Advertisement

ಕ್ಯಾಬ್‌ ದೋಸ್ತ್ನಿಂದ ಉಚಿತ ಐಟಿ ರಿಟರ್ನ್ಸ್ ಅಭಿಯಾನ

10:29 AM Mar 24, 2018 | Team Udayavani |

ಬೆಂಗಳೂರು: ಟ್ಯಾಕ್ಸಿ ಚಾಲಕರು ನಿಗದಿತ ಅವಧಿಯೊಳಗೆ ತೆರಿಗೆ ಪಾವತಿ ಮಾಡುವ ಸಂಬಂಧ ಕ್ಯಾಬ್‌ ದೋಸ್ತ್ ಸಂಸ್ಥೆ ಉಚಿತವಾಗಿ ಆದಾಯ ತೆರಿಗೆ ಸಲ್ಲಿಕೆ (ಐಟಿ ರಿಟರ್ನ್ಸ್) ಅಭಿಯಾನ ಆರಂಭಿಸಿದೆ. ನಗರದ ವಿವಿಧೆಡೆ ಕ್ಯಾಬ್‌ ದೋಸ್ತ್ ಮಾ.20ರಿಂದಲೇ ಆರಂಭಿಸಿರುವ ಅಭಿಯಾನ 26ರವರೆಗೆ ನಡೆಯಲಿದೆ. ಮಾ.24 ಮತ್ತು 25ರಂದು ಮಲ್ಲೇಶ್ವರ ಆಟದ ಮೈದಾನದಲ್ಲಿ ಬೆ.10.30ರಿಂದ ಸಂಜೆ 6ರವರೆಗೆ ಅಭಿಯಾನ ನಡೆಯಲಿದೆ. ಟ್ಯಾಕ್ಸಿ ಚಾಲಕರು ಪಾನ್‌ ಕಾರ್ಡ್‌, ಆಧಾರ್‌ ಕಾರ್ಡ್‌, ಗುರುತಿನ ಚೀಟಿ, ಬ್ಯಾಂಕ್‌ ಸ್ಟೇಟ್‌ಮೆಂಟ್‌ ದಾಖಲೆಗಳನ್ನು ಕಡ್ಡಾಯವಾಗಿ ತರಬೇಕು. ತೆರಿಗೆ ಪಾವತಿ ಮಾಡುವುದರಿಂದ ಉಂಟಾಗುವ ಅನುಕೂಲಗಳು ಹಾಗೂ ಸಾಧಕ-ಬಾಧಕಗಳ ಬಗ್ಗೆ ಆದಾಯ ತೆರಿಗೆ ಇಲಾಖೆಯ ನುರಿತ ತಜ್ಞರ ಸಲಹೆ ಪಡೆಯುವ ಅವಕಾಶ ಕೂಡ ಕಲ್ಪಿಸಲಾಗಿದೆ ಎಂದು ಕ್ಯಾಬ್‌ ದೋಸ್ತ್ ಸಂಸ್ಥಾಪಕಿ ಯಮುನಾ ಶಾಸ್ತ್ರಿ ತಿಳಿಸಿದ್ದಾರೆ. ಮಾಹಿತಿ ಮೊ.95909 06906, 97398 85822 ಸಂಪರ್ಕಿಸಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next