Advertisement
ರಥೋತ್ಸವದ ದಿನ ಬೆಳಗ್ಗೆಯಿಂದಲೇ ಅಂಬಾದೇವಿ ದರ್ಶನಕ್ಕೆ ಸಾಲುಗಟ್ಟಿ ನಿಂತರು. ಪೊಲೀಸ್ ಬಂದೋಬಸ್ತ್ ನಡುವೆ ಸರದಿಯಲ್ಲಿ ದೇವಸ್ಥಾನದೊಳಕ್ಕೆ ತೆರಳಲು ಅವಕಾಶ ಮಾಡಿಕೊಡಲಾಗಿತ್ತು. ನಿಷೇಧದ ಹಿನ್ನೆಲೆಯಲ್ಲಿ ಕಾಯಿ ಸಮರ್ಪಿಸುವುದನ್ನು ತಡೆಯಲಾಗಿತ್ತು.
ದರ್ಶನ ಪಡೆದ ಭಕ್ತರು ಎಂದಿನಂತೆ ಖರೀದಿಯತ್ತ ಮುಖ ಮಾಡಿದರು. ಬುಧವಾರವೇ ಟ್ರಾಕ್ಟರ್, ಕ್ರೂಷರ್, ಕಾರುಗಳಲ್ಲಿ ಆಗಮಿಸಿದ್ದ ಭಕ್ತರು ದೇವಸ್ಥಾನ
ಹೊರಭಾಗದಲ್ಲಿ ಟೆಂಟ್ ಹೂಡಿದ್ದರು. ಬೆಳ್ಳಂಬೆಳಗ್ಗೆ ರಥೋತ್ಸವದಲ್ಲಿ ಪಾಲ್ಗೊಂಡ ಬಳಿಕ ಬೆಳಗ್ಗೆ ಸ್ಥಳದಲ್ಲಿಯೇ ಅಡುಗೆ ತಯಾರಿಸಿ ಊಟ ಮಾಡಿ, ಮಧ್ಯಾಹ್ನದ ಬಳಿಕ ಜಾತ್ರೆ ಮಾಡಿದರು. ಪ್ರವೇಶ ಭಾಗದಲ್ಲಿ ತಡೆ: ದೇವಸ್ಥಾನ ಪ್ರವೇಶಿಸುವ ಮಾರ್ಗದಲ್ಲಿ ಬ್ಯಾರಿಕೇಡ್ ಹಾಕಿ ಭಾರಿ ವಾಹನಗಳ ಪ್ರವೇಶ ತಡೆಯಲಾಯಿತು. ದ್ವಿಚಕ್ರ ವಾಹನ, ಕಾರು, ಟ್ರಾಕ್ಟರ್, ಕ್ರೂಷರ್ ಸೇರಿದಂತೆ ಇತರ ವಾಹನಗಳ ನಿಲುಗಡೆಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಪ್ರತಿ ಬಾರಿಯೂ ಕುರಿ ಬಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿತ್ತು. ಈ ಸಲ ಸರಳವಾಗಿಯೇ ಭಕ್ತರು ದೇವಿ ಜಾತ್ರೆ ಆಚರಿಸಿದರು. ಅಕ್ಕಪಕ್ಕದ ತಾಲೂಕು, ಜಿಲ್ಲೆ ಸೇರಿದಂತೆ ತಾಲೂಕಿನ ನಾನಾ ಮೂಲೆಯಿಂದ ಭಕ್ತರು ಆಗಮಿಸಿದ್ದರು. ವಾರದ ಕಾಲ ನಡೆಯುವ ಜಾತ್ರೆಯಲ್ಲಿ ಇನ್ನೂ ಹೆಚ್ಚಿನ ಭಕ್ತರು ಆಗಮಿಸುವ ಮುನ್ಸೂಚನೆಯಿದೆ.