Advertisement

ಉಚಿತ ವಾಹನ ಸೇವೆಗೆ ಬಿಜೆಪಿ ಮುಖಂಡ ಮಲ್ಲೇಶ್‌ ಚಾಲನೆ

07:12 PM May 20, 2021 | Team Udayavani |

ಚಾಮರಾಜನಗರ: ಕೋವಿಡ್‌ ಸೋಂಕಿತರನ್ನು ಆಸ್ಪತ್ರೆಗೆಸೇರಿಸಲು ಹಾಗೂ ಗುಣಮುಖರಾದವರನ್ನು ಆಯಾಗ್ರಾಮಗಳಿಗೆ ತಲುಪಿಸಲು ಬಿಜೆಪಿ ರೈತ ಮುಖಂಡಅಮ್ಮನಪುರ ಮಲ್ಲೇಶ್‌ ಉಚಿತ ವಾಹನ ಸೇವೆಗಾಗಿಜಿಲ್ಲಾಸ್ಪತ್ರೆ ಮುಂದೆ ಬುಧವಾರ ಚಾಲನೆ ನೀಡಿದರು.ನಗರದ ಜಿಲ್ಲಾಸ್ಪತ್ರೆ ಮುಂಭಾಗ ಪ್ರಯಾಣಿಕರವಾಹನವನ್ನು ಉಚಿತವಾಗಿ ನೀಡುವ ಜೊತೆಗೆ ಇದರಸಂಪೂರ್ಣ ಸಂಚಾರ ವೆಚ್ಚವನ್ನು ಭರಿಸುವಉದ್ದೇಶದೊಂದಿಗೆ ಅಜಾದ್‌ ಹಿಂದು ಸೇನೆಯ ಕಾರ್ಯಕರ್ತರಿಗೆ ನೀಡಿದರು.

Advertisement

ಜಿಲ್ಲೆಯನ್ನು ಸಂಪೂರ್ಣ ಲಾಕ್‌ಡೌನ್‌ ಮಾಡಿರುವಹಿನ್ನೆಲೆಯಲ್ಲಿ ಗ್ರಾಮಾಂತರ ಪ್ರದೇಶದವರು ಕೋವಿಡ್‌ಪರೀಕ್ಷೆ ಮಾಡಿಸಿಕೊಳ್ಳಲು ವಾಹನಗಳಿಲ್ಲದೇ ತೊಂದರೆಪಡುತ್ತಿದ್ದರು. ಇದನ್ನರಿತ ಮಲ್ಲೇಶ್‌ ಅವರು ಬಿಜೆಪಿರಾಜ್ಯ ಹಾಗೂ ಜಿಲ್ಲಾ ಸಮಿತಿಯ ಸೂಚನೆಯಂತೆಜನರು ಕೋರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಹಾಗೂಗುಣಮುಖರಾದ ನಂತರ ಸುರಕ್ಷಿತವಾಗಿ ಮನೆಗೆತಲುಪಲು ಅನುಕೂಲವಾಗು ವಂತೆ ವಾಹನವನ್ನುನೀಡಿದ್ದಾರೆ.

ಮುಂದಿನದಿನಗಳಲ್ಲಿಜನರಬೇಡಿಕೆಯನ್ನುನೋಡಿ ಮತ್ತೂಂದು ವಾಹನ ವನ್ನು ನೀಡುವುದಾಗಿಬಿಜೆಪಿ ರೈತ ಮುಖಂಡ ಮಲ್ಲೇಶ್‌ ತಿಳಿಸಿದರು.ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಸೋಂಕು ಉಲ್ಬಣವಾಗುತ್ತಿದ್ದು, ಸೂಕ್ತ ಚಿಕಿತ್ಸೆ ಸಕಾಲದಲ್ಲಿ ಲಭ್ಯವಾದರೆಅನೇಕರ ಪ್ರಾಣ ಉಳಿಯುತ್ತದೆ. ಹೀಗಾಗಿ ಸಾರ್ವಜನಿಕರು ಸಹ ಕೋವಿಡ್‌ ಸೋಂಕಿನ ಲಕ್ಷಣ ಕಂಡು ಬಂದತಕ್ಷಣ ಚಿಕಿತ್ಸೆ ಪಡೆದುಕೊಂಡು ಆರಂಭದಲ್ಲಿಯೇಪರೀಕ್ಷೆ ಮಾಡಿಸಿಕೊಂಡರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ.

ಈಗಾಗಲೇ ಮುಖ್ಯಮಂತ್ರಿಬಿ.ಎಸ್‌. ಯಡಿಯೂರಪ್ಪ ಅವರು ಲಾಕ್‌ಡೌನ್‌ನಿಂದಸಂಕಷ್ಟದಲ್ಲಿರುವ ಬಡ, ಮಧ್ಯಮ ಹಾಗೂ ರೈತಕುಟುಂಬಗಳಿಗೆ ಅನೇಕ ಪ್ಯಾಕೇಜ್‌ ಘೋಷಣೆ ಮಾಡಿದ್ದಾರೆ. ಇನ್ನು 2 ತಿಂಗಳು ಉಚಿತವಾಗಿ ರೇಷನ್‌ ನೀಡಲಾಗುತ್ತಿದೆ. ಎಲ್ಲರೂ ಮನೆಯಲ್ಲಿದ್ದು ಆರೋಗ್ಯಕಾಪಾಡಿಕೊಳ್ಳುವ ಜತೆ ಸೌಲಭ್ಯ ಪಡೆದುಕೊಳ್ಳ ಬೇಕು ಎಂದು ಮಲ್ಲೇಶ್‌ ಸಲಹೆ ನೀಡಿದರು.

ಜಿಲ್ಲಾಸ್ಪತ್ರೆಗೆ ಬರುವ ಸೋಂಕಿತರು ವಾಹನಕ್ಕಾಗಿಪ್ರಶಾಂತ್‌ (9480732661), ಅರಕಲವಾಡಿ ಮಹೇಶ್‌(94491 29808), ಅಮಚವಾಡಿ ಅಭಿ ಅರಸು(95384 41175) ಅವರನ್ನು ಸಂಪರ್ಕಿಸಬಹುದು.ಜಿಲ್ಲಾ ಸರ್ಜನ್‌ ಡಾ.ಶ್ರೀನಿವಾಸ್‌, ಡಾ.ಪ್ರದೀಪ್‌,ಆಜಾದ್‌ ಹಿಂದು ಸೇನಾ ರಾಜ್ಯಾಧ್ಯಕ್ಷ ಪೃಥ್ವಿರಾಜ್‌,ಗ್ರಾಮಾಂತರ ಮಂಡಲದ ಅಧ್ಯಕ್ಷಪ್ರಶಾಂತ್‌,ಕಾರ್ಯದರ್ಶಿ ಮಹೇಶ್‌, ಮಹದೇವಸ್ವಾಮಿ, ಸತೀಶ್‌,ಮಹೇಶ್‌, ಅಭಿ ಅರಸ್‌ ಮತ್ತಿತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next