Advertisement

ಲಸಿಕೆ ಕೊರತೆ : ಮೇ 1 ರಿಂದ ಉಚಿತ ಲಸಿಕೆ ಅಭಿಯಾನ ಅಸಾಧ್ಯವೆಂದ ಮಹಾರಾಷ್ಟ್ರ

07:53 PM Apr 28, 2021 | Team Udayavani |

ಮುಂಬೈ : ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ 19 ವಿರುದ್ಧ ಹೋರಾಡಲು ಮೇ 1 ರಿಂದ ಉಚಿತವಾಗಿ 18 ರಿಂದ 44 ವರ್ಷದೊಳಗಿನ ನಾಗರಿಕರಿಗೆ ಲಸಿಕೆ ನೀಡಲು ಸಾಧ್ಯವಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬುಧವಾರ(ಏ. 28) ಹೇಳಿದ್ದಾರೆ.

Advertisement

ಕೋವಿಡ್ ಸೋಂಕು ರಾಜ್ಯದಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ಅವಲೋಕಿಸಲು ಏರ್ಪಡಿಸಿದ್ದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ರಾಜ್ಯಕ್ಕೆ ಎಷ್ಟು ಲಸಿಕೆಗಳನ್ನು ಸರಬರಾಜು ಮಾಡಲಾಗುತ್ತದೆ ಎಂಬುದರ ಆಧಾರದ ಮೇಲೆ ಲಸಿಕೆಯ ಅಭಿಯಾನದ ಬಗ್ಗೆ ಯೋಜಿಸಲಾಗುವುದು ಎಂದು ಠಾಕ್ರೆ ಹೇಳಿದ್ದಾರೆ.

ಓದಿ : ಡಾನ್ಸ್ ಮೂಲಕ ಕೋವಿಡ್ ಜಾಗೃತಿ: ಕೇರಳ ಪೊಲೀಸರ ವಿನೂತನ ಪ್ರಯತ್ನ  

ಇನ್ನು ಈ ಬಗ್ಗೆ ವರದಿಗಾರರೊಂದಿಗೆ ಮಾಹಿತಿ ಹಂಚಿಕೊಂಡ ಆರೋಗ್ಯ ಸಚಿವ ರಾಜೇಶ್ ಟೋಪೆ, ರಾಜ್ಯದಲ್ಲಿ ಈ ವಯೋಮಾನದವರು  5.71 ಕೋಟಿ ನಾಗರಿಕರಿದ್ದಾರೆ. ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಲಭ್ಯವಿಲ್ಲದ ಕಾರಣ ಮೇ 1 ರಿಂದ ಪ್ರಾರಂಭವಾಗುವ ವ್ಯಾಕ್ಸಿನೇಷನ್ ಡ್ರೈವ್ ನನ್ನು ರಾಜ್ಯದಲ್ಲಿ ಪ್ರಾರಂಭಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Advertisement

ಆದರೆ ಮುಂದಿನ ಆರು ತಿಂಗಳಲ್ಲಿ ನಾಗರಿಕರಿಗೆ ಉಚಿತ ಲಸಿಕೆ ನೀಡಲು ಯೋಜಿತ ರೀತಿಯಲ್ಲಿ ರಾಜ್ಯ ಸರ್ಕಾರ ಯೋಜಿಸಿದೆ ಎಂದು ಕೂಡ ಅವರು ಹೇಳಿದ್ದಾರೆ.

“ರಾಜ್ಯವು ಕೋವಿಡ್ ಬಿಕ್ಕಟ್ಟಿನೊಂದಿಗೆ ಹಣಕಾಸಿನ ಸಮಸ್ಯೆಗಳನ್ನು ಎದುರಿಸುತ್ತಿದೆ, ಆದರೆ ನಾಗರಿಕರ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆದ್ದರಿಂದ, 18 ರಿಂದ 44 ವರ್ಷದವರೆಗಿನ ಎಲ್ಲರಿಗೂ ಉಚಿತ ಲಸಿಕೆಗಳನ್ನು ನೀಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ” ಆದರೇ, ಲಸಿಕೆಗಳು ಸದ್ಯಕ್ಕೆ ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿಲ್ಲದ ಕಾರಣ ಮೇ 1 ರಿಂದ ನೀಡಲು ಸಾಧ್ಯವಾಗುತ್ತಿಲ್ಲ  ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇನ್ನು ಲಸಿಕೆ ಪೂರೈಕೆಯ ಬಗ್ಗೆ ಮಹಾರಾಷ್ಟ್ರದ ಬಿಜೆಪಿ ಮುಖಂಡರಾದ ನಿತಿನ್ ಗಡ್ಕರಿ, ದೇವೇಂದ್ರ ಫಡ್ನವೀಸ್ ಮತ್ತು ಪ್ರವೀಣ್ ದಾರೇಕರ್ ಅವರಲ್ಲಿ ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಅವರನ್ನು ಸಂಪರ್ಕಿಸಿ ರಾಜ್ಯಕ್ಕೆ ರೆಮ್ಡೆಸಿವಿರ್, ಆಮ್ಲಜನಕಗಳನ್ನು ಒದಗಿಸುವಂತೆ ಪರಿಹರಿಸಲು ಸಹಕರಿಸುವಂತೆ ಮುಖ್ಯಂತ್ರಿ ಠಾಕ್ರೆ ಮನವಿ ಮಾಡಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಓದಿ : ಮಧ್ಯ ಪ್ರದೇಶ : ಕ್ರಯೋಜನಿಕ್ ಆಕ್ಸಿಜನ್ ಟ್ಯಾಂಕರ್ ನೀಡಲು ಶಾ ಭರವಸೆ

Advertisement

Udayavani is now on Telegram. Click here to join our channel and stay updated with the latest news.

Next