Advertisement
ಪ್ರೌಢಶಿಕ್ಷಣದಲ್ಲಿ 100 ಮಂದಿಗೆ ಅವಕಾಶ 8 ಮತ್ತು 9ನೇ ತರಗತಿಗಳಲ್ಲಿ ಕಲಿಯುತ್ತಿರುವ 100 ಬಾಲಕ, ಬಾಲಕಿಯರಿಗೆ ಪ್ರಾಯೋಜಕತ್ವದ ಅವಕಾಶ ಸಿಗಲಿದೆ. ಈ ಎರಡೂ ತರಗತಿ ಗಳಿಂದ ತಲಾ 50 ಪ್ರತಿಭಾನ್ವಿತರಿಗೆ ಈ ಅವಕಾಶ ಸಿಗಲಿದೆ. 2022-23ರಿಂದ ಈ ಯೋಜನೆ ಅನುಷ್ಠಾನಗೊಳ್ಳಲಿದ್ದು, ಧುಲೌ ಕೌನ್ (ದೆಹಲಿ), ನೊಯ್ಡಾ (ಉತ್ತರ ಪ್ರದೇಶ) ಹಾಗೂ ದಗ್‌ಶಾಯ್‌ನಲ್ಲಿರುವ (ಹಿಮಾಚಲ ಪ್ರದೇಶ) ಆರ್ಮಿ ಪಬ್ಲಿಕ್ ಶಾಲೆಗಳಲ್ಲಿ ಪ್ರಾಯೋಜಕತ್ವದ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡಲಾಗುತ್ತದೆ.
ಹೋಟೆಲ್ ಮ್ಯಾನೇಜ್ಮೆಂಟ್ ಆ್ಯಂಡ್ ಕೇಟರಿಂಗ್ ಮತ್ತು ಆರ್ಮಿ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಡಿಸೈನ್, ಗುವಾಹಟಿ, ಜಲಂಧರ್‌ನಲ್ಲಿರುವ ಆರ್ಮಿ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್, ಆರ್ಮಿ ಕಾಲೇಜ್ ಆಫ್ ನರ್ಸಿಂಗ್‌ನಲ್ಲಿ ಈ ಯೋಜನೆ 2021-22ರ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರಲಿದೆ. ಈ ಎಲ್ಲಾ ಕಾಲೇಜುಗಳಲ್ಲಿ ತಲಾ ಇಬ್ಬರಿಗೆ ಇಂಥ ಅವಕಾಶ ಸಿಗಲಿದೆ.