Advertisement

ಗೋಪಾಲನ್‌ ಮಾಲ್‌ಗ‌ಳಲ್ಲಿ 18ಕ್ಕೆ ಉಚಿತ ಪಾರ್ಕಿಂಗ್‌

12:20 AM Apr 17, 2019 | Team Udayavani |

ಬೆಂಗಳೂರು: ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಜತೆಗೆ ಮತಗಟ್ಟೆಗೆ ತೆರಳುವವರಿಗೆ ಉಚಿತ ಪಾರ್ಕಿಂಗ್‌ ಸೌಲಭ್ಯ ನೀಡಲು ಗೋಪಾಲನ್‌ ಮಾಲ್‌ ಮುಂದಾಗಿದೆ.

Advertisement

ಬೆಂಗಳೂರು ಜನ ಮತದಾನದಿಂದ ಹಿಂದೆ ಉಳಿಯಲು ಪಾರ್ಕಿಂಗ್‌ ಸಮಸ್ಯೆ ಕೂಡ ಕಾರಣವಾಗಿದೆ. ಹೀಗಾಗಿ, ಮತದಾನ ದಿನದಂದು ನಗರದ ಬನ್ನೇರುಘಟ್ಟ ರಸ್ತೆ, ಮೈಸೂರು ರಸ್ತೆ ಮತ್ತು ಸ್ವಾಮಿ ವಿವೇಕಾನಂದ ರಸ್ತೆಯ ತನ್ನ ಮಾಲ್‌ಗ‌ಳ ಸಮೀಪದ ಮತಗಟ್ಟೆಗೆ ವಾಹನಗಳಲ್ಲಿ ತೆರಳುವವರ ಪೈಕಿ ಮೊದಲು ಬಂದ 273 (ಬಹುಮತ ಸಂಖ್ಯೆ) ವಾಹನಗಳಿಗೆ ಉಚಿತ ಪಾರ್ಕಿಂಗ್‌ ಸೌಲಭ್ಯ ಕಲ್ಪಿಸಲಾಗಿದೆ. ಬೆಳಗ್ಗೆ 7ರಿಂದ ಸಂಜೆ 7 ಗಂಟೆವರೆಗೂ ಪಾರ್ಕಿಂಗ್‌ ಉಚಿತವಿದೆ.

ಇನ್ನು ಏ.18ರಂದು ಈ ಮಾಲ್‌ಗ‌ಳಲ್ಲಿ 273 ರೂ. ಹಾಗೂ ಅದಕ್ಕಿಂತ ಹೆಚ್ಚಿನ ದರದ ವಸ್ತುಗಳನ್ನು ಖರೀದಿಸಿದವರಿಗೆ ಲಕ್ಕಿ ಡ್ರಾ ಏರ್ಪಡಿಸಿದ್ದು, ಅದೃಷ್ಟಶಾಲಿಗಳಿಗೆ ದ್ವಿಚಕ್ರವಾಹನ ಸೇರಿ ಹಲವು ವಿಶೇಷ ಬಹುಮಾನ ನೀಡಲಾಗುವುದು. ಮೇ 1ರಂದು ಗೋಪಾಲನ್‌ ಸಿಗ್ನೇಚರ್‌ಮಾಲ್‌ನಲ್ಲಿ ಲಕ್ಕಿ ಡ್ರಾ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next