Advertisement

Fraud Case: ಪಾರ್ಟ್‌ಟೈಮ್‌ ಕೆಲಸ ಹೆಸರಿನಲ್ಲಿ 15,04,838 ರೂ. ವಂಚನೆ

12:04 AM Nov 23, 2023 | Team Udayavani |

ಮಂಗಳೂರು: ಪಾರ್ಟ್‌ ಟೈಮ್‌ ಕೆಲಸದ ಬಗ್ಗೆ ಟೆಲಿಗ್ರಾಂ ಖಾತೆಗೆ ಬಂದ ಸಂದೇಶವನ್ನು ನಂಬಿ ವ್ಯಕ್ತಿಯೊಬ್ಬರು ತಮ್ಮ ಬ್ಯಾಂಕ್‌ ಖಾತೆಯಿಂದ 15,04,838 ರೂ. ಕಳೆದುಕೊಂಡು ಮೋಸ ಹೋಗಿರುವ ಬಗ್ಗೆ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಎಲೆಕ್ಟ್ರಾನಿಕ್ಸ್‌, ಗೃಹೋಪಯೋಗಿ ಮತ್ತು ಇತರ ವಸ್ತುಗಳಿಗೆ ಆನ್‌ಲೈನ್‌ ಮೂಲಕ ರೇಟಿಂಗ್‌ ನೀಡಿ, ಕಮಿಷನ್‌ ಹಣ ಪಡೆಯಬಹುದು ಎಂದು ನ.14ರಂದು ರಂಜಿತ್‌ ಯಾದವ್‌ ಎನ್ನುವ ಹೆಸರಿನಿಂದ ದೂರುದಾರರ ಟೆಲಿಗ್ರಾಂ ಆ್ಯಪ್‌ಗೆ ಸಂದೇಶ ಬಂದಿತ್ತು. ಇದನ್ನು ನಂಬಿದ ಅವರು ಸಂಬಂಧಪಟ್ಟ ವೆಬ್‌ಸೈಟ್‌ನಲ್ಲಿ ಖಾತೆ ತೆರೆದು ಟ್ರಯಲ್‌ ಜಾಬ್‌ ಮೂಲಕ 860 ರೂ. ಕಮಿಷನ್‌ ಪಡೆದಿದ್ದಾರೆ. ಕೆಲಸ ಮುಂದುವರಿಸಲು 10 ಸಾವಿರ ರೂ. ಪಾವತಿಸುವಂತೆ ಸಂದೇಶ ಬಂದಿದ್ದು, ಅದನ್ನು ವರ್ಗಾವಣೆ ಮಾಡಿದ್ದಾರೆ.

ಅದರಂತೆ ಕಮಿಷನ್‌ ರೂಪದಲ್ಲಿ 14,900 ರೂ. ಮರು ಪಾವತಿ ಮಾಡಿದ್ದಾರೆ. ಇನ್ನಷ್ಟು ಹೆಚ್ಚಿನ ಹಣ ದೊರಕಬಹುದು ಎಂದು ನಂಬಿ ತಮ್ಮ ಖಾತೆಯಿಂದ 11,30,510 ರೂ. ಹಾಗೂ ತಂದೆಯ ಖಾತೆಯಿಂದ 3,74,328 ರೂ. ವರ್ಗಾವಣೆ ಮಾಡಿದ್ದಾರೆ. ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಾಗ ಇನ್ನಷ್ಟು ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದು, ಈ ವೇಳೆ ಮೋಸ ಹೋಗಿರುವುದು ಅರಿವಿಗೆ ಬಂದಿದೆ. ಹಣ ವರ್ಗಾಯಿಸಿಕೊಂಡು ವಂಚನೆ ಮಾಡಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next