Advertisement

ಟಿಒಪಿಯಿಂದ ಜಿತು ರಾಯ್‌ ಸೇರಿದಂತೆ ನಾಲ್ವರು ಔಟ್‌

06:00 AM Jul 20, 2018 | Team Udayavani |

ಹೊಸದಿಲ್ಲಿ: ಖ್ಯಾತ ಶೂಟರ್‌ ಜಿತು ರಾಯ್‌ ಸೇರಿದಂತೆ ನಾಲ್ವರು ಶೂಟರ್‌ಗಳು ಕೇಂದ್ರದ ಯಶಸ್ವಿ ಯೋಜನೆ ಟಿಒಪಿಯಿಂದ (ಟಾರ್ಗೆಟ್‌ ಒಲಿಂಪಿಕ್ಸ್‌ ಪೋಡಿಯಂ) ಹೊರಬಿದ್ದಿದ್ದಾರೆ. 

Advertisement

ಮಿಷನ್‌ ಒಲಿಂಪಿಕ್‌ ಸೆಲ್‌ ಗುರುವಾರ ಸಭೆ ಸೇರಿತ್ತು. ಈ ವೇಳೆ ಕಳಪೆ ಪ್ರದರ್ಶನ ನೀಡುತ್ತಿರುವ ಟಿಒಪಿ ಯೋಜನೆಯಲ್ಲಿರುವ ಕ್ರೀಡಾಪಟುಗಳ ಪಟ್ಟಿ ತಯಾರಿಸಲಾಯಿತು. ಇದರಲ್ಲಿ ನಿಗದಿತ ಪ್ರದರ್ಶನಕ್ಕಿಂತ ಕೆಳ ಕ್ರಮಾಂಕದಲ್ಲಿರುವ ಜಿತು ರಾಯ್‌ ಸೇರಿದಂತೆ ನಾಲ್ವರು ಶೂಟರ್‌ಗಳನ್ನು ಕೈಬಿಡಲು ನಿರ್ಧರಿಸಲಾಯಿತು. ಟಿಒಪಿಯಿಂದ ಹೊರಬಿದ್ದ ಉಳಿದ ಮೂವರು ಶೂಟರ್‌ಗಳೆಂದರೆ ಯಶಸ್ವಿನಿ ದೇಸ್ವಾಲ್‌, ಅಮನ್‌ಪ್ರೀತ್‌ ಸಿಂಗ್‌ ಮತ್ತು ನೀರಜ್‌ ಕುಮಾರ್‌.

Advertisement

Udayavani is now on Telegram. Click here to join our channel and stay updated with the latest news.

Next