ ಇವರು ಬಲಿಯಾದರು.
1897 -1927
ಲಾಲಾ ಹರ್ ದಯಾಲ್ ಅವರು ಭಾರತದಲ್ಲಿ ಹುಟ್ಟಿದರಾದರೂ, ಜೀವನದ ಬಹು ಸಮಯವನ್ನು ಅಮೆರಿಕ, ಯುರೋಪ್ ಸೇರಿ ಅನೇಕ ರಾಷ್ಟ್ರಗಳನ್ನು ಸುತ್ತುವಲ್ಲೇ ಕಳೆದರು. ಅವರು ಯಾವಾಗಲೂ ಭಾರತದ ಸಂಸ್ಕೃತಿ ಮತ್ತು ಸ್ವಾತಂತ್ರ್ಯಕ್ಕಾಗಿ ದೇಶದ ಆಕಾಂಕ್ಷೆಯನ್ನು ಪ್ರಮುಖವಾಗಿ ತೋರ್ಪಡಿಸುತ್ತ ಬಂದರು. ಅವರಿಗೆ ಅಮೆರಿಕದಲ್ಲಿ ಅರಾಜಕತಾವಾದಿ ಗುಂಪುಗಳ ಸ್ನೇಹವಿತ್ತು. ಹಾಗೆಯೇ ಅವರು ಭಾರತೀಯ ಆಕಾಂಕ್ಷೆ ಮತ್ತು ಸಂಸ್ಕೃತಿಯ ಬಗ್ಗೆ ಬರವಣಿಗೆ ಮಾಡಿದರು. ವಾಂಚಿನಾಥನ್ ಅಯರ್
1886-1911
ದೇಗುಲದ ಲೆಕ್ಕ ಪರಿಶೋಧಕರಾಗಿ ನೇಮಕವಾಗಿದ್ದ ಇವರು ನೀಲಕಂಠ ಬ್ರಹ್ಮಚಾರಿ ಸ್ಥಾಪಿಸಿದ ಭಾರತ್ ಮಾತಾ ಸಂಘಕ್ಕೆ ಸೇರಿದರು. ಇವರು ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮ ಜೀವನ ಮುಡಿಪಿಟ್ಟರು. ಪರಿಣಾಮ ತಿರು ನೆಲ್ವೇಲಿಯಲ್ಲಿ ಜಿಲ್ಲಾಧಿಕಾರಿಯಾಗಿದ್ದ ರಾಬರ್ಟ್ ಅಶೆಯನ್ನು ಮಣಿಯಾಂಚಿಯಲ್ಲಿ ಕೊಂದು ಸ್ವಾತಂತ್ರ್ಯ ಹೋರಾಟದಲ್ಲಿ ಮಡಿದರು.
Related Articles
1883 – 1915
ಇವರು ಗದ್ದಾರ್ ದಂಗೆಯ ಭಾಗವಾಗಿದ್ದರು. ಬ್ರಿಟಿಷರ ಸೇನೆ ವಿರುದ್ಧ ದೇಶದ ನಾನಾ ಭಾಗಗಳಲ್ಲಿ ಹೋರಾಟ, ದಾಳಿ ನಡೆಸಿದರು. ಮೊದಲನೇ ವಿಶ್ವ ಯುದ್ಧದ ವೇಳೆ ಲಾಹೋರ್ ಸಂಚು ಪ್ರಕರಣದಲ್ಲಿ ಇವರು ಬಂಧನಕ್ಕೊಳಗಾದರು. 1915, ಮಾ.27ರಂದು ಇವರನ್ನು ನೇಣುಗಂಬಕ್ಕೆ ಏರಿಸಿದರು.
Advertisement
ಕಾರ್ನಾಡ್ ಸದಾಶಿವರಾಯರು 1881 – 1937
ಕರ್ನಾಟಕದ ಅತ್ಯಂತ ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದ ಕಾರ್ನಾಡ್ ಸದಾಶಿವರಾಯರು, ಸ್ವಾತಂತ್ರ್ಯ ಹೋರಾಟಕ್ಕಾಗಿ ಮಹಿಳೆಯರನ್ನು ಒಗ್ಗೂಡಿಸಿದ್ದರು. ಇವರ ಮಹಿಳಾ ಸಭಾ ಅತ್ಯಂತ ಸಕ್ರಿಯವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿತ್ತು. ವಿಶೇಷವೆಂದರೆ, ಇವರು ತಮ್ಮ ಸಂಪೂರ್ಣ ಆಸ್ತಿಯನ್ನು ಸ್ವಾತಂತ್ರ್ಯ ಹೋರಾಟಕ್ಕೆ ಮತ್ತು ಬಡವರ ಏಳಿಗೆಗಾಗಿ ವಿನಿಯೋಗಿಸಿದ್ದರು. ಅಷ್ಟೇ ಅಲ್ಲ, ಇವರ ಪುತ್ರಿ ಸುಗುಣಾ ಅವರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಮಲ್ಪೆ ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು. 15 ತಿಂಗಳು ಜೈಲುವಾಸವನ್ನೂ ಅನುಭವಿಸಿದ್ದರು. ಖುದೀರಾಮ್ ಬೋಸ್
1889- 1908
1908ರಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ನೇಣುಗಂಬವನ್ನೇರಿದ ಯುವಕ ಖುದೀರಾಮ್ ಬೋಸ್. ಕಿಂಗ್ಸ್ ಪೋರ್ಡ್ ಎಂಬ ಬ್ರಿಟಿಷ್‌ನ್ಯಾಯಾಧೀಶ ಕ್ರಾಂತಿಕಾರಿಗಳ ವಿರುದ್ಧ ಭೀಕರವಾದ ಶಿಕ್ಷೆಗಳನ್ನು ವಿಧಿಸುತ್ತಿದ್ದ. ಇವರನ್ನು ಕೊಲ್ಲಬೇಕು ಎಂದು ಕ್ರಾಂತಿಕಾರಿ ತಂಡ ನಿರ್ಧರಿಸಿತು. ಖುದೀ ರಾಮ್, ಸತ್ಯೇಂದ್ರನಾಥ ಬೋಸ್ ಮತ್ತು ಪ್ರಫುಲ್ಚಾಕಿ ಈ ಮೂವರು ಮುಜಾಪುರದಲ್ಲಿ ಕಿಂಗ್ಸ್ ಪೋರ್ಡ್ ಚಲನವಲನ ಗಳನ್ನು ಗಮನಿಸ ತೊಡಗಿದರು. ಒಮ್ಮೆ ಕ್ಲಬ್‌ನಿಂದ ಹೊರಬಂದು ತನ್ನ ಕಾರಿನಲ್ಲಿ ತೆರಳುವಾಗ ಕ್ರಾಂತಿಕಾರರ ತಂಡ ಕಾರನ್ನು ಸ್ಫೋಟಿ ಸಿತು. ಆದರೆ ಆ ವಾಹನದಲ್ಲಿ ಫೋರ್ಡ್ ಇರಲಿಲ್ಲ. ಇಬ್ಬರು ಯುವತಿಯರು ಸಾವಿಗೀಡಾಗಿದ್ದರು. ಈ ಮುಜಾಪುರ ಸ್ಫೋಟ ಬ್ರಿಟಿಷರ ನಿದ್ದೆಗೆಡಿಸಿತು. ಬಳಿಕ ಖುದೀರಾಮ್‌ರನ್ನು ಬಂಧಿಸಿ ನೇಣಿಗೇರಿಸಲಾಯಿತು. ಅಲ್ಲದೆ, ಬ್ರಿಟಿಷರಿಂದ ನೇಣಿಗೇರಿದ ಬಂಗಾಳದ ಮೊದಲ ಯುವಕ ಕೂಡ ಇವರೇ ಆಗಿದ್ದರು. ಬರೀಂದ್ರ ಕುಮಾರ್ ಘೋಷ್
1880 – 1959
ಜಿತೇಂದ್ರನಾಥರ ಆಪ್ತ ವಲಯದಲ್ಲಿ ಕಾಣಸಿಗುವ ಮತ್ತೂಬ್ಬ ಕ್ರಾಂತಿಕಾರಿ ಎಂದರೆ ಬರೀಂದ್ರಕುಮಾರ್ ಘೋಷ್. ಇವರನ್ನು ಬರೀನ್ ಘೋಷ್ ಎಂದೂ ಕರೆಯ ಲಾಗುತ್ತಿತ್ತು. ಜಿತಿನ್ ಜತೆಗೂಡಿ ಕ್ರಾಂತಿ ಕಾರಿ ಗುಂಪುಗಳನ್ನು ಸಂಘಟಿಸುತ್ತಿದ್ದ ಬರೀನ್ ಅನುಶೀಲನಾ ಸಮಿತಿಯ ಸಹಾಯದಿಂದ ಜುಗಾಂತರ್ ವಾರ ಪತ್ರಿಕೆಯನ್ನು ಪ್ರಕಟಿಸುತ್ತಿದ್ದರು. ಬಳಿಕ ಸಶಸ್ತ್ರ ಹೋರಾಟ ಚಟುವಟಿಕೆಗಳಿಗೆ ನಾಂದಿ ಹಾಡಿದರು. ಕೋಲ್ಕತ್ತಾ ಸೇರಿದಂತೆ ವಿವಿಧೆಡೆ ರಹಸ್ಯ ಶಸ್ತ್ರಾಸ್ತ್ರಗಳ ತಯಾರಿಕೆಗೆ ಮುಂದಾದರು. ಅಲಿಪೋರ್ ಸ್ಫೋಟ ಪ್ರಕರಣದಲ್ಲಿ ಅವರಿಗೆ ಮರಣದಂಡನೆ ವಿಧಿಸಲಾಯಿತು. ಚಿತ್ತರಂಜನ್‌ದಾಸ್ ಅವರ ಹೋರಾಟದಿಂದ ಮರಣದಂಡನೆ ಜೀವಾವಧಿ ಶಿಕ್ಷೆಗೆ ಇಳಿಯಿತು. ಬರೀನ್ ಅವರು 12 ವರ್ಷ ಜೀವಾವಧಿ ಶಿಕ್ಷೆಯನ್ನು ಅಂಡಮಾನ್ ಜೈಲಿನಲ್ಲಿ ಕಳೆಯಬೇಕಾ ಯಿತು. ಬಳಿಕ ಅಲ್ಲಿಂದ ಮರಳಿದ ಅವರು ಅರವಿಂದ ಆಶ್ರಮದಲ್ಲಿ ಕೊನೆದಿನಗಳನ್ನು ಕಳೆದರು. ಟಿ. ಸುಬ್ರಮಣ್ಯಂ
1900 – 1974
ಟೇಕೂರು ಸುಬ್ರಮಣ್ಯಂ ಅವರು ಬಳ್ಳಾರಿ ಭಾಗದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು. ಬ್ರಿಟಿಷರ ವಿರುದ್ಧ ಸಿಡಿದೆದ್ದು, ಹೋರಾಟ ನಡೆಸಿದ ಕಾರಣದಿಂದ ಇವರನ್ನು ಹಲವಾರು ಬಾರಿ ಜೈಲಿನಲ್ಲಿ ಇರಿಸಲಾಗಿತ್ತು. ಅಂದರೆ, ಮದ್ರಾಸ್ ಪ್ರಸಿಡೆನ್ಸಿಯಲ್ಲಿದ್ದ ಸೆಂಟ್ರಲ್ ಜೈಲ್, ಬಳ್ಳಾರಿ ಅಲ್ಲಪುರಂ ಜೈಲು, ವೆಲ್ಲೂರಿನ ಸೆಂಟ್ರಲ್ ಜೈಲ್, ತಂಜಾವೂರಿನ ಸೆಂಟ್ರಲ್ ಜೈಲಿನಲ್ಲಿ ಇರಿಸಲಾಗಿತ್ತು. ಮಹಾತ್ಮಾ ಗಾಂಧೀಜಿ, ನೆಹರು, ರಾಜಾಜಿ ಸೇರಿದಂತೆ ಪ್ರಮುಖರ ಜತೆ ನೇರವಾಗಿ ಸಂಪರ್ಕ ಇರಿಸಿಕೊಂಡಿದ್ದ ಸುಬ್ರಮಣ್ಯಂ ಅವರ ಹೋರಾಟದಿಂದಲೇ ಸ್ವಾತಂತ್ರ್ಯ ಅನಂತರದಲ್ಲಿ ಬಳ್ಳಾರಿ ಮೈಸೂರು ರಾಜ್ಯಕ್ಕೆ ಸೇರುವಲ್ಲಿ ಯಶಸ್ವಿಯಾಯಿತು. ಆರ್.ಎಸ್.ಹುಕ್ಕೇರಿಕರ್
1886 – 1963
ಧಾರವಾಡ ಮೂಲದ ರಾಮರಾವ್ ಎಸ್ ಹುಕ್ಕೇರಿಕರ್ ಅವರು, ಆರ್.ಆರ್.ದಿವಾಕರ್, ಲೋಕಮಾನ್ಯ ತಿಲಕ್ ಮತ್ತು ಆಲೂರು ವೆಂಕಟರಾವ್ ಅವರ ಜತೆ ಸೇರಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು. ಗಾಂಧೀಜಿ ಅವರ ಬೆಂಬಲಿಗರಾಗಿದ್ದರು. ಕರ್ಮವೀರ, ಯುನೈಟೆಡ್ ಕರ್ನಾಟಕ, ಧನಂಜಯ ಮತ್ತು ದಿ ಹಿಂದೂ ಪತ್ರಿಕೆಗಳ ಸಂಪಾದಕರಾಗಿ ಮತ್ತು ಖಾದಿ ಆಂದೋಲನದಲ್ಲಿ ಭಾಗಿಯಾಗಿದ್ದರು. ಮದನ್ ಲಾಲ್ ಧಿಂಗ್ರಾ
1883 -1909
ಮದನ್ ಲಾಲ್ ಅವರು ಸಾರ್ವಕರ್ ಮತ್ತು ಶ್ಯಾಮ್‌ಜಿ ಕೃಷ್ಣ ವರ್ಮಾ ಅವರ ಕ್ರಾಂತಿಕಾರಿ ಸಹಚರರಲ್ಲಿ ಒಬ್ಬರು. 1907ರಲ್ಲಿ ವಿಲಿಯಮ್ ಕರ್ಜನ್ ವೈಲ್ಲಿ ಅವರನ್ನು ಹತ್ಯೆ ಮಾಡಿದ ಆರೋಪಿಗಳಲ್ಲಿ ಇವರೂ ಒಬ್ಬರು. ಇವರ ತಂದೆ ಕೊಲೊನಿಯಲ್ ಸೇವೆಯಲ್ಲಿ ವೈದ್ಯರಾಗಿದ್ದು, ಮಗನನ್ನು ತಿರಸ್ಕರಿಸಿದ್ದರು. ಮದನ್ ಅವರು ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿ ತುಂಬಿದರು. ಅದರಲ್ಲೂ ವಿಶೇಷವಾಗಿ ಹಿಂಸೆಯ ಮಾರ್ಗ ಪಾಲಿಸಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಿಗೆ ಸ್ಫೂರ್ತಿಯಾದರು. ರಾಂಪ್ರಸಾದ್ ಬಿಸ್ಮಿಲ್
1927
ಸ್ವಾಂತಂತ್ರ್ಯ ಹೋರಾಟಗಾರ ಕ್ರಾಂತಿಕಾರಿ ನಾಯಕ ಕವಿ, ಬಿಸ್ಮಿಲ್ಲಾ ಸೇರಿದಂತೆ ಇನ್ನಿತರ ಪದನಾಮ ಹೊಂದಿದ್ದರು. ಹಿಂದೂಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಶನ್ ಸಂಸ್ಥಾಪಕರು. 1918ರಲ್ಲಿ ತಮ್ಮ ಕವಿತೆಯೊಂದಿಗೆ ದೇಶವಾಸಿಯೋನ್ ಕೇ ನಾಮ್ ಸಂದೇಶ್ ಹೆಸರಿನಲ್ಲಿ ಕರಪತ್ರ ಹಂಚಿದರು. ಹೋರಾಟ, ಚಳವಳಿಗೆ ಹಣ ಸಂಗ್ರಹಿಸಲು ಲೂಟಿ ಮಾಡಿದ್ದ ಮೇನ್‌ಪುರಿ ಪ್ರಕರಣ ಮತ್ತು 1925 ರ ಆಗಸ್ಟ್ 9ರಂದು ನಡೆದ ಕಾಕೋರಿ ರೈಲು ದರೋಡೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದರು. 1927ರಲ್ಲಿ ಬ್ರಿಟಿಷರಿಂದ ಗಲ್ಲು ಶಿಕ್ಷೆಗೆ ಒಳಗಾದರು. ಕೊಮರಮ್ ಭೀಮ್
1901-1940
ಗೊಂಡ ಬುಡಕಟ್ಟಿನ ಮುಖಂಡ ರಾಗಿದ್ದ ಇವರು, ಭಗತ್ ಸಿಂಗ್ ಪ್ರಭಾವಕ್ಕೊಳಗಾಗಿದ್ದರು. ನಿಜಾಮಾನ ವಿರುದ್ಧ ಹೋರಾಡಿ ಸೆಣಿಸಿದರು. ಜಲ್, ಜಂಗಲ್, ಜಮೀನು ( ನೀರು, ಅರಣ್ಯ, ಜಮೀನು) ಘೋಷವಾಕ್ಯ ದಡಿ ಊಳಿಗಮಾನ್ಯ ಪದ್ಧತಿ ವಿರುದ್ಧ ಹೋರಾಡಿದರು. ವನವಾಸಿ ಯಾಗಿದ್ದ 12 ಬುಡಕಟ್ಟುಗಳನ್ನು ಒಂದುಗೂಡಿಸಿ ಭೂಮಿಗಾಗಿ ಗೆರಿಲ್ಲಾ ಪಡೆ ರಚಿಸಿ ಹೋರಾಡಿದರು. ಉದಯವಾಣಿ ಗೌರವ
ಸ್ವಾತಂತ್ರ್ಯದ ಅಮೃತೋತ್ಸವ ನಿಮಿತ್ತ ಉದಯವಾಣಿ ತೆರೆಮರೆಯಲ್ಲಿದ್ದ ನಾಯಕರೂ ಸೇರಿ 75 ಮಂದಿಯನ್ನು ಒಂದು ವಾರಗಳ ಕಾಲ ಪರಿಚಯಿಸುವ ಕೆಲಸವನ್ನು ಮಾಡಿದೆ. ಇವರ ಜತೆಗೆ ಮಹಾತ್ಮಾ ಗಾಂಧೀಜಿ, ಜವಾಹರ ಲಾಲ್ ನೆಹರು, ಸರ್ದಾರ್ ವಲ್ಲಭ ಬಾಯ್ ಪಟೇಲ್, ಸುಭಾಷ್ ಚಂದ್ರ ಬೋಸ್, ಲಾಲ್ ಬಹದ್ದೂರ್ ಶಾಸ್ತ್ರಿ, ಮೌಲಾನಾ ಅಬ್ದುಲ್ ಕಲಾಂ ಆಜಾದ್ ಸೇರಿದಂತೆ ಇನ್ನೂ ಬಹುತೇಕ ಪ್ರಮುಖ ಮುಖಂಡರ ತ್ಯಾಗ ಬಲಿದಾನವನ್ನು ಮರೆಯಲು ಸಾಧ್ಯವಿಲ್ಲ. ಹಾಗೆಯೇ, ರಾಜ್ಯದ ತುಮಕೂರಿನ ನಿಟ್ಟೂರು ಶ್ರೀನಿವಾಸ ರಾವ್, ಕೊಡಗಿನ ಗುಡ್ಡೆಮನೆ ಅಪ್ಪಯ್ಯಗೌಡರು, ಬೆಳಗಾವಿಯ ಗಂಗಾಧರ ರಾವ್ ದೇಶಪಾಂಡೆ ಸೇರಿ ದೇಶ ಮತ್ತು ರಾಜ್ಯದ ಅಸಂಖ್ಯಾತ ಹೋರಾಟಗಾರರನ್ನು ಈ ಸಂದರ್ಭದಲ್ಲಿ ಉದಯವಾಣಿ ನೆನೆಯುತ್ತದೆ.