Advertisement

ಗೂಗಲ್‌ ಮತ್ತು ಅಮೆಜಾನ್‌ಗೆ ಭಾರೀ ದಂಡ ವಿಧಿಸಿದ ಫ್ರಾನ್ಸ್‌

06:22 PM Dec 10, 2020 | Karthik A |

ಹೊಸದಿಲ್ಲಿ: ಫ್ರಾನ್ಸ್‌ನ ಡೇಟಾ ಪ್ರೈವೆಸಿ ರೆಗ್ಯುಲೇಟರ್‌ ಸಂಸ್ಥೆ ಗೂಗಲ್‌ ಮತ್ತು ಅಮೆಜಾನ್‌ಗೆ ಭಾರೀ ಮೊತ್ತದ ದಂಡ ವಿಧಿಸಿದೆ. ಆ ದೇಶದ ಗ್ರಾಹಕ ಸ್ನೇಹಿ ಕಾನೂನನ್ನು ಮೀರಿದ ಕಾರಣಕ್ಕೆ ಈ ಎರಡು ಸಂಸ್ಥೆಗಳು ದಂಡ ಪಾವತಿಸಬೇಕಾಗಿ ಬಂದಿದೆ.

Advertisement

ಇದರಲ್ಲಿ ಗೂಗಲ್‌ಗೆ 100 ಮಿಲಿಯನ್ ಯುರೋ ಹಾಗೂ ಅಮೆಜಾನ್‌ ಸಂಸ್ಥೆಗೆ 35 ಮಿಲಿಯನ್‌ ಯುರೋಗಳಷ್ಟು ದಂಡವನ್ನು ವಿಧಿಸಲಾಗಿದೆ. ಇದು ಗೂಗಲ್‌ಗೆ ವಿಧಿಸಲಾದ ಇದುವರೆಗಿನ ಅತಿದೊಡ್ಡ ಮೊತ್ತದ ದಂಡವಾಗಿದೆ. ಫೈನ್ ಫ್ರಾನ್ಸ್‌ನ ಆನ್‌ಲೈನ್ ಜಾಹೀರಾತು ಟ್ರ್ಯಾಕರ್‌ಗಳ (ಕುಕೀಗಳು) ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಫ್ರಾನ್ಸ್‌ ಈ ದೊಡ್ಡ ಪ್ರಮಾಣದ ದಂಡವನ್ನು ವಿಧಿಸಿದೆ.

ಇ-ಕಾಮರ್ಸ್ ದೈತ್ಯ ಅಮೆರಿಕನ್ ಕಂಪೆನಿ ಅಮೆಜಾನ್‌ಗೆ 35 ಮಿಲಿಯನ್ ಯುರೋಗಳಷ್ಟು ದಂಡ ವಿಧಿಸಿದೆ ಎಂದು ಸಿಎನ್ಐಎಲ್ ಹೇಳಿಕೆಯಲ್ಲಿ ತಿಳಿಸಿದೆ. ಈ ಕಂಪೆನಿಗೆ ಗೂಗಲ್‌ನಂತೆಯೇ ಆರೋಪಗಳನ್ನು ಹೊರಿಸಲಾಗಿದೆ. ಕಂಪ್ಯೂಟರ್‌ ವೆಬ್‌ಸೈಟ್‌ನಲ್ಲಿ ಜಾಹೀರಾತು ಕುಕೀಗಳನ್ನು ಉಳಿಸಲು ಸಂದರ್ಶಕರ ಅನುಮೋದನೆಯನ್ನು ಪಡೆದಿಲ್ಲ ಎಂದು ಫ್ರಾನ್ಸ್‌ ಹೇಳಿದೆ. ಆನ್‌ಲೈನ್ ನಿಯಮಗಳ ಅಡಿಯಲ್ಲಿ ಯಾವುದೇ ಕುಕೀಗಳನ್ನು ಉಳಿಸಲು ಗ್ರಾಹಕನ ಅಥವಾ ಬಳಕೆದಾರರ ಅನುಮೋದನೆ ಪಡೆಯುವುದು ಅವಶ್ಯಕ ಎಂದು ಫ್ರಾನ್ಸ್‌ ಹೇಳಿದೆ.

ಗೂಗಲ್ ಮತ್ತು ಅಮೆಜಾನ್ ಇಂಟರ್ನೆಟ್ ಗ್ರಾಹಕರಿಗೆ ಸ್ಪಷ್ಟ ಮಾಹಿತಿ ನೀಡಲು ವಿಫಲವಾಗಿದೆ ಎಂದು ನಿಯಂತ್ರಕರು ಹೇಳಿದ್ದಾರೆ. ಜಾಲತಾಣದ ಬ್ಯಾನರ್ ಬದಲಾಯಿಸಲು ಅಮೆಜಾನ್ ಮತ್ತು ಗೂಗಲ್ ಗೆ 3 ತಿಂಗಳುಗಳ ಕಾಲಾವಕಾಶನ್ನು ನೀಡಲಾಗಿದೆ. ಅವರು ವಿಫಲವಾದರೆ ಲೋಪವನ್ನು ಸರಿಪಡಿಸುವವರೆಗೆ ದಿನಕ್ಕೆ 10,000 ಯೂರೋ ಹೆಚ್ಚುವರಿ ದಂಡವನ್ನು ತೆರಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next