ಮಹಾನಗರ: ಹಲವು ಸಮಸ್ಯೆ- ಸವಾಲುಗಳನ್ನು ಎದುರಿ ಸುತ್ತಿ ರುವ ಮಂಗಳೂರಿನ ಕಸ್ಬಾ ಬೆಂಗ್ರೆಯಲ್ಲಿ ಶಾಲಾ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಅನು ಕೂಲವಾಗಲು ಪದವೀಧರ ಯುವಕರ ತಂಡವೊಂದು ಕೋಚಿಂಗ್ ಹಾಗೂ ಪುಸ್ತಕಾಲಯದ ಮುಖೇನ ಶ್ರಮಿಸುತ್ತಿದೆ!
ಪದವಿ ಮುಗಿಸಿರುವ ಕಸ್ಬಾ ಬೆಂಗ್ರೆಯ 11 ಮಂದಿಯ ತಂಡ ಇಲ್ಲಿ “ಕಸ್ಬಾ ಗ್ರಾಜ್ಯುವೆಟ್ ಫಾರಂ’ ಅನ್ನು ಕೆಲವು ವರ್ಷದ ಹಿಂದೆ ಆರಂಭಿಸಿತ್ತು. ಸ್ಥಳೀಯ ಮಕ್ಕಳಿಗೆ ಶೈಕ್ಷಣಿಕವಾಗಿ ನೆರವಾಗುವ ಉದ್ದೇಶದಿಂದ “ಫಾರಂ’ ಕೆಲವು ಕಾರ್ಯಯೋಜನೆಯನ್ನು ಆಯೋಜಿಸಿತು.
ಕಸ್ಬಾ ಬೆಂಗ್ರೆಯಲ್ಲಿರುವ ಬೋಟ್ ಪ್ಯಾಸೆಂಜರ್ ಪ್ರಯಾಣಿಕರ ತಂಗುದಾಣ ದಲ್ಲಿ ಫಾರಂ ವತಿಯಿಂದ “ಕಸ್ಬಾ ಪಬ್ಲಿಕ್ ಲೈಬ್ರೆರಿ ಆ್ಯಂಡ್ ಇನಾ#ರ್ಮೆಶನ್ ಸೆಂಟರ್’ ಆರಂಭಿಸಲಾಗಿದೆ. ಮಕ್ಕಳಿಗೆ ಶೈಕ್ಷಣಿಕವಾಗಿ ನೆರವಾಗುವ ಪುಸ್ತಕಗಳನ್ನು ಇಲ್ಲಿ ಜೋಡಿಸಿ ಡಲಾಗಿದೆ. ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್, ಅಲೋಶಿಯಸ್ ಎಂಎಸ್‌ಡಬ್ಲ್ಯು ಬಳಗ ಸಹಿತ ಇತರ ನೆಲೆಯಿಂದ ಪುಸ್ತಕಗಳನ್ನು ಇಲ್ಲಿಗೆ ನೀಡಲಾಗಿದೆ. ಸುಮಾರು 1 ಸಾವಿರ ಪುಸ್ತಕಗಳಿವೆ. ಈ ಪೈಕಿ ಶೇ. 70ರಷ್ಟು ಶಿಕ್ಷಣ ಸಂಬಂಧಿತ ಪುಸ್ತಕಗಳು.
ಸೆಂಟರ್ ಅನ್ನು ಮಕ್ಕಳಿಗೆ ತರಬೇತಿ ನೀಡುವ ತಾಣವಾಗಿಯೂ ಪರಿವರ್ತಿ ಸಲಾ ಗಿದೆ. ಮಕ್ಕಳಿಗೆ ಬೆಳಗ್ಗೆ 8ರಿಂದ 9.15ರ ವರೆಗೆ ಹಾಗೂ ಸಂಜೆ 4.30ರಿಂದ 6ರ ವರೆಗೆ ಉಚಿತ ಟ್ಯೂಶನ್ ಕೂಡ ಇಲ್ಲಿ ನೀಡಲಾಗುತ್ತದೆ. 40 ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಪರೀಕ್ಷೆ ಹತ್ತಿರವಾಗುವ ಸಂದರ್ಭ ಟ್ಯೂಶನ್‌ಗೆ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಿರುತ್ತದೆ. ತರಬೇತಿ ನೀಡುವವರನ್ನು ಸೆಂಟರ್ ವತಿ ಯಿಂದಲೇ ನಿಯೋಜಿಸಲಾಗುತ್ತದೆ. ಕಸ್ಬಾ ಬೆಂಗ್ರೆಯಲ್ಲಿ ನೆಟ್‌ವರ್ಕ್ ಸಮಸ್ಯೆ ಇರುವ ಕಾರಣ ದಿಂದ ಆವಶ್ಯವಿರುವ ಮಕ್ಕಳಿಗೆ ಉಚಿತ ವೈಫೈ ವ್ಯವಸ್ಥೆಯನ್ನೂ ಇಲ್ಲಿ ಮಾಡಲಾಗಿದೆ. ಆನ್‌ಲೈನ್ ತರಗತಿ ವೇಳೆಗೆ ಇದು ಹೆಚ್ಚು ಉಪಯೋಗಕ್ಕೆ ಬಂದಿತ್ತು. ಬೆಂಗ್ರೆ ಕಸ್ಬಾದ ಸ. ಪ್ರೌ.ಶಾಲೆಯಲ್ಲಿ ಈ ಹಿಂದೆ ಶೇ.40ರಷ್ಟು ಫಲಿತಾಂಶ ಬರುತ್ತಿತ್ತು. ಇದನ್ನು ಮನಗಂಡು ಕಸ್ಬಾ ಗ್ರಾಜ್ಯು ವೆಟ್ ಫಾರಂ ಆ ಮಕ್ಕಳಿಗೆ ಹೆಚ್ಚಿನ ತರ ಬೇತಿ ನೀಡಲು ಉದ್ದೇಶಿಸಿ, ಟ್ಯೂಶನ್ ಆರಂಭಿಸಿತು ಕ್ರಮೇಣ ಶಾಲಾ ಫಲಿತಾಂಶವೂ ಶೇ. 70ಕ್ಕೂ ಮೀರಿದೆ.
ಇದನ್ನೂ ಓದಿ:ನಕಲಿ ನಂಬರ್ ಪ್ಲೇಟ್ ಬಳಸಿ ಬೈಕ್ ಮಾರಾಟ ಮಾಡುತ್ತಿದ್ದ ಜಾಲ ಭೇದಿಸಿದ ಕೊರಟಗೆರೆ ಪೊಲೀಸರು
ಸರಕಾರಿ ಸೇವೆಗೆ ನೆರವು!
ಕಸ್ಬಾ ಗ್ರಾಜ್ಯುವೆಟ್ ಫಾರಂನಲ್ಲಿ 11 ಜನ ಟ್ರಸ್ಟಿಗಳಿದ್ದಾರೆ. ಮಹಮ್ಮದ್ ರಫೀಕ್ ಅಧ್ಯಕ್ಷರಾಗಿರುವ ಈ ಟೀಮ್‌ನಲ್ಲಿ ಪದವಿ, ಅದಕ್ಕಿಂತ ಉನ್ನತ ಶಿಕ್ಷಣ ಪೂರ್ಣಗೊಳಿ ಸಿದವರಿ ದ್ದಾರೆ. ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ನೆರವಾಗುವ ಈ ಸಂಸ್ಥೆಯು ವಿದ್ಯಾರ್ಥಿಗಳ ಉದ್ಯೋಗ ಸಂಬಂಧಿತ ಕಾರ್ಯದಲ್ಲಿಯೂ ಸ್ಪಂದಿಸುತ್ತಿದೆ. ಸರಕಾರಿ ಅಥವಾ ಇತರ ಉದ್ಯೊಧೀಗವಿದ್ದರೆ ಅದಕ್ಕೆ ಅರ್ಜಿ ಹಾಕುವುದು ಅಥವಾ ಸಾರ್ವಜನಿಕರಿಗೆ ಸರಕಾರಿ ಸೇವೆ ಪಡೆ ಯಲು ನೆರ ವಾಗುವ ಮೂಲಕ ಫಾರಂ ಸ್ಥಳೀಯರ ಪಾಲಿಗೆ ಮಹತ್ವದ ಕಾರ್ಯ ನಡೆಸುತ್ತಿದೆ.
“ಗ್ರಾಜ್ಯುವೆಟ್ ಫಾರಂ’
ಕಸ್ಬಾ ಬೆಂಗ್ರೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿ ಸ್ಪಂದಿಸುವ ಇರಾದೆಯಿಂದ “ಗ್ರಾಜ್ಯುವೆಟ್ ಫಾರಂ’ ರೂಪಿಸಲಾಗಿದೆ. ಪುಸ್ತಕಾಲಯ ಸಹಿತ ವಿವಿಧ ಆಯಾಮಗಳಲ್ಲಿ ಶಿಕ್ಷಣ ಹಾಗೂ ಸಾಮಾಜಿಕ ಜವಾಬ್ದಾರಿಯ ಕಾರ್ಯ ಗಳನ್ನು ಸಂಸ್ಥೆಯು ನಡೆಸುತ್ತಾ ಬಂದಿದೆ.
-ಅಬ್ದುಲ್ ತೈಯೂ¸ ಜತೆಕಾರ್ಯದರ್ಶಿ, ಕಸ್ಬಾ ಗ್ರಾಜ್ಯುವೆಟ್ ಫಾರಂ