Advertisement
ಮಂಗಳೂರಿನಿಂದ ಬಂದಿದ್ದ ಮೇರಿನ್ ಪಿಂಟೋ ಅವರು ಮಳವಳ್ಳಿ ತಾಲೂಕಿನ ಶಿಂಷಾಪುರದಲ್ಲಿ ಕಳೆದ 10 ವರ್ಷಗಳಿಂದ ಶ್ಯಾಲೋಮ್ ಎಜುಕೇಷನಲ್ ಮತ್ತು ಚಾರಿಟಬಲ್ ಟ್ರಸ್ಟ್ ಸ್ಥಾಪಿಸಿ ಶಿಕ್ಷಣ ಸಂಸ್ಥೆ ಆರಂಭಿಸಿದ್ದರು. ಸಂಸ್ಥೆಗೆ ಹತ್ತಿರವಾಗಿದ್ದ ಸ್ವಾಮೀಜಿ ಯೊಬ್ಬರು ತಮಗೆ ಪರಿಚಿತವಿರುವ ಸೂರ್ಯ ಎಂಬ ವ್ಯಕ್ತಿಯನ್ನು ಪರಿಚಯಿಸಿ ನಿಮ್ಮ ಟ್ರಸ್ಟ್‌ಗೆ ಏನಾದರೂ ಸಹಾಯ ಅಗತ್ಯವಿದ್ದಲ್ಲಿ ಇವರು ನಿಮಗೆ ನೆರವಾಗುತ್ತಾರೆ ಎಂದು ತಿಳಿಸಿದ್ದರು. ಸ್ವಾಮೀಜಿ ಹೇಳಿದ ಮಾತನ್ನು ನಂಬಿ ಪರಿಚಿತನಾದ ವ್ಯಕ್ತಿಯಿಂದ ಸ್ಥಳೀಯವಾಗಿ ಸಣ್ಣಪುಟ್ಟ ಸಹಾಯವನ್ನು ಪಡೆದುಕೊಂಡಿದ್ದಾರೆ. ನಂತರ, ಶಿಕ್ಷಣ ಸಂಸ್ಥೆ ದೊಡ್ಡದಾಗಿ ನಿರ್ಮಾಣ ಮಾಡುವ ಉದ್ದೇಶದಿಂದ ಸೂರ್ಯನ ಬಳಿ ಹೇಳಿಕೊಂಡಿದ್ದಾರೆ.
Related Articles
Advertisement
ಇನ್ನು ಸೂರ್ಯ ಕೂಡ ಕಾರಿನಲ್ಲಿ ತಂದಿದ್ದ ಒಂದು ಪ್ಲಾಸ್ಟಿಕ್ ಚೀಲವನ್ನು ತಂದು ಇದರಲ್ಲಿ 25 ಕೋಟಿ ರೂ. ಹಣವಿದೆ ಎಂದು ಇಟ್ಟಿದ್ದಾರೆ. ನಂತರ ಸೂರ್ಯ ತಾನು ತಂದಿದ್ದ ಜ್ಯೂಸ್ ಅನ್ನು ನನಗೆ ಹಾಗೂ ಅಧ್ಯಕ್ಷರಿಗೆ ಕುಡಿಯಲು ಕೊಟ್ಟರು. ಜ್ಯೂಸ್ ಕುಡಿದ ನಂತರ ನಾವು ಪ್ರಜ್ಞೆ ತಪ್ಪಿದೆವು. ನಂತರ ಸಂಜೆ 4 ಗಂಟೆಗೆ ಎಚ್ಚರಗೊಂಡಾಗ ಪಕ್ಕದಲ್ಲಿದ್ದ ಸೂರ್ಯ ಅಲ್ಲಿರಲಿಲ್ಲ. ಅಲ್ಲದೆ, ರೂಮಿನಲ್ಲಿದ್ದ 1.10 ಕೋಟಿ ರೂ. ಹಣವೂ ಇರಲಿಲ್ಲ. ಆಗ ಸೂರ್ಯ ತಂದಿದ್ದ ಚೀಲವನ್ನು ಬಿಚ್ಚಿ ನೋಡಿದಾಗ ಬಿಳಿ ಪೇಪರ್ ಬಂಡಲ್‌ಗಳಿದ್ದವು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಘಟನೆಯ ಬಳಿಕ ತಾವು ಮೋಸ ಹೋಗಿರುವುದಾಗಿ ಎಚ್ಚೆತ್ತುಕೊಂಡ ಖಜಾಂಚಿ ಮೇರಿ ಅವರು ಸ್ಥಳೀಯ ಬೆಳಕವಾಡಿ ಠಾಣೆ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಂಚಕನ ಪತ್ತೆಗೆ ಬಲೆ ಬೀಸಿದ್ದಾರೆ.
ಜ್ಯೂಸ್ ಕುಡಿಸಿ ಪ್ರಜ್ಞೆ ತಪ್ಪಿಸಿ ಹಣ ಪಡೆದು ಪರಾರಿ!:
ಮಳವಳ್ಳಿಯಲ್ಲಿ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದ ಕ್ರೈಸ್ತ ಸಂಸ್ಥೆಯಾದ ಶ್ಯಾಲೋಮ್ ಎಜುಕೇಷನಲ್ ಮತ್ತು ಚಾರಿಟಬಲ್ ಟ್ರಸ್ಟ್‌ಗೆ ವಂಚಕ ಸೂರ್ಯ ಎಂಬಾತ ಪರಿಚಯವಾಗಿದ್ದ. ಈತನ ಟ್ರಸ್ಟ್‌ಗೆ ಸಣ್ಣಪಟ್ಟ ಸಹಾಯ ಮಾಡಿಕೊಟ್ಟು ನಂಬಿಕೆ ಉಳಿಸಿಕೊಂಡಿದ್ದ. ಈ ನಡುವೆ, ಶಿಕ್ಷಣ ಸಂಸ್ಥೆಯನ್ನು ದೊಡ್ಡಮಟ್ಟದಲ್ಲಿ ಬೆಳೆಸುವುದಾಗಿ ಟ್ರಸ್ಟ್‌ನವರು ಈತನ ಬಳಿ ಚರ್ಚಿಸಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ವಂಚಕ ಸೂರ್ಯ, “ನೀವು ನನಗೆ 1 ಕೋಟಿ ರೂ. ಕೊಟ್ಟರೆ ಅದಕ್ಕೆ ಪ್ರತಿಯಾಗಿ ನಾನು ದಾನಿಗಳಿಂದ 25 ಕೋಟಿ ರೂ.ಕೊಡುತ್ತೇನೆ’ ಎಂದು ನಂಬಿಸಿದ್ದ. ಅದರಂತೆ ಟ್ರಸ್ಟ್‌ನವರು 1.10 ಕೋಟಿ ರೂ. ಸಿದ್ಧಪಡಿಸಿಕೊಂಡು ಜ.20ರಂದು ಸಣ್ಣ ಕಾರ್ಯಕ್ರಮ ಆಯೋಜಿಸಿ ಸೂರ್ಯನನ್ನು ಕರೆಸಿಕೊಂಡಿದ್ದರು. ಕಾರ್ಯಕ್ರಮಕ್ಕೆ ಬಂದಿದ್ದ ಸೂರ್ಯ, ತಾನು ಮೊದಲೇ ಯೋಚಿಸಿದಂತೆ ತಂದಿದ್ದ ಮತ್ತು ಬರುವ ಜ್ಯೂಸ್ ಅನ್ನು ಟ್ರಸ್ಟ್‌ನ ಅಧ್ಯಕ್ಷರು ಹಾಗೂ ಖಜಾಂಚಿಗೆ ಕುಡಿಸಿದ್ದಾನೆ. ಇವರು ಪ್ರಜ್ಞೆ ತಪ್ಪಿದಾಗ, 1.10 ಕೋಟಿ ರೂ. ಇದ್ದ ಬ್ಯಾಗನ್ನು ದೋಚಿಕೊಂಡು ಪರಾರಿಯಾಗಿದ್ದಾನೆ.