Advertisement

1ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಉಚಿತ ಶಿಕ್ಷಣ

05:40 PM May 23, 2021 | Team Udayavani |

ಮೈಸೂರು: ಕೋವಿಡ್‌ ಸಂಕಷ್ಟದಲ್ಲಿರುವಕುಟುಂಬದ ಮಕ್ಕಳಿಗೆ ಸುತ್ತೂರಿನ ವಸತಿ ಶಾಲೆಯಲ್ಲಿಉಚಿತ ಶಿಕ್ಷಣ ಅನುಕೂಲ ಕಲ್ಪಿಸಲು ಸುತ್ತೂರುಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕ್ರಮವಹಿಸಿದ್ದಾರೆ ಎಂದು ಜೆಎಸ್‌ಎಸ್‌ ಮಹಾ ವಿದ್ಯಾಪೀಠದ ಗೌರವಕಾರ್ಯದರ್ಶಿಎಸ್‌.ಶಿವಕುಮಾರಸ್ವಾಮಿ ತಿಳಿಸಿದ್ದಾರೆ.

Advertisement

ರಾಜ್ಯದ ಎಲ್ಲ ಭಾಗಗಳಲ್ಲಿ ಸಾವು-ನೋವುಗಳಾಗಿಸಂಕಷ್ಟದಲ್ಲಿರುವ ಕುಟುಂಬದ ಮಕ್ಕಳಿಗೆ ಸುತ್ತೂರುಶ್ರೀಕ್ಷೇತ್ರದ ವಸತಿ ಶಾಲೆಯಲ್ಲಿ ಉಚಿತ ಶಿಕ್ಷಣಅನುಕೂಲ ಕಲ್ಪಿಸಲಾಗುವುದು. 1ರಿಂದ 10ನೇತರಗತಿವರೆಗೆ ಗಂಡುಮಕ್ಕಳು ಮತ್ತು ಹೆಣ್ಣುಮಕ್ಕಳನ್ನುಶಾಲೆಗೆ ದಾಖಲಿಸಬಹುದಾಗಿದೆ.

ಮಕ್ಕಳನ್ನು ಶಾಲೆಗೆಸೇರಿಸಲು ಬಯಸುವ ಪೋಷಕರು ಹಾಗೂಕುಟುಂಬದ ಸದಸ್ಯರು 7411486938 ದೂರವಾಣಿಯಲ್ಲಿ ಸಂಪರ್ಕಿಸಿ ವಿವರ ಪಡೆದು ನೋಂದಾಯಿಸಿಕೊಳ್ಳಲುಕೋರಿದೆ.

ಕ್ವಾರಂಟೈನ್‌ಗೆ ಸ್ಥಳಾವಕಾಶ,ಉಚಿತ ಊಟ:ರಾಜ್ಯಾದ್ಯಂತ ಕೊರೊನಾಸೋಂಕು ಹರಡಿರುವಂತೆಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿಯೂವ್ಯಾಪಕವಾಗಿ ಹರಡುತ್ತಿದೆ.

ಕಾಯಿಲೆಯ ಲಕ್ಷಣಗಳಿದ್ದು ಪ್ರತ್ಯೇಕವಾಗಿ ವಾಸಮಾಡುವವರಿಗೆ ಹಾಗೂ ಕೊರೊನಾ ಸೋಂಕಿನಿಂದಗುಣಮುಖರಾಗುತ್ತಿರುವವರಿಗೆ ಪ್ರತ್ಯೇಕ ವಸತಿಸೌಲಭ್ಯದ ಅಗತ್ಯವಿರುತ್ತದೆ. ಎರಡೂ ಜಿಲ್ಲೆಗಳಲ್ಲಿ ಸುತ್ತೂರು ಮಠ ಹಾಗೂ ಜೆಎಸ್‌ಎಸ್‌ ಮಹಾ ವಿದ್ಯಾಪೀಠದ ಶಿಕ್ಷಣ ಸಂಸ್ಥೆಗಳ ಲಭ್ಯವಿರುವ ಸಮುದಾಯಭವನಗಳು ಹಾಗೂ ವಿದ್ಯಾರ್ಥಿನಿಲಯಗಳಲ್ಲಿ ಅವಕಾಶ ಕಲ್ಪಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

Advertisement

ಸುತ್ತೂರು, ಮೈಸೂರು, ನಂಜನಗೂಡು, ಚಾಮರಾಜನಗರ, ಗುಂಡ್ಲುಪೇಟೆ ಮತ್ತು ಕೊಳ್ಳೇಗಾಲಗಳಲ್ಲಿ ಶಾಲಾ-ಕಾಲೇಜುಗಳಿಗೆ ಹೊಂದಿಕೊಂಡಿರುವ ವಿದ್ಯಾರ್ಥಿನಿಲಯಗಳು ಹಾಗೂ ನಂಜನಗೂಡು, ಗುಂಡ್ಲುಪೇಟೆ, ತಿ.ನರಸೀಪುರ, ಎಚ್‌.ಡಿ.ಕೋಟೆ,ಸರಗೂರು, ಸುತ್ತೂರು ಹಾಗೂ ರಾಮಾಪುರಗಳಲ್ಲಿರುವ ಸಮುದಾಯ ಭವನಗಳನ್ನುಬಳಸಿಕೊಳ್ಳಬಹುದೆಂದು ಶಿವರಾತ್ರಿ ದೇಶಿಕೇಂದ್ರಸ್ವಾಮೀಜಿ ಎರಡೂ ಜಿಲ್ಲೆಗಳ ಉಸ್ತುವಾರಿ ಸಚಿವರಾದಎಸ್‌.ಟಿ. ಸೋಮಶೇಖರ್‌ ಹಾಗೂ ಎಸ್‌. ಸುರೇಶ್‌ಕುಮಾರ್‌ ಅವರಿಗೆ ಮೌಖೀಕವಾಗಿ ಹಾಗೂ ದೂರವಾಣಿ ಮೂಲಕ ತಿಳಿಸಿರುತ್ತಾರೆ.

ಎಲ್ಲಾ ಕಡೆ ಸ್ವತ್ಛತೆ ಇತ್ಯಾದಿ ನಿರ್ವಹಣೆ ಮಾಡಿ,ಉಚಿತವಾಗಿಊಟ-ತಿಂಡಿ ವ್ಯವಸ್ಥೆಯನ್ನು ಸುತ್ತೂರುಮಠ ಹಾಗೂ ಜೆಎಸ್‌ಎಸ್‌ಮಹಾವಿದ್ಯಾಪೀಠಗಳಿಂದಮಾಡಲಾಗುವುದು. ಔಷಧೋಪಚಾರ ಮತ್ತುವೈದ್ಯಕೀಯ ಉಪಚಾರಗಳನ್ನು ಸರ್ಕಾರದಿಂದ ಮಾಡಬಹುದೆಂದು ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next