Advertisement
ಮರಿಯಪ್ಪನಪಾಳ್ಯದ ಸುಧಾ (42) ವಂಚನೆ ಗೊಳಗಾದ ವರು. ಇತ್ತೀ ಚೆಗೆ ಟೆಲಿಗ್ರಾಂ ನಲ್ಲಿ ಸುಧಾ ಅವರಿಗೆ ಪಾರ್ಟ್ ಟೈಂ ಜಾಬ್ ಇರುವ ಬಗ್ಗೆ ಸಂದೇಶ ಬಂದಿತ್ತು. ಅದರಲ್ಲಿದ್ದ ನಂಬರ್ ಸಂಪರ್ಕಿಸಿದ ಸುಧಾ ಅವರಿಗೆ ಅಪರಿಚಿತರು ವಿಮಾನದ ಟಿಕೆಟ್ ಬುಕ್ ಮಾಡುವ ಟಾಸ್ಕ್ ಕೊಟ್ಟಿದ್ದರು. ವಿಮಾನದ ಟಿಕೆಟ್ ಬುಕ್ ಮಾಡಲು ಅಪರಿಚಿತರ ಬ್ಯಾಂಕ್ ಖಾತೆಗೆ ಆನ್‌ಲೈನ್ ಮೂಲಕ ಸುಧಾ 10 ಸಾವಿರ ರೂ. ವರ್ಗಾವಣೆ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಅಪರಿಚಿತರು ಸುಧಾ ಖಾತೆಗೆ 15 ಸಾವಿರ ರೂ. ಅನ್ನು ಜಮೆ ಮಾಡಿದ್ದರು. ವಿಮಾನದ ಟಿಕೆಟ್ ಬುಕ್ ಮಾಡಲು ಇನ್ನೂ ಹೆಚ್ಚಿನ ಹಣ ಪಾವತಿಸಿದರೆ ಹಣ ದ್ವಿಗುಣಗೊಳಿಸಬಹುದು, ಜೊತೆಗೆ ಕಮೀಷನ್ ಸಹ ಸಿಗಲಿದೆ ಎಂದು ನಂಬಿಸಿದ್ದರು. ಅದರಂತೆ ಸುಧಾ ಅವರು ಹಂತವಾಗಿ 5.42 ಲಕ್ಷ ರೂ. ಅನ್ನು ಅಪರಿಚಿತರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದರು. ನಂತರ ಅಪರಿಚಿತರು ಲಾಭಾಂಶವನ್ನೂ ನೀಡದೇ, ಅಸಲು ದುಡ್ಡನ್ನು ಹಿಂತಿರುಗಿಸದೇ ವಂಚಿಸಿದ್ದಾರೆ. ಇತ್ತ ಸುಧಾ ಈ ಬಗ್ಗೆ ಪ್ರಶ್ನಿಸಿದಾಗ ದುಡ್ಡು ಡ್ರಾ ಮಾಡಲು ಇನ್ನಷ್ಟು ಹಣ ವರ್ಗಾವಣೆ ಮಾಡುವಂತೆ ಅಪರಿಚಿತರು ಸೂಚಿಸಿದ್ದಾರೆ. ಸುಧಾ ಈ ಬಗ್ಗೆ ಪರಿಶೀಲಿಸಿದಾಗ ಇದು ಸೈಬರ್ ಕಳ್ಳರ ಕೈ ಚಳಕ ಎಂಬುದು ಗೊತ್ತಾಗಿದೆ.
Advertisement
Fraud: ಜಾಬ್ ಹೆಸರಲ್ಲಿ ಟಾಸ್ಕ್ ನೀಡಿ ಮಹಿಳೆಗೆ 5.42 ಲಕ್ಷ ರೂ.ವಂಚನೆ
12:37 PM Jan 24, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.