ನವದೆಹಲಿ: ಸೆಮಿಕಂಡಕ್ಟರ್ ಉತ್ಪಾದನೆಗೆ ಸಂಬಂಧಿಸಿದಂತೆ ವೇದಾಂತ್ ಲಿಮಿಟೆಡ್ ಜತೆಗಿನ 1.61 ಲಕ್ಷ ಕೋಟಿ ರೂಪಾಯಿ ಜಂಟಿ ಒಪ್ಪಂದದಿಂದ ಹಿಂದೆ ಸರಿಯುತ್ತಿರುವುದಾಗಿ ತೈವಾನ್ ನ ಫೋಕ್ಸ್ ಕಾನ್ ಸಂಸ್ಥೆ ಸೋಮವಾರ (ಜುಲೈ 10) ತಿಳಿಸಿದೆ.
ಇದನ್ನೂ ಓದಿ:Kichcha sudeep: ಹಣಕಾಸಿನ ವಿವಾದ; ವಾಣಿಜ್ಯ ಮಂಡಳಿಗೆ ಸುದೀರ್ಘ ಪತ್ರ ಬರೆದ ಕಿಚ್ಚ
ಎಲೆಕ್ಟ್ರಾನಿಕ್ಸ್ ವಸ್ತುಗಳ ತಯಾರಿಕೆಯಲ್ಲಿ ಛಾಪನ್ನು ಮೂಡಿಸುವ ನಿಟ್ಟಿನಲ್ಲಿ ಗುಜರಾತ್ ನಲ್ಲಿ ಸೆಮಿಕಂಡಕ್ಟರ್ ಮತ್ತು ಡಿಸ್ ಪ್ಲೇ ಉತ್ಪಾದನಾ ಪ್ಲ್ಯಾಂಟ್ ಅನ್ನು ಸ್ಥಾಪಿಸುವ ಹಿನ್ನೆಲೆಯಲ್ಲಿ ಕಳೆದ ವರ್ಷ ಪೋಕ್ಸ್ ಕಾನ್ ಮತ್ತು ವೇದಾಂತ್ ಲಿಮಿಟೆಡ್ 19.5 ಬಿಲಿಯನ್ ಡಾಲರ್ (1.61 ಲಕ್ಷ ಕೋಟಿ) ಮೊತ್ತದ ಹೂಡಿಕೆಯ ಒಪ್ಪಂದ ಮಾಡಿಕೊಂಡಿತ್ತು ಎಂದು ವರದಿ ವಿವರಿಸಿದೆ.
ಏತನ್ಮಧ್ಯೆ ಒಪ್ಪಂದಕ್ಕೆ ಸಂಬಂಧಿಸಿದಂತೆ ವೇದಾಂತ್ ಲಿಮಿಟೆಡ್ ನಿಂದ ಹೊರ ಬರುತ್ತಿರುವುದಾಗಿ ಪೋಕ್ಸ್ ಕಾನ್ ಪ್ರಕಟಣೆಯಲ್ಲಿ ತಿಳಿಸಿದ್ದು, ಎಲೆಕ್ಟ್ರಾನಿಕ್ ವಸ್ತುಗಳ ಉತ್ಪಾದನಾ ಘಟಕ ಸ್ಥಾಪನೆಗೆ ಹಿನ್ನಡೆ ಉಂಟಾದಂತಾಗಿದೆ.
ಸೆಮಿಕಂಡಕ್ಟರ್ ಉತ್ಪಾದನಾ ಘಟಕದ ಒಪ್ಪಂದದಿಂದ ಪೋಕ್ಸ್ ಕಾನ್ ಹಿಂದೆ ಸರಿದಿರುವ ಕುರಿತು ವೇದಾಂತ್ ಲಿಮಿಟೆಡ್ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿ ತಿಳಿಸಿದೆ.