ಹೊಸದಿಲ್ಲಿ: ಕೊರಿಯಾದಲ್ಲಿ ಆರಂಭಗೊಂಡ 15ನೇ ಏಷ್ಯನ್ ಏರ್‌ಗನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಭರ್ಜರಿ ಆರಂಭ ಮಾಡಿದೆ. ಒಲಿಂಪಿಯನ್ ದಿವ್ಯಾಂಶ್ ಸಿಂಗ್ ಪನ್ವಾರ್ ಚಿನ್ನದ ಪದಕ ಹಾಗೂ ಕಿರಣ್ ಅಂಕುಶ್ ಜಾಧವ್ ಬೆಳ್ಳಿ ಪದಕ ಗೆದ್ದು ಸಂಭ್ರಮಿಸಿದ್ದಾರೆ.
ದಿವ್ಯಾಂಶ್ ಸಿಂಗ್ 10 ಮೀ. ಏರ್ ರೈಫಲ್ ಜೂನಿಯರ್ ಸ್ಪರ್ಧೆಯಲ್ಲಿ ಬಂಗಾರಕ್ಕೆ ಗುರಿ ಇರಿಸಿದರು. ಅವರು ಆತಿಥೇಯ ಕೊರಿಯಾದ ಬಾಂಗ್ ಸೆಂಗೊ ವಿರುದ್ಧ 17-9 ಅಂಕಗಳ ಮೇಲುಗೈ ಸಾಧಿಸಿದರು. ಇದೇ ವಿಭಾಗದ ಸ್ಪರ್ಧೆಯಲ್ಲಿ ಶ್ರೀಕಾರ್ತಿಕ್ ಶಬರಿರಾಜ್ ರವಿಶಂಕರ್ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.
ಹಾಲಿ ವಿಶ್ವ ಚಾಂಪಿಯನ್ ರುದ್ರಾಂಕ್ ಪಾಟೀಲ್ 4ನೇ, ಅರ್ಜುನ್ ಬಬುಟ 7ನೇ ಸ್ಥಾನಿಯಾದರು. ಅಂಕುಶ್ ಜಾಧವ್ ಅವರಿಗೆ 10 ಮೀ. ಏರ್ ರೈಫಲ್ ಸ್ಪರ್ಧೆಯ ಸೀನಿಯರ್ ವಿಭಾಗದಲ್ಲಿ ರಜತ ಒಲಿಯಿತು.