ಮದ್ದೂರು: ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರ ಎರಡು ತಿಂಗಳ ಪಡಿತರ ವಿತರಣೆ ಮಾಡುವಂತೆ ಸರ್ಕಾರ ಸೂಚನೆ ನೀಡಿದ್ದರೂ ತಾಲೂಕಿನ ಬೋರಾಪುರ ನ್ಯಾಯಬೆಲೆ ಅಂಗಡಿಯಲ್ಲಿ ಸರ್ಕಾರದ ಆದೇಶದಂತೆ ಪಡಿತರ ಪದಾರ್ಥ ನೀಡದಿರುವುದು ಬೆಳಕಿಗೆ ಬಂದಿದೆ.
ಬೋರಾಪುರ ನ್ಯಾಯಬೆಲೆ ಅಂಗಡಿಯಲ್ಲಿ ಕೇಂದ್ರ ಸರ್ಕಾರ ಅಂತ್ಯೋದಯ ಕಾರ್ಡ್‌ದಾರರಿಗೆ ಪ್ರತಿ ಕಾರ್ಡ್‌ಗೆ 35 ಕೇಜಿಯಂತೆ 2 ತಿಂಗಳಿಗೆ 70 ಕೇಜಿಅಕ್ಕಿ ಯನ್ನು ಹಂಚಿಕೆ ಮಾಡಿದ್ದಾರೆ. ನ್ಯಾಯ ಬೆಲೆ ಅಂಗಡಿ ಮಾಲೀಕರು ಯಾವ ಕಾರ್ಡ್‌ದಾರರಿಗೂ ಸರ್ಕಾರದ ಹಂಚಿಕೆಯಂತೆ ಅಕ್ಕಿ ವಿತರಣೆ ಮಾಡುತ್ತಿಲ್ಲ ಎಂದು ಗ್ರಾಮಸ್ಥರು ತಹಶೀಲ್ದಾರರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಮದ್ದೂರು ತಹಶೀಲ್ದಾರ್ ಅವರಿಗೆ ದೂರು ನೀಡಿದಾಗ ಅವರು ಸ್ಥಳ ಪರಿಶೀಲನೆ ನಡೆಸಿದ್ದಲ್ಲದೆ, ಪಡಿತರ ಕಾರ್ಡ್‌ದಾರರಿಂದ ಮಹಜರ್ ಮಾಡಲು ಸ್ಥಳಕ್ಕೆ ಬಂದಿದ್ದ ಆಹಾರ ನಿರೀಕ್ಷಕರಿಬ್ಬರೂ ಸಾರ್ವಜನಿಕರಿಂದ ಅಹವಾಲು ಪಡೆದು ಕಾರ್ಡ್‌ದಾರರಿಂದ ಹೇಳಿಕೆ ಪಡೆದುಕೊಂಡಿದ್ದಾರೆ. ಆದರೆ, ಆ ಸಮಯದಲ್ಲಿ ನಮಗೆ ಅಂತ್ಯೋದಯ ಕಾರ್ಡ್‌ದಾರರಿಗೆ 70 ಕೇಜಿ ಅಕ್ಕಿ ಬಂದಿರುವ ಮಾಹಿತಿ ತಿಳಿದಿರಲಿಲ್ಲವೆನ್ನ ಲಾಗಿದೆ. ತದನಂತರದಲ್ಲಿ ಪಡಿತರ ವಿತರಣೆ ಮಾಡಿದ ಚೆಕ್ ಲಿಸ್ಟ್‌ಗೂ ಕಾರ್ಡ್‌ಗಳಲ್ಲಿ ನಮೂದಿಸಿರುವ ಪ್ರಮಾಣಕ್ಕೂ ತಾಳೆ ಮಾಡಿ ನೋಡಿದಾಗ ವ್ಯತ್ಯಾಸವಿರುವುದು ಕಂಡುಬಂದಿರುವುದಾಗಿ ಹೇಳಿದ್ದಾರೆ. ನ್ಯಾಯಬೆಲೆ ಅಂಗಡಿ ಮಾಲೀಕರು ಸುಮಾರು ವರ್ಷಗಳಿಂದ ಪಡಿತರ ಚೀಟಿದಾರರಿಗೆ ವಂಚಿಸುತ್ತಲೇ ಬಂದಿದ್ದು, ಕೂಡಲೇ ಸ್ಥಳ ಪರಿಶೀಲನೆ ನಡೆಸಿ ನ್ಯಾಯಬೆಲೆ ಅಂಗಡಿಯ ಪರವಾ ನಗಿ ರದ್ದುಪಡಿಸಬೇಕ. ಇದಕ್ಕೆ ಬದಲಿ ವ್ಯವಸ್ಥೆಯಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೀಡುವಂತೆ ಗ್ರಾಪಂ ಸದಸ್ಯ ಬಿ.ಎ.ಪ್ರಕಾಶ್, ಬಿ.ಸಿ.ಕೃಷ್ಣ, ಲಕ್ಷ್ಮಮ್ಮ, ಹುಚ್ಚಯ್ಯ, ತಮ್ಮಯ್ಯ, ಸೋಮಶೇಖರ, ಸಂತೋಷ್, ಮಹೇಶ್, ಕುಮಾರ, ಮಂಜುಳಾ, ಸುನೀತಾ, ಬಸವರಾಜು, ಆನಂದ ಇತರರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕರನ್ನು ಒತ್ತಾಯಿಸಿದ್ದಾರೆ.