ಇಂಡಿ: ಪಟ್ಟಣದ ಚವಡಿಹಾಳ ರಸ್ತೆಯಲ್ಲಿರುವ ಸ್ವಾಮಿ ಅಯ್ಯಪ್ಪ ದೇವಸ್ಥಾನದ ಆವರಣದಲ್ಲಿ ಸ್ವಾಮಿ ಅಯ್ಯಪ್ಪಸ್ವಾಮಿ 26ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ, ರಕ್ತದಾನ, ನೇತ್ರದಾನ, ಕ್ಷಯರೋಗ ನಿರ್ಮೂಲನೆ ಜಾಗೃತಿ ಸೇರಿದಂತೆ ಇನ್ನಿತರ ಕಾರ್ಯಕ್ರಮ ಜರುಗಿದವು.
ಈ ಸಂದರ್ಭದಲ್ಲಿ ಡಾ| ರಾಜೇಶ ಕೋಳೆಕರ್, ಡಾ| ಪ್ರಶಾಂತ ಧೂಮಗೊಂಡ ಮಾತನಾಡಿ, ಜಾತ್ರಾ ಮಹೋತ್ಸವದಲ್ಲಿ ರಾಯಲ್ ಗುರುಸ್ವಾಮಿಗಳ ಸಾಮಾಜಿಕ ಕಳಕಳಿಯ ಮೇರೆಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ 63 ಜನ ಯುವಕರು ರಕ್ತದಾನ ಮಾಡಿದರು. 25 ಜನ ಯುವಕರು ನೇತ್ರದಾನ ವಾಗ್ಧಾನ ಮಾಡಿದರು. 40 ಜನ ಕೋವಿಡ್ ಪರೀಕ್ಷೆ ಮಾಡಿಸಿಕೊಂಡರು, 10 ಜನ ಕೋವಿಡ್ ಲಸಿಕೆ ಪಡೆದರೆ,45 ಜನರ ಶುಗರ್, ಬಿ.ಪಿ. ಪರೀಕ್ಷೆ ನಡೆಸಲಾಯಿತು.
ರಾಯಲ್ ಗುರುಸ್ವಾಮೀಜಿ ಮಾತನಾಡಿ, ಸತತ 26 ವರ್ಷಗಳಿಂದ ಅಯ್ಯಪ್ಪಸ್ವಾಮೀಜಿ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳುತ್ತಿದ್ದೇವೆ. ಕಳೆದ ನಾಲ್ಕಾರು ವರ್ಷಗಳಿಂದ ದೇವಸ್ಥಾನದ ಜೀರ್ಣೋದ್ದಾರ ಮಾಡಲಾಗುತ್ತಿದೆ. ಭಕ್ತರ ಸಹಕಾರದಿಂದ ಜಾತ್ರೆ ಅದ್ಧೂರಿಯಾಗಿ ಜರುಗಲಿದೆ. ನೂರಾರು ಮಾಲಾಧಾರಿಗಳುಮಾಲೆಧರಿಸಿವೃತಕೈಗೊಂಡಿದ್ದಾರೆ. ಭಕ್ತರ ಆರೋಗ್ಯದ ಹಿತದೃಯಿಂದ ಜಾತ್ರೆಯಲ್ಲಿ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ ಎಂದರು.
ರಾಯಲ್ ಗುರುಸ್ವಾಮಿಗಳ ನೇತೃತ್ವದಲ್ಲಿ ಡಾ| ಪ್ರಶಾಂತ ಧೂಮಗೊಂಡ, ಡಾ| ರಾಜೇಶ ಕೋಳೆಕರ್, ಬಸವರಾಜ ಪಾಟೀಲ, ಚಂದ್ರಾಮ ಮೇಡೇದಾರ, ಶಾಂತು ಹೊಸಮನಿ, ಸುಭಾಶ ಶೆಟ್ಟಿ, ಸುನೀಲಗೌಡ ಬಿರಾದಾರ, ರಾಚು ಬಡಿಗೇರ, ಆನಂದ ದೇವರ, ಪ್ರವೀಣ ಮಠ, ಆಶಾ ಕಾರ್ಯಕರ್ತರು ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು