Advertisement

ಮನೋರೋಗಿಗಳಿಗಾಗಿ ಏಕರೂಪದ ರಾಷ್ಟ್ರೀಯ ನೀತಿ: ಕೇಂದ್ರಕ್ಕೆ ಸುಪ್ರೀಂ 

03:25 PM Feb 14, 2017 | Team Udayavani |

ಹೊಸದಿಲ್ಲಿ : ಮನೋರೋಗಿಗಳಿಗಾಗಿ ಹಾಗೂ ಅಂತಹವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕದಲ್ಲಿ ಅವರನ್ನು ಸುಧಾರಿಸುವುದಕ್ಕಾಗಿ ಏಕರೂಪದ ರಾಷ್ಟ್ರೀಯ ನೀತಿಯೊಂದನ್ನು ರೂಪಿಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

Advertisement

ವರಿಷ್ಠ ನ್ಯಾಯಮೂರ್ತಿ ಜೆ ಎಸ್‌ ಖೇಹರ್‌ ನೇತೃತ್ವದ ಪೀಠವು ಈ ಸಂಬಂಧ ಇಂದು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ನೊಟೀಸ್‌ ಜಾರಿ ಮಾಡಿದೆ. ಈ ವಿಷಯವು ರಾಜ್ಯ ಹಾಗೂ ಕೇಂದ್ರ ಸರಕಾರಗಳು ನಿಭಾಯಿಸಬೇಕಾದ ಸಮಾನ ವಿಷಯಗಳ ಪಟ್ಟಿಯಲ್ಲಿದ್ದು ಕೇಂದ್ರ ಸರಕಾರ ಈ ಬಗ್ಗೆ  ನೀತಿ ನಿಯಮಗಳನ್ನು ರೂಪಿಸುವ ಅಧಿಕಾರ ಹೊಂದಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. 

ಜಸ್ಟಿಸ್‌ ಎನ್‌ ವಿ ರಮಣ ಮತ್ತು ಜಸ್ಟಿಸ್‌ ಚಂದ್ರಚೂಡ್‌ ಅವರನ್ನು ಕೂಡ ಒಳಗೊಂಡಿರುವ ಪೀಠವು, ವಕೀಲ ಜಿ ಕೆ ಬನ್ಸಾಲ್‌ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವ್ಯಾಪ್ತಿಯನ್ನು ಹಿರಿದುಗೊಳಿಸಿ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಉತ್ತರವನ್ನು ಕೋರಿದೆ. 

Advertisement

Udayavani is now on Telegram. Click here to join our channel and stay updated with the latest news.

Next