Advertisement
ಆಟೋಮೊಬೈಲ್, ಕ್ಯಾಮೆರಾ, ಪ್ರಿಂಟರ್ ಸೇರಿದಂತೆ ಹಲವಾರು ವಸ್ತುಗಳಲ್ಲಿ ಬಳಸಲಾಗುವ 40ನ್ಯಾನೋಮೀಟರ್ ಚಿಪ್‌ಗ್ಳನ್ನು ಉತ್ಪಾದಿಸುವ ಘಟಕ ಸ್ಥಾಪನೆಗೆ ಉದ್ದೇಶಿಸಿ ಈ ಎರಡು ಸಂಸ್ಥೆಗಳು ಪಾಲುದಾರಿಕೆ ಹೊಂದಲು ಬಯಸಿವೆ. ಆದರೆ, ಈ ವಿಚಾರವನ್ನು ಉಭಯ ಸಂಸ್ಥೆಗಳು ಇನ್ನೂ ಖಾತರಿಪಡಿಸಿಲ್ಲ. ಈ ಹಿಂದೆ ವೇದಾಂತ್ ರಿಸೋರ್ಸಸ್ ಲಿಮಿಟೆಡ್‌ನೊಂದಿಗೆ ಪಾಲುದಾರಿಕೆ ಹೊಂದಲು ಫಾಕ್ಸ್‌ಕಾನ್ ಬಯಸಿತ್ತು. ಅದು ವಿಫಲವಾದ ಬಳಿಕ ಇದೀಗ ಮತ್ತೂಂದು ಯೋಜನೆಯತ್ತ ಕೈಚಾಚಿದೆ. ಇದು ಭಾರತದಲ್ಲಿ ಬೆಳೆಯುತ್ತಿರುವ ಸೆಮಿಕಂಡಕ್ಟರ್ ಮಾರುಕಟ್ಟೆಯಲ್ಲಿ ಫಾಕ್ಸ್‌ಕಾನ್ ತನ್ನ ಅಸ್ತಿತ್ವ ವಿಸ್ತರಿಸಲು ಬಯಸುತ್ತಿರುವುದಕ್ಕೆ ನಿದರ್ಶನವೆಂದು ಹೇಳಲಾಗಿದೆ. Advertisement
Foxconn – STMicro: ಫಾಕ್ಸ್‌ಕಾನ್ – ಎಸ್‌ಟಿಮೈಕ್ರೋ ಪಾಲುದಾರಿಕೆ?
10:04 PM Sep 07, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.