Advertisement

2,054 ಮನೆಗೆ ಉಚಿತ ವಿದ್ಯುತ್‌ ಭಾಗ್ಯ!

01:18 PM Jan 19, 2022 | Team Udayavani |

ಚಿಕ್ಕಬಳ್ಳಾಪುರ: ಬಡತನ ರೇಖೆಗಿಂತ ಕೆಳಗಿರುವವರ ಮನೆಗೆ ಉಚಿತ ವಿದ್ಯುತ್‌ ಸಂಪರ್ಕ ಒದಗಿಸುವ ಬೆಳಕು ಯೋಜನೆಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಜಿಲ್ಲೆಯಲ್ಲಿ (ಚಿಂತಾಮಣಿಉಪವಿಭಾಗ ಸಹಿತ) 4,710 ಮನೆಗಳಿಗೆ ವಿದ್ಯುತ್‌ ಸಂಪರ್ಕ ನೀಡುವ ಗುರಿ ಹೊಂದಿದ್ದು, ಈಗಾಗಲೇ 2,054 ಫಲಾನುಭವಿಗಳ ಮನೆಗೆ ಕರೆಂಟ್‌ ಭಾಗ್ಯ ಸಿಕ್ಕಿದೆ.

Advertisement

ಇಂಧನ ಸಚಿವ ಸುನೀಲ್‌ಕುಮಾರ್‌ ಇಲಾಖೆಯಲ್ಲಿಹಲವು ರೀತಿಯಲ್ಲಿ ಬದಲಾವಣೆ ತರಲು ಯತ್ನಿಸಿದ್ದು, ಬೆಳಕುಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲುಮುಂದಾಗಿದ್ದಾರೆ. ವಿದ್ಯುತ್‌ಗೆ ಸಂಬಂಧಿ ಸಿದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಬೆಸ್ಕಾಂ ಮೂಲಕ ಈಗಾಗಲೇ ಪ್ರತಿತಿಂಗಳು ಕೊನೆ ಶನಿವಾರ ಗ್ರಾಹಕರ ಸಂವಾದ ಸಭೆ ನಡೆಸುತ್ತಿದ್ದಾರೆ. ಅಲ್ಲಿ ಸಲ್ಲಿಕೆ ಆಗುವ ದೂರುಗಳನ್ನು ತ್ವರಿತವಾಗಿಇತ್ಯರ್ಥಗೊಳಿಸಲು ಬೆಸ್ಕಾಂ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಜೊತೆಗೆ ಬೆಳಕು ಯೋಜನೆ ಸದ್ಬಳಕೆ ಮಾಡಿಕೊಳ್ಳಲು ಜಾಗೃತಿ ಮೂಡಿಸುತ್ತಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಚಿಂತಾಮಣಿ ತಾಲೂಕಿನಲ್ಲಿ ಅತ್ಯಧಿಕವಾಗಿ ವಿದ್ಯುತ್‌ ಸಂಪರ್ಕ ರಹಿತ ಮನೆಗಳನ್ನುಗುರುತಿಸಲಾಗಿದೆ. ಅಲ್ಲದೆ, ಶಿಡ್ಲಘಟ್ಟ ತಾಲೂಕಿನಲ್ಲಿ ಅತೀಕಡಿಮೆ ಅಂದರೆ 194 ಮನೆಗಳು ವಿದ್ಯುತ್‌ ಸಂಪರ್ಕಪಡೆದಿರಲಿಲ್ಲ. ಆ ಪೈಕಿ 181 ಮನೆಗೆ ವಿದ್ಯುತ್‌ ಸಂಪರ್ಕ ಒದಗಿಸುವುದರಲ್ಲಿ ಅಧಿ ಕಾರಿಗಳು ಯಶಸ್ವಿಯಾಗಿದ್ದಾರೆ.

ತಾಲೂಕು ಒಟ್ಟು ಮನೆ ಸಂಪರ್ಕ ಪ್ರಗತಿ

ಚಿಂತಾಮಣಿ 1,906 849 1,057

Advertisement

ಚಿಕ್ಕಬಳ್ಳಾಪುರ 528 255 273

ಗೌರಿಬಿದನೂರು 688 194 494

ಗುಡಿಬಂಡೆ 830 206 624

ಬಾಗೇಪಲ್ಲಿ 64 369 195

ಶಿಡ್ಲಘಟ್ಟ 194 181 13

ರಾಜ್ಯ ಇಂಧನ ಸಚಿವರ ಮತ್ತು ಬೆಸ್ಕಾಂ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರ ಸೂಚನೆ ಮೇರೆಗೆ ಚಿಂತಾಮಣಿ ಮತ್ತು ಚಿಕ್ಕಬಳ್ಳಾಪುರ ಉಪವಿಭಾಗದಲ್ಲಿ ವಿದ್ಯುತ್‌ ಸಂಪರ್ಕ ರಹಿತ ಮನೆಗಳನ್ನು ಗುರುತಿಸಿ ಅದಕ್ಕೆ ವಿದ್ಯುತ್‌ ಸಂಪರ್ಕವನ್ನು ಕಲ್ಪಿಸುವ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ವೆಂಕಟೇಶಪ್ಪ, ಆನಂದಕುಮಾರ್, ಕಾರ್ಯಪಾಲಕ ಅಭಿಯಂತರರು, ಬೆಸ್ಕಾಂ.

ಎಂ..ತಮೀಮ್ಪಾಷ

Advertisement

Udayavani is now on Telegram. Click here to join our channel and stay updated with the latest news.

Next