Advertisement
ಐಡಿ ಕಾರ್ಡ್ ತೋರ್ಸಿದ್ರೆ ಸಾಕು…ಹೌದು, “ಭಟ್ರ ಮನೆ’ ಬೇರೆ ಹೋಟೆಲ್‌ಗಳಂತೆಯೇ ಇದ್ದರೂ, ಇಲ್ಲಿ ದೇಶಭಕ್ತಿಯ ಜಾಗೃತಿಯೊಂದು ನಿಮ್ಮ ಮನಸ್ಸಿಗೆ ತಟ್ಟುತ್ತದೆ. ಪ್ಲೇಟಿನಲ್ಲಿದ್ದ ತಿಂಡಿಯನ್ನು ಬಾಯಿಗೆ ಹಾಕಿಕೊಳ್ಳುತ್ತಾ ಹಾಗೆ ಗೋಡೆಯ ಮೇಲಕ್ಕೆ ನೋಡಿದರೆ ಸಾಕು, ಅಲ್ಲಿ ನೇತುಬಿದ್ದ ಸೈನಿಕರ ಫಲಕಗಳು, ಎಲ್ಲೋ ಕಾರ್ಗಿಲ್‌ನಲ್ಲೋ, ಸೈನಿಕರ ಕ್ಯಾಂಪ್‌ನಲ್ಲೋ ಇದ್ದೀವೇನೋ ಭಾವವನ್ನು ಹುಟ್ಟುಹಾಕುತ್ತವೆ. ಸೈನಿಕರು ಬಿಲ್ ಕೌಂಟರಿನಲ್ಲಿ ತಮ್ಮ ಐಡಿ ಕಾರ್ಡ್ ತೋರಿಸಿದರೆ, ಇಲ್ಲಿ ಉಚಿತ ಊಟೋಪಚಾರ ಪಡೆಯಬಹುದು.
“ಭಟ್ಟರ ಮನೆ’ಯ ಜಗದೀಶ್ ಅವರು ಕತಾರ್ ಹಾಗೂ ದುಬೈನಲ್ಲಿ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದವರು. ಒಂದು ವರ್ಷದ ಹಿಂದೆ ಬೆಂಗಳೂರಿಗೆ ಮರಳಿದ ಅವರು ಹೋಟೆಲ್ ಉದ್ಯಮ ಶುರು ಮಾಡಿದ್ದಾರೆ. ಸೈನಿಕರ ಮೇಲೆ ವಿಪರೀತ ಪ್ರೀತಿ ಇದ್ದ ಕಾರಣಕ್ಕಾಗಿ ತಮ್ಮ ಹೋಟೆಲ್‌ನಲ್ಲಿ ಈ “ಭಾಗ್ಯ’ವನ್ನು ಅವರು ಕಲ್ಪಿಸಿದ್ದಾರೆ. ಅಂದಹಾಗೆ, ಈ ಹೋಟೆಲ್ ಇದಕ್ಕೆ ಮಾತ್ರ ವಿಶೇಷವಲ್ಲ. ಕಡಿಮೆ ದರದಲ್ಲಿ, ಗುಣಮಟ್ಟದ ಆಹಾರವನ್ನು ಇಲ್ಲಿ ಸವಿಯಬಹುದು. ಆಹಾರಗಳಿಗೆ ದುಬಾರಿ ಬೆಲೆಯಿಟ್ಟು, ಗ್ರಾಹಕರ ಜೇಬಿನಿಂದ ಹಣ ಕೀಳುವ ಬೆಂಗಳೂರಿನಲ್ಲಿ ಇಂಥ ಹೋಟೆಲ್‌ಗಳು ಬಹಳ ಅಪರೂಪ ಎನ್ನಬಹುದು. ಜಗದೀಶ್ ಅವರು ಗೋವಿಂದನಗರದಲ್ಲಿ ಸದ್ಯದಲ್ಲೇ ಇನ್ನೊಂದು ಹೋಟೆಲ್ ಆರಂಭಿಸಲಿದ್ದು, ಅಲ್ಲಿಯೂ ಸೈನಿಕರಿಗೆ ಉಚಿತ ಊಟ ನೀಡಲಾಗುತ್ತದೆ.
Related Articles
ಸೌತ್ ಇಂಡಿಯನ್, ನಾರ್ತ್ ಇಂಡಿಯನ್, ಚೈನೀಸ್, ಚಾಟ್ಸ್‌ಗಳ ಜೊತೆಗೆ ಇಲ್ಲಿ ಭಟ್ರ ಮನೆ ಸ್ಪೆಶಲ್ ತಿಂಡಿಗಳಾದ ಮಲೆನಾಡಿನ ಕೊಟ್ಟೆ ಕಡುಬು, ನೀರು ದೋಸೆ ಅಲ್ಲದೇ, ಇಡ್ಲಿ ಚಿಲ್ಲಿ, ಸ್ಪೆಶಲ್ ಬಿರಿಯಾನಿ, ಸ್ಪ್ಯಾನಿಶ್ ಮಂಚೂರಿಯನ್ನೂ ಸವಿಯಬಹುದು.
Advertisement
ವೆರೈಟಿ ವೆರೈಟಿ ದೋಸೆಸಬ್ಬಕ್ಕಿ ದೋಸೆ, ಪೈನಾಪಲ್ ದೋಸೆ, ಬನಾನ ದೋಸೆ, ನೂಡಲ್ಸ್ ದೋಸೆ ಹೀಗೆ ಹತ್ತಾರು ಬಗೆಯ ದೋಸೆಗಳೂ ಇಲ್ಲಿ ಲಭ್ಯ. ಎಲ್ಲಿದೆ?
ಭಟ್ರಮನೆ, ವಿಜಯಾ ಬ್ಯಾಂಕ್ ಎದುರು, ನಾಗರಬಾವಿ ಮುಖ್ಯರಸ್ತೆ, ಮೂಡಲಪಾಳ್ಯ
ಸಂಪರ್ಕ: 9986227788
ನಮ್ಮನ್ನು ಹಗಲು- ರಾತ್ರಿ ಕಾಯುವ ಸೈನಿಕರನ್ನು ಆದರದಿಂದ ಕಾಣುವುದು ನಮ್ಮ ಕರ್ತವ್ಯ. ಅದಕ್ಕಾಗಿ ನಾನು ನನ್ನ ಹೋಟೆಲ್‌ನಲ್ಲಿ ಸೈನಿಕರಿಗೆ ಮತ್ತು ಅವರ ಕುಟುಂಬದವರಿಗೆ ಉಚಿತ ಊಟ ನೀಡುತ್ತೇವೆ. ಇದೇನು ಮಹಾನ್ ಕೆಲಸವಲ್ಲದೇ ಇರಬಹುದು. ಆದರೆ, ಈ ದೇಶಕ್ಕೆ ಇದು ನನ್ನ ಪುಟ್ಟ ಕಾಣಿಕೆ.
– ಜಗದೀಶ್, ಹೋಟೆಲ್ ಮಾಲೀಕ - ಪ್ರಿಯಾಂಕಾ