Advertisement
ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರು ನೂತನ ವಧು-ವರರನ್ನು ಆಶೀರ್ವದಿಸಿ ಮಾತನಾಡಿ, ಸರಳ ವಿವಾಹವಾದವರು ಬೇರೆಯವರಿಗೆ ಮಾದರಿಯಾಗಿ ನಿಲ್ಲುತ್ತಾರೆ. ಕುದ್ರೋಳಿಯಲ್ಲಿ ಇದು ನಿರಂತರವಾಗಿ ನಡೆಯಬೇಕು ಎಂಬುದು ನನ್ನ ಕನಸು. ನನ್ನ ಮದುವೆಯೂ ಕುದ್ರೋಳಿಯಲ್ಲೇ ಆಗಿತ್ತು. ನನ್ನ ಮಕ್ಕಳ ಮದುವೆಯನ್ನೂ ಇಲ್ಲೇ ನಡೆಸಿದ್ದೇನೆ. ಕುದ್ರೋಳಿಯಲ್ಲಿ ವಿಶೇಷ ಶಕ್ತಿ ಇದೆ. ಸತಿ-ಪತಿಯರು ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೆ ಬಾಳುವೆ ನಡೆಸಬೇಕು ಎಂದರು.
ಕುದ್ರೋಳಿ ದೇವಸ್ಥಾನದ ಅಧ್ಯಕ್ಷ ಎಚ್.ಎಸ್. ಸಾಯಿರಾಂ, ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ಕೋಶಾಧಿಕಾರಿ ಪದ್ಮರಾಜ್ ಆರ್., ಕಾರ್ಯದರ್ಶಿ ಮಾಧವ ಸುವರ್ಣ, ಕೇರಳ ಶಿವಗಿರಿ ಸತ್ಯಾನಂದತೀರ್ಥ ಸ್ವಾಮೀಜಿ, ದೇಗುಲ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಉರ್ಮಿಳಾ ರಮೇಶ್, ದೇವೇಂದ್ರ ಪೂಜಾರಿ, ಶೇಖರ್ ಪೂಜಾರಿ, ರಮಾನಾಥ ಕಾರಂದೂರು, ಬಿರುಬೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ, ಬಿರುವೆರ್ ಕುಡ್ಲ ಮಹಿಳಾ ವೇದಿಕೆ ಅಧ್ಯಕ್ಷ ವಿದ್ಯಾ ರಾಕೇಶ್, ಬಿರುವೆರ್ ಕುಡ್ಲದ ರಾಕೇಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೆಂಬುದು ಎಲ್ಲರ ಬಯಕೆ. ಮುಸ್ಲಿಮರು, ಕ್ರೈಸ್ತರ ಸಹಿತ ಯಾರ ವಿರೋಧವೂ ಇಲ್ಲ. ಈ ವಿಚಾರದಲ್ಲಿ ವಿವಾದ ಸೃಷ್ಟಿ ಬೇಡ. ರಾಮ, ಏಸುಕ್ರಿಸ್ತ, ಪೈಗಂಬರ್ ಎಲ್ಲರೂ ಒಂದೆ.
– ಜನಾರ್ದನ ಪೂಜಾರಿ