Advertisement

Rowing ಬಲರಾಜ್‌ಗೆ ಪ್ಯಾರಿಸ್‌ ಒಲಿಂಪಿಕ್ಸ್‌ ಟಿಕೆಟ್‌

11:46 PM Apr 21, 2024 | Team Udayavani |

ಹೊಸದಿಲ್ಲಿ: ರೋವರ್‌ ಬಲರಾಜ್‌ ಪನ್ವಾರ್‌, ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ದಕ್ಷಿಣ ಕೊರಿಯಾದ ಚುಂಗುjವಿನಲ್ಲಿ ನಡೆದ ಏಷ್ಯನ್‌ ಒಲಿಂಪಿಕ್‌ ಕ್ವಾಲಿಫೈಯರ್‌ನ ಪುರುಷರ ರೋವಿಂಗ್‌ ಸಿಂಗಲ್‌ ಸ್ಕಲ್‌ ವಿಭಾಗದಲ್ಲಿ ಅವರು ತೃತೀಯ ಸ್ಥಾನ ಪಡೆದುಕೊಂಡರು. ಈ ಮೂಲಕ, ಪ್ಯಾರಿಸ್‌ ಒಲಿಂಪಿಕ್ಸ್‌ ಟಿಕೆಟ್‌ ಪಡೆದ ಮೊದಲ ರೋವರ್‌ ಎಂದ ಹಿರಿಮೆಗೆ ಅವರು ಪಾತ್ರರಾಗಿದ್ದಾರೆ. ಅರ್ಹತಾ ಸ್ಪರ್ಧೆಯಲ್ಲಿ ಬಲರಾಜ್‌ ಪನ್ವಾರ್‌, 2 ಕಿ.ಮಿ. ದೂರವನ್ನು 7 ನಿಮಿಷ 1 ಸೆಕೆಂಡಿನಲ್ಲಿ ಕ್ರಮಿಸುವ ಮೂಲಕ ಕಂಚಿನ ಪದಕ ತನ್ನದಾಗಿಸಿಕೊಂಡರು.

Advertisement

ಒಲಿಂಪಿಕ್ಸ್‌ ಅರ್ಹತಾ ಶೂಟಿಂಗ್‌ ಮನು, ಅನೀಶ್‌ ಉತ್ತಮ ಪ್ರದರ್ಶನ
ಇಲ್ಲಿನ ಕರ್ಣಿ ಸಿಂಗ್‌ ಮೈದಾನದಲ್ಲಿ ನಡೆಯು ತ್ತಿರುವ ಒಲಿಂಪಿಕ್ಸ್‌ ಅರ್ಹತಾ ಶೂಟಿಂಗ್‌ನಲ್ಲಿ ಮನು ಭಾಕರ್‌, ಅನೀಶ್‌ ಭನ್ವಾಲ ಉತ್ತಮ ಪ್ರದರ್ಶನ ಮುಂದುವರಿಸಿದ್ದಾರೆ. 2ನೇ ಅರ್ಹತಾ ಸುತ್ತಿನ 25 ಮೀ. ಪಿಸ್ತೂಲ್‌ನಲ್ಲಿ ಮನು ಒಟ್ಟು 585 ಅಂಕ ಗಳಿಸಿದ್ದಾರೆ. ಶನಿವಾರ ಅವರು 1ನೇ ಅರ್ಹತಾ ಸುತ್ತಿನಲ್ಲಿ ಗೆಲುವು ಸಾಧಿಸಿದ್ದರು. ಈ ವಿಭಾಗದಲ್ಲಿ ಈಶಾ ಸಿಂಗ್‌ 581 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next