Advertisement

ರೈತರಿಂದ ಖರೀದಿಸಿದ ತರಕಾರಿ ಉಚಿತ ವಿತರಣೆ

06:07 PM Jun 05, 2021 | Team Udayavani |

ಮೈಸೂರು: ಕಡಕೊಳ ಜಗದೀಶ್‌ ಅಭಿಮಾನಿ ಬಳಗ ಮತ್ತು ಡಿಟಿಎಸ್‌ ಫೌಂಡೇಷನ್‌ವತಿಯಿಂದ ರೈತರಿಂದ ನೇರವಾಗಿ ತರಕಾರಿಖರೀದಿಸಿ ಅದನ್ನು ಅಸಹಾಯಕರಿಗೆಉಚಿತವಾಗಿ ವಿತರಿಸುವ ಮೂಲಕಸಂಕಷ್ಟದಲ್ಲಿರುವ ರೈತರಿಗೆ ನೆರವಾದವು.

Advertisement

ನಗರದ ಚಾಮುಂಡಿಪುರಂ ಅಪೂರ್ವಹೋಟೆಲ್‌ನ ಮುಂಭಾಗ ಬಡ ಮತ್ತುಅಸಹಾಯಕ ಕುಟುಂಬಗಳಿಗೆ ತರಕಾರಿವಿತರಿಸಲಾಯಿತು.ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಮುಡಾ ಅಧ್ಯಕ್ಷ ಎಚ್‌.ವಿ.ರಾಜೀವ್‌,ಯಾವ ವಸ್ತು ಉತ್ಪಾದನೆಯಾಗುತ್ತೋಅದು ಸಮರ್ಪಕವಾಗಿ ಬಳಕೆಯಾಗಬೇಕು.ಇಲ್ಲದಿದ್ದರೆ ತರಕಾರಿ ಕೊಳೆತು ಹಾಳಾಗಲಿದೆ.

ತಾಜಾ ತರಕಾರಿಯನ್ನು ಉಚಿತವಾಗಿವಿತರಿಸುವ ಮೂಲಕ ಒಂದು ಕಡೆಗ್ರಾಹಕರು, ಸಾರ್ವಜನಿಕರಿಗೆ ತಲುಪಿಸುವವ್ಯವಸ್ಥೆ, ರೈತರಿಗೆ ಬೆನ್ನೆಲುಬಾಗಿ ನಿಲ್ಲುವಕೆಲಸವನ್ನು ಡಿಟಿಎಸ್‌ ಫೌಂಡೇಶನ್‌,ಜಗದೀಶ್‌ ಮತ್ತು ಗೆಳೆಯರುಮಾಡಿರುವುದಕ್ಕೆ ನನ್ನ ಕೃತಜ್ಞತೆ ಎಂದರು.

ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷಡಿ.ಟಿ.ಪ್ರಕಾಶ್‌ ಮಾತನಾಡಿ, ರೈತರಿಂದನೇರವಾಗಿ ತರಕಾರಿ ಖರೀದಿಸಿ, ಬಡವರಿಗೆಉಚಿತವಾಗಿ ನೀಡಿದರೆ ರೈತರ ಹೊಟ್ಟೆಯೂ ತುಂಬಲಿದೆ, ಬಡವರ ಹೊಟ್ಟೆಯೂತುಂಬಲಿದೆ ಎಂದು ಹೇಳಿದರು. ಈ ವೇಳೆಕಡಕೊಳ ಜಗದೀಶ್‌, ಅಜಯ್‌ ಶಾಸಿŒ,ಅಪೂರ್ವ ಸುರೇಶ್‌, ಬಸವರಾಜ್‌ ಬಸಪ್ಪಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next