Advertisement
ಅದೇ ರೀತಿ, ಹೋಟೆಲ್, ರೆಸ್ಟೋರೆಂಟ್‌ಗಳು, ಲಾಡ್ಜಿಂಗ್, ಪ್ರವಾಸಿ ತಾಣಗಳು ಎಂದಿನಂತೆ ಅತಿಥಿಗಳ ಆತಿಥ್ಯಕ್ಕೆ ಸಿದಟಛಿಗೊಂಡಿವೆ. ಇನ್ನು ಈಗಾಗಲೇ ಸರ್ಕಾರಿ ಬಸ್‌ಗಳು ರಸ್ತೆಗಿಳಿದಿದ್ದು, ಸಮಯ ನಿರ್ಬಂಧವೂ ತೆರವಾಗುವ ಸಾಧ್ಯತೆ ಇದೆ. ಆದರೆ, “ಬಂಧ ಮುಕ್ತ’ದಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ಆಗಿರಲಿದೆ. ಸ್ವಲ್ಪ ನಿರ್ಲಕ್ಷಿಸಿದರೂ ಸೋಂಕು ಸಮುದಾಯಕ್ಕೆ ಹರಡುವ ಸಾಧ್ಯತೆ ಇದೆ.
Related Articles
Advertisement
ಆದರೆ ಬಹುತೇಕ ಹಿರಿಯರು ತಮ್ಮ ಇಳಿವಯಸ್ಸಿನಲ್ಲಿ ದೇವಾಲಯಗಳಿಗೆ ಹೋಗುವುದು ರೂಢಿ. ಆದ್ದರಿಂದ ಮಕ್ಕಳಿಗೆ ಪ್ರವೇಶ ಇಲ್ಲದಿದ್ದರೂ ಹಿರಿಯ ನಾಗರಿಕರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಅಖೀಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಆಗಮಿಕರ,ಉಪಾದಿವಂತರ ಒಕ್ಕೂಟದ ಪ್ರಧಾನ ಕಾರ್ಯ ದರ್ಶಿ ಡಾ.ಕೆ.ಎಸ್.ಎನ್. ದೀಕ್ಷಿತ್ ಒತ್ತಾಯಿಸಿದ್ದಾರೆ.
ಬಂಧ ಮುಕ್ತ; ಇರಲಿ ಮುನ್ನೆಚ್ಚರಿಕೆ: ಪ್ರತಿಯೊಂದು ಕಡೆ ಜನ ಸ್ವಯಂಪ್ರೇರಿತ ಸಾಮಾಜಿಕ ಅಂತರ ಹಾಗೂ ಸರದಿಯಲ್ಲಿ ನಿಂತು ಮಾಲ್‌ಗಳಲ್ಲಿ ಪ್ರವೇಶ, ಸ್ಯಾನಿಟೈಸರ್ ಬಳಕೆ, ಸಡಿಲಿಕೆಯಾಗಿದೆ ಎಂಬ ಕಾರಣಕ್ಕೆ ಅನಗತ್ಯ ಸಂಚರಿಸದಿರುವುದು ಸೂಕ್ತ. ಅದೇ ರೀತಿ, ಕಂಟೈನ್ಮೆಂಟ್ ವಲಯದಲ್ಲಿರುವವರು ನಿಯಮ ಉಲ್ಲಂ ಸಿ ಹೊರಬರದಂತೆ ಎಚ್ಚರ ವಹಿಸುವ ಅವಶ್ಯಕತೆ ಇದೆ. ಆಗ ಮಾತ್ರ ಈ ಸಡಿಲಿಕೆ ಯಶಸ್ವಿಯಾಗಲು ಸಾಧ್ಯ.
ಇಲ್ಲವಾದರೆ, ನಿರ್ಬಂಧಗಳು ಮತ್ತೆ ಕಟ್ಟಿಹಾಕಿದರೂ ಅಚ್ಚರಿ ಇಲ್ಲ. ಸಡಿಲಿಕೆ ಬೆನ್ನಲ್ಲೇ ಕಚೇರಿ, ಕಂಪನಿಗಳು, ಸಂಘ-ಸಂಸ್ಥೆಗಳು ಬಹುತೇಕ ತಮ್ಮ ಎಲ್ಲ ಸಿಬ್ಬಂದಿ ಈಗಾಗಲೇ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಸೋಮವಾರದಿಂದ ಸಂಪೂರ್ಣ ತೆರವಿನಿಂದ ಎಲ್ಲ ಕ್ಷೇತ್ರಗಳು ಕಾರ್ಯಾರಂಭ ಮಾಡಲಿವೆ. ಇದರಿಂದ ಎರಡೂವರೆ ತಿಂಗಳ “ಗೃಹ ಬಂಧನ’ದಿಂದ ಬಿಡುಗಡೆಗೊಂಡು ಸ್ನೇಹಿತರು, ಸಹೋದ್ಯೋಗಿಗಳು ಮುಖಾಮುಖೀ ಆಗಲಿದ್ದಾರೆ. ಉದ್ಯಾನಗಳಲ್ಲಿ ವಾಯುವಿಹಾರ ಮಾಡಲಿದ್ದಾರೆ. ಸಹಭೋಜನ ನಡೆಸಲಿದ್ದಾರೆ. ಆದರೆ, ಇದೆಲ್ಲದರ ನಡುವೆ ಸಾಮಾಜಿಕ ಅಂತರ ಮಾತ್ರ ಮುಂದುವರಿಯಲಿದೆ.
ಮುಕ್ತ ಅವಕಾಶ– ಮಾಲ್
– ಚಲನಚಿತ್ರ ಚಿತ್ರೀಕರಣ
– ತಾರಾ ಹೋಟೆಲ್, ಕ್ಲಬ್, ರೆಸಾರ್ಟ್
– ಮಂದಿರ, ಮಸೀದಿ, ಚರ್ಚ್ ಪ್ರವೇಶ
– ಬಿಎಂಟಿಸಿ ಬಸ್, ಆಟೋ, ಕ್ಸಿ,ಮ್ಯಾಕ್ಸಿಕ್ಯಾಬ್
– ಅಂಗಡಿ ಮುಂಗಟ್ಟು, ಸಲೂನ್, ಬ್ಯೂಟಿ ಪಾರ್ಲರ್, ಜ್ಯುಯಲರ್, ವಾಣಿಜ್ಯ ಸಂಕೀರ್ಣಗಳಲ್ಲಿನ ಮಳಿಗೆಗಳು
– ಹೋಟೆಲ್
– ಬೀದಿ ಬದಿ ವ್ಯಾಪಾರ
– ಎಂಆರ್‌ಪಿ ಮದ್ಯದ ಮಳಿಗೆ, ಪಬ್, ಬಾರ್
– ತರಕಾರಿ ಮಾರುಕಟ್ಟೆ, ಎಪಿಎಂಸಿ ಮಂಡಿ, ಕಿರಾಣಿ ಆಂಗಡಿ,
– ಎಲೆಕ್ಟ್ರಿಕ್ ಮಳಿಗೆ, ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆ, ಮಾಲ್ ಹೊರತುಪಡಿಸಿದ ಮಳಿಗೆಗಳು. ನಿರ್ಬಂಧ
– ಚಲನಚಿತ್ರ ಪ್ರದರ್ಶನ
– ಶಾಲಾ-ಕಾಲೇಜು
– ಕಲ್ಯಾಣ ಮಂಟಪ
– ಜಾತ್ರೆ, ಊರ ಹಬ್ಬ