Advertisement

ವಿಪಿಯುಕೆಯಿಂದ ಮಕ್ಕಳಿಗೆ ಉಚಿತ ಚಿತ್ರಕಲಾ ತರಗತಿ

06:59 PM Mar 09, 2021 | Suhan S |

ಲಂಡನ್ :  ಯುನೈಟೆಡ್‌ ಕಿಂಗ್ಡಮ್‌ನಲ್ಲಿ ಶಾಲಾ ಮಕ್ಕಳಿಗೆ ಫೆಬ್ರವರಿ ಮಧ್ಯಭಾಗದಿಂದ ಅರ್ಧವಾರ್ಷಿಕ ರಜೆ. ಈ ವೇಳೆ ಅವರನ್ನು ನೋಡಿಕೊಳ್ಳುವುದು ಪೋಷಕರಿಗೆ ಹರಸಾಹಸ. ಅದು ಕೋವಿಡ್‌ ಕಾಲದಲ್ಲಿ ಇನ್ನೂ ಒಂದು ಪಟ್ಟು ಹೆಚ್ಚು. ಹೀಗಾಗಿ ಒಕ್ಕಲಿಗರ ಪರಿಷತ್‌ ಯುಕೆ ವತಿಯಿಂದ ಮಕ್ಕಳಿಗಾಗಿ ಉಚಿತ ಚಿತ್ರಕಲಾ ತರಗತಿಯನ್ನು ಆಯೋಜಿಸಲಾಗಿತ್ತು.

Advertisement

5 ವರ್ಷ ಮೇಲ್ಪಟ್ಟ ಮಕ್ಕಳಿಗೆ ಆನ್‌ಲೈನ್‌ ಮೂಲಕ ಯುವ ಹವ್ಯಾಸಿ ಚಿತ್ರಕಲಾವಿದ ಕಾರ್ತಿಕ್‌ ಕುಮಾರ್‌  ತರಬೇತಿ ನೀಡಿದರು. ತರಗತಿಯಲ್ಲಿ ಯುಕೆಯ ನಾಲ್ಕು ಪ್ರಾಂತ್ಯದ ಅಂದರೆ ಇಂಗ್ಲೆಂಡ್‌, ಸ್ಕಾಟ್ಲೆಂಡ್‌, ವೇಲ್ಸ್‌, ಉತ್ತರ ಐರ್ಲೆಂಡ್‌ ಮಕ್ಕಳು ಪಾಲ್ಗೊಂಡಿದ್ದರು.

ತರಗತಿಯಲ್ಲಿ ಪಾಲ್ಗೊಂಡಿದ್ದ ಮಕ್ಕಳು ಅತ್ಯುತ್ಸಾಹದಿಂದ ಚಿತ್ರಗಳನ್ನು ಬಿಡಿಸಿ ಸಂಭ್ರಮಿಸಿದರು. ತರಗತಿಯ ಕೊನೆಯಲ್ಲಿ ಗಣೇಶ ದೇವರ ಚಿತ್ರಬಿಡಿಸುವಾಗ, ಗಣೇಶನ ಬಗ್ಗೆ ಕಾರ್ತಿಕ್‌ ಹೇಳಿಕೊಟ್ಟಿದ್ದು ಪೋಷಕರಿಗೂ ಖುಷಿ ಕೊಟ್ಟಿತು.

ವೃತ್ತಿಯಲ್ಲಿ ಎಂಜಿನಿಯರ್‌ ಆಗಿರುವ ನನಗೆ ಚಿತ್ರಕಲೆ ಪ್ರವೃತ್ತಿ.  ಬಾಲ್ಯದಿಂದಲೂ ಚಿತ್ರಕಲೆ ಬಗ್ಗೆ ಬಹಳ ಆಸಕ್ತಿ. ಹಲವಾರು ಅಂತರ ರಾಜ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದೇನೆ.  ಯುಕೆಗೆ ಬರುವ ಮುಂಚೆ ಸ್ವಲ್ಪ ಸಮಯ ಬೆಂಗಳೂರಿನ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕನಾಗಿ ಕೆಲಸ ಮಾಡಿದ್ದೆ ಎಂದ ಕಾರ್ತಿಕ್‌, ಆನ್‌ಲೈನ್‌ನಲ್ಲಿ ಮಕ್ಕಳಿಗೆ ಚಿತ್ರ ಬಿಡಿಸೋದು ಹೇಳಿಕೊಡೋಕೆ ಅವಕಾಶ ಮಾಡಿ ಕೊಟ್ಟ ವಿಪಿಯುಕೆಗೆ ಧನ್ಯವಾದ  ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next