Advertisement

ಚುನಾವಣಾ ಪ್ರಚಾರ: ಘೋಷಣೆಯಂತೆ ಉಚಿತ ಇರಲ್ಲ: ಆಶಿಮಾ ಗೋಯಲ್‌

06:55 PM Aug 21, 2022 | Team Udayavani |

ನವದೆಹಲಿ: ಚುನಾವಣಾ ಪ್ರಚಾರದ ವೇಳೆ ರಾಜಕೀಯ ಪಕ್ಷಗಳು ಘೋಷಣೆ ಮಾಡುವ “ಉಚಿತ’ ಕೊಡುಗೆಗಳು, ವಾಗ್ಧಾನದಂತೆ ಇರುವುದಿಲ್ಲ.

Advertisement

ಪಕ್ಷಗಳು ಅವುಗಳಿಗೆ ಯಾವ ರೀತಿ ವಿತ್ತೀಯ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತವೆ ಎಂಬ ಬಗ್ಗೆ ಮಾಹಿತಿ ನೀಡಬೇಕು ಎಂದು ಆರ್‌ಬಿಐನ ವಿತ್ತೀಯ ನೀತಿ ಸಮಿತಿ (ಎಂಪಿಸಿ) ಸದಸ್ಯ ಆಶಿಮಾ ಗೋಯಲ್‌ ಹೇಳಿದ್ದಾರೆ.

“ಪಿಟಿಐ’ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಉಚಿತ ಕೊಡುಗೆಗಳು ಹಾಗೂ ಸಬ್ಸಿಡಿಗಳು ದರ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ ಎಂದು ಹೇಳಿದ್ದಾರೆ.

ರಾಜಕೀಯ ಪಕ್ಷಗಳು ಉಚಿತ ಕೊಡುಗೆಯ ಬಗ್ಗೆ ಘೋಷಣೆ ಮಾಡುವ ಸಂದರ್ಭದಲ್ಲಿಯೇ ಅವುಗಳಿಗೆ ತಗಲುವ ವೆಚ್ಚದ ವಿವರವನ್ನೂ ಬಹಿರಂಗಪಡಿಸಿದಾಗ ಆಕರ್ಷಣೆ ತಗ್ಗುತ್ತದೆ ಎಂದರು.

ಸುಪ್ರೀಂಕೋರ್ಟ್‌ನಲ್ಲಿ ಇದೇ ವಿಚಾರಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯೂ ಪ್ರಗತಿಯಲ್ಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next