Advertisement

ನಗರದಲ್ಲಿ ಹಸಿದವರಿಗೆ ಉಚಿತ ಊಟ

05:56 PM May 12, 2021 | Team Udayavani |

ತುಮಕೂರು: ಕೊರೊನಾ ಈ ಸಂಕಷ್ಟದ ವೇಳೆಹಸಿದುಕೊಂಡು ಯಾರೂ ಇರಬಾರದುಎಂದು ಜಿಲ್ಲೆಯಲ್ಲಿ ಇರುವ ಇಂದಿರಾಕ್ಯಾಂಟೀನ್‌ಗಳಲ್ಲಿ 3 ಹೊತ್ತು ಊಟ ಸಿಗುವಂತೆಮಾಡಿದ್ದು, ಮಂಗಳವಾರದಿಂದಲೇ ನಗರದಲ್ಲಿಉಚಿತ ಊಟ ಕೊಡುವ ಯೋಜನೆಗೆ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ್‌ ಚಾಲನೆ ನೀಡಿದರು.

Advertisement

ಈ ವೇಳೆ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ್‌ ಮಾತನಾಡಿ, ಲಾಕ್‌ಡೌನ್‌ ಘೋಷಣೆಯಾಗಿರುವುದರಿಂದ ಈ ಸಂದರ್ಭದಲ್ಲಿ ಬಡವರು, ಕೂಲಿಕಾರ್ಮಿಕರು, ವಲಸಿಗರು ಸೇರಿದಂತೆ ಇತರೆದುರ್ಬಲ ವರ್ಗದವರಿಗೆ ಅನುಕೂಲವಾಗುವನಿಟ್ಟಿನಲ್ಲಿ ಸರ್ಕಾರದ ಆದೇಶದಂತೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ  ಚಾಲ್ತಿಯಲ್ಲಿರುವ ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತವಾಗಿಊಟ ವಿತರಿಸಲಾಗುವುದು ಎಂದರು.

ಕೋವಿಡ್‌ ಮಾರ್ಗಸೂಚಿಗಳ®ಯ ‌Ì ಉಚಿತವಾಗಿ ಬೆಳಗಿನ ಉಪಾಹಾರ, ಮಧ್ಯಾಹ್ನ ಹಾಗೂರಾತ್ರಿ ಊಟ ನೀಡಲು ಅಗತ್ಯ ಕ್ರಮವಹಿಸಲಾಗುವುದು. ನಿತ್ಯ ಆಹಾರ ಸೇವಿಸುವ ಜನರಸಂಖ್ಯೆ ವಿವರಗಳನ್ನು ಕಡ್ಡಾಯವಾಗಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರುಮತ್ತು ಸ್ಥಳೀಯ ಸಂಸ್ಥೆಗಳ ಮುಖ್ಯÓರು‌§ಪರಿವೀಕ್ಷಣೆ ಮಾಡಬೇಕು.  ನಿಗದಿಪಡಿಸಲಾಗಿರುವ ಅಗತ್ಯ ಕ್ರಮಗಳನ್ನು ಯಾವುದೇಲೋಪಗಳಿ ಲ್ಲದೆ ಕೈಗೊಳ್ಳಬೇಕು ಎಂದುನಿರ್ದೇಶಿಸಿದರು.

ಪಾಲಿಕೆ ಆಯುಕ್ತೆ ರೇಣುಕಾ ಭೇಟಿ: ನಗರದಲ್ಲಿಇರುವ ನಾಲ್ಕು ಇಂದಿರಾ ಕ್ಯಾಂಟೀನ್‌ಗಳಿಗೆತುಮಕೂರು ಪಾಲಿಕೆ ಆಯುಕ್ತೆ ರೇಣುಕಾಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಂದಿರಾಕ್ಯಾಂಟೀನ್‌ಗಳಲ್ಲಿ ಜನರಿಗೆ ಉಚಿತವಾಗಿ ಊಟನೀಡಲಾಗುತ್ತಿದ್ದು, ಆರ್ಥಿಕವಾಗಿ ಸಂಕಷ್ಟದಲ್ಲಿಇರುವವರು, ಕೂಲಿ ಕಾರ್ಮಿಕರು ಅನಾಥರುಇಲ್ಲಿ ಊಟ ಮಾಡಬಹುದಾಗಿದೆ.

ಊಟಮಾಡಲು ಬರುವವರು ಕೊರೊನಾ ಮಾರ್ಗಸೂಚಿಯನ್ನು ತಪ್ಪದೇ ಪಾಲಿಸಬೇಕು. ನಗರದಲ್ಲಿಇರುವ ನಾಲ್ಕು ಇಂದಿರಾ ಕ್ಯಾಂಟೀನ್‌ನಿಂದಈವರೆಗೆ 1100 ರಿಂದ 1200 ಜನರು ಊಟಮಾಡುತ್ತಿದ್ದರು. ಈಗ 2000 ಜನರ ವರೆಗೆನಾವು ಅವಕಾಶ ಮಾಡಿಕೊಂಡಿದ್ದೇವೆ ಎಂದರು.ತುಮಕೂರು ಮಹಾನಗರ ಪಾಲಿಕೆ ಯಿಂದಇಂದಿರಾ ಕ್ಯಾಂಟೀನ್‌ ಮೂಲಕ ನೀಡುತ್ತಿರುವಉಚಿತ ಊಟ ನೀಡಲಾಗುತ್ತಿದ್ದು, ಜನರುಕೋವಿಡ್‌ ನಿಯಮ ಪಾಲಿಸಬೇಕು ಎಂದುಮೇಯರ್‌ ಬಿ.ಜಿ.ಕೃಷ್ಣಪ್ಪ ಮನವಿ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next