Advertisement
ದೂರುದಾರ ವ್ಯಕ್ತಿಗೆ ಫೆ. 4ರಂದು ಮಧ್ಯಾಹ್ನ BIT Company Private Limited ಎಂಬ ಸಂಸ್ಥೆಯಲ್ಲಿ ಅರೆಕಾಲಿಕ ಕೆಲಸ ಇದೆಯೆಂದು 8412871317 ಮೊಬೈಲ್ ಸಂಖ್ಯೆಯಿಂದ ವಾಟ್ಸ್ ಆ್ಯಪ್ ಮೆಸೇಜ್ ಬಂದಿತ್ತು. ಇದನ್ನು ನಂಬಿದ ದೂರುದಾರ ವ್ಯಕ್ತಿಯು ಆ ಸಂಖ್ಯೆಯನ್ನು ಸಂಪರ್ಕಿಸಿದರು. ಅನಂತರ ಟಾಸ್ಕ್ ನೀಡಲಾಯಿತು. ಅದನ್ನು ಪೂರ್ತಿಗೊಳಿಸಿದಾಗ ಹಂತ ಹಂತವಾಗಿ 240 ರೂ. ಮತ್ತು 2,232 ರೂ.ಗಳನ್ನು ಅವರ ಖಾತೆಗೆ ಜಮೆ ಮಾಡಲಾಯಿತು. ಮತ್ತೆ ಮುಂದಿನ ಟಾಸ್ಕ್ ನೀಡಲಾಯಿತು. ಹಂತ ಹಂತವಾಗಿ ಟಾಸ್ಕ್ನೊಂದಿಗೆ ಫೆ. 4ರಿಂದ ಮಾ. 10ರ ವರೆಗೆ ದೂರುದಾರ ವ್ಯಕ್ತಿಯ ಖಾತೆಯಿಂದ ಒಟ್ಟು 5,66,664 ರೂ.ಗಳನ್ನು ವರ್ಗಾಯಿಸಿಕೊಳ್ಳಲಾಯಿತು. ಮತ್ತಷ್ಟು ಹಣದ ಬೇಡಿಕೆ ಇಟ್ಟಾಗ ದೂರುದಾರರಿಗೆ ತಾನು ಮೋಸ ಹೋಗಿರುವುದು ಅವರಿಗೆ ಗೊತ್ತಾಗಿ ದೂರು ನೀಡಿದ್ದಾರೆ. Advertisement
Mangaluru: ಪಾರ್ಟ್‌ಟೈಂ ಉದ್ಯೋಗ ಆಮಿಷ: ವ್ಯಕ್ತಿಗೆ 5.66 ಲ.ರೂ. ವಂಚನೆ
11:09 PM Apr 20, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.