Advertisement

ಕೃಷಿ ಚಟುವಟಿಕೆಗಳಿಗೆ ಮುಕ್ತ ಅವಕಾಶ: ಎಸ್‌ಟಿಎಸ್‌

05:58 PM Apr 28, 2020 | mahesh |

ಹಾಸನ: ರಾಜ್ಯದಲ್ಲಿ ಲಾಕ್‌ಡೌನ್‌ ಜಾರಿ ಯಲ್ಲಿದ್ದರೂ ಕೃಷಿ ಚಟುವಟಿಕೆ ಹಾಗೂ ಕೃಷಿ ಉತ್ಪನ್ನಗಳ ಸಾಗಣೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ಕೃಷಿ ಮಾರುಕಟ್ಟೆ ಹಾಗೂ ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಅವರು ತಿಳಿಸಿದರು.  ಹಾಸನ ಎಪಿಎಂಸಿಗೆ ಸೋಮವಾರ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತ ನಾಡಿ, ಹಾಸನದಲ್ಲಿ ಶೀತಲಗೃಹ ಕೊರತೆ ಇದೆ. ಜಿಲ್ಲಾಡಳಿತವು ಸೂಕ್ತ ಜಾಗ ಗುರುತಿಸಿದರೆ  ಶೀತಲಗೃಹಗಳ ನಿರ್ಮಾಣ ಹಾಗೂ ಎಪಿಎಂಸಿ ಪ್ರಾಂಗಣದಲ್ಲಿ ಕೃಷಿ ಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲು ಅರ್ಥಿಕ ನೆರವು ನೀಡಲಾಗುವುದು ಎಂದರು.

Advertisement

ಕೃಷಿ ಚಟುವಟಿಕೆಗಳಿಗೆ ಬೇಕಾದ ಸಲಕರಣೆ ಗಳು ಹಾಗೂ ದಿನಸಿ ಮತ್ತು ತರಕಾರಿಗಳನ್ನು ವರ್ತಕರು ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರೆ ಅಂತಹವರ
ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಪ್ರಸಕ್ತ ಮುಂಗಾರಿನಲ್ಲಿ ಬಿತ್ತನೆಗೆ ಆಲೂಗಡ್ಡೆ ಬಿತ್ತನೆ ಬೀಜ ಅಗತ್ಯ ಪ್ರಮಾಣದಷ್ಟು ದಾಸ್ತಾನು ಮಾಡಲಾಗಿದೆ. ಜೊತೆಗೆ ಕೃಷಿಗೆ ಬೇಕಾಗಿರುವ ರಸಗೊಬ್ಬರ ಶೇ.90 ರಷ್ಟು ದಾಸ್ತಾನಿದೆ ಎಂದು ಹೇಳಿದರು.

ಎಪಿಎಂಸಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಸಚಿವರು ಹಾಸನದಲ್ಲಿ ಹೆಚ್ಚುವರಿಯಾಗಿ ಬೆಳೆಯು ತ್ತಿರುವ ಹಸಿ ಮೆಣಸಿನಕಾಯಿ, ಕೋಸು, ಸಿಹಿ ಕುಂಬಳ ಮತ್ತಿತ್ತರ ತರಕಾರಿಗಳಿಗೆ ಬೇರೆ ಸ್ಥಳಗಳಲ್ಲಿ ಇರುವ ಬೇಡಿಕೆ ಗುರುತಿಸಿ ರೈತರನ್ನು ಸಂಪರ್ಕ ಮಾಡಿ ಮಾರಾಟಕ್ಕೆ ಸಹಕರಿಸಬೇಕು ಎಂದು ತೋಟಗಾರಿಕಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಶಾಸಕ ಪ್ರೀತಂ ಜೆ ಗೌಡ, ವಿಧಾನ ಪರಿಷತ್‌ ಸದಸ್ಯ ಎಂ.ಎ. ಗೋಪಾಲಸ್ವಾಮಿ, ಎಪಿಎಂಸಿ ಅಧ್ಯಕ್ಷ ಮಂಜೇಗೌಡ, ಜಿಲ್ಲಾಧಿಕಾರಿ ಗಿರೀಶ್‌, ಡಿಸಿಸಿ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ ಕುಮಾರ್‌, ಹಾಸನ ಎಪಿಎಂಸಿ ಉಪ ನಿರ್ದೇಶಕ ಶ್ರೀಹರಿ, ಎಸ್ಪಿ ಶ್ರೀನಿವಾಸಗೌಡ, ಉಪವಿಭಾಗಾಧಿಕಾರಿ ಡಾ.ನವೀನ್‌ ಭಟ್‌, ಜಂಟಿ ಕೃಷಿ ನಿರ್ದೇಶಕ ಮಧುಸೂದನ್‌, ತೋಟಗಾರಿಕೆ
ಇಲಾಖೆ ಉಪನಿರ್ದೇಶಕ ಮಂಜುನಾಥ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next