Advertisement

Fraud Case ಸ್ಟಾಕ್‌ ಮಾರುಕಟ್ಟೆಯಲ್ಲಿ ಲಾಭದ ಆಮಿಷ: ಲಕ್ಷಾಂತರ ರೂ. ವಂಚನೆ

01:16 AM Jul 13, 2024 | Team Udayavani |

ಉಡುಪಿ: ಸ್ಟಾಕ್‌ ಮಾರುಕಟ್ಟೆಯಲ್ಲಿ ಅಧಿಕ ಲಾಭಾಂಶ ನೀಡುವ ಆಮಿಷ ಒಡ್ಡಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿದ ಘಟನೆ ನಡೆದಿದೆ.

Advertisement

ಬೈಲಕೆರೆಯ ಕೆ. ಗುರುಪ್ರಸಾದ್‌ ವಂಚನೆಗೊಳಗಾದವರು. ಇವರ ವಾಟ್ಸಾಪ್‌ ಸಂಖ್ಯೆಗೆ ಜಿಎಸ್‌ಎಎಂ ಮಾರುಕಟ್ಟೆ ಕಂಪೆನಿಯಲ್ಲಿ ಕಡಿಮೆ ಹಣವನ್ನು ಹೂಡಿಕೆ ಮಾಡಿ ಹೆಚ್ಚಿನ ಹಣ ಪಡೆಯಬಹುದು ಎಂಬ ಆಮಿಷ ಒಡ್ಡಲಾಗಿತ್ತು. ಅದನ್ನು ನಂಬಿದ ಅವರು ಜೂ.26ರಿಂದ ಜು.2ರ ವರೆಗೆ ರಂದು ಐಎಂಪಿಎಸ್‌ ಹಂತಹಂತವಾಗಿ 1,00,000 ರೂ.ಗಳನ್ನು ವರ್ಗಾವಣೆ ಮಾಡಿದ್ದರು. ಆದರೆ ಅಪರಿಚಿತ ಆರೋಪಿಯು ಹಣ ಹಿಂದಿರುಗಿಸದೆ ವಂಚನೆ ಎಸಗಿದ್ದಾನೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next