Advertisement
ಇದು ಮೈಸೂರಿನ ಸಾಹಿತಿ ಭಗವಾನ್ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಉಪ್ಪಾರಪೇಟೆ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಶಿಕಾರಿಪುರದ ಪ್ರವೀಣ್ ಅಲಿಯಾಸ್ ಸುಜಿತ್ ಕುಮಾರ್, ಮಹಾರಾಷ್ಟ್ರದ ಅಮೋಲ್ ಕಾಳೆ, ಅಮಿತ್ ದೇಗ್ವೇಕರ್, ವಿಜಯಪುರದ ಮನೋಹರ್ ದುಂಡಪ್ಪ ಯವಡೆ ಬಳಿ ಪತ್ತೆಯಾದ ಮಹತ್ವದ ದಾಖಲೆಗಳು.
Related Articles
Advertisement
ವಿಶೇಷ ತನಿಖಾ ತಂಡದ ವಶಕ್ಕೆ: ಈ ಕೃತ್ಯಗಳಿಗಾಗಿ ಆರೋಪಿಗಳು 43 ಮೊಬೈಲ್‌ಗಳು, 50ಕ್ಕೂ ಅಧಿಕ ಸಿಮ್‌ಕಾರ್ಡ್‌ಗಳನ್ನು ಬಳಸಿದ್ದಾರೆ. ಈ ಸಿಮ್‌ಕಾರ್ಡ್‌ಗಳು ಅಮಾಯಕರ ಹೆಸರುಗಳಲ್ಲಿವೆ. ಆರೋಪಿಗಳು ನೆರೆ ರಾಜ್ಯದ ಕೆಲ ಸಂಘಟನಾ ಶಕ್ತಿಗಳ ಜತೆ ನಿಕಟ ಸಂಪರ್ಕ ಹೊಂದಿರುವ ಮಾಹಿತಿಯಿದ್ದು, ಮಹಾರಾಷ್ಟ್ರ, ಗೋವಾಕ್ಕೆ ಕರೆದೊಯ್ಯಬೇಕಿದೆ.
ಅಲ್ಲಿಯೇ ಹತ್ಯೆಗಳಿಗೆ ಸಂಚು ರೂಪಿಸಿರುವ ಅನುಮಾನವಿದೆ. ಹೀಗಾಗಿ ಆರೋಪಿಗಳನ್ನು ವಿಚಾರಣೆಗಾಗಿ 13 ದಿನಗಳ ವಶಕ್ಕೆ ನೀಡಬೇಕೆಂದು ವಿಶೇಷ ತನಿಖಾ ತಂಡ ನ್ಯಾಯಾಲಯಕ್ಕೆ ಮನವಿ ಮಾಡಿತು. ಇದನ್ನು ಪುರಸ್ಕರಿಸಿದ 1ನೇ ಎಸಿಎಂಎಂ ನ್ಯಾಯಾಲಯದ ನ್ಯಾ. ಜಗದೀಶ್ ಅವರು 11 ದಿನಗಳ ಕಾಲ ಎಸ್‌ಐಟಿ ವಶಕ್ಕೆ ನೀಡಿ ಆದೇಶಿಸಿದರು.
ಹಿಂಸಿಸಿ ಹೇಳಿಕೆ ಪಡೆದಿದ್ದಾರೆ!: “ವಿಚಾರಣೆ ಹೆಸರಿನಲ್ಲಿ ಪೊಲೀಸರು ನಮ್ಮ ಮೇಲೆ ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದು, ಮಾನಸಿಕ ಹಿಂಸೆ ನೀಡುತ್ತಿದ್ದಾರೆ’ ಎಂದು ಆರೋಪಿಗಳಾದ ಪ್ರವೀಣ್ ಹಾಗೂ ಮನೋಹರ್ ದುಂಡೆಪ್ಪ ಯವಡೆ ಆರೋಪಿಸಿದರು. ನಮಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ. ಹೊಡೆದು, ಬಲವಂತದಿಂದ ಹೇಳಿಕೆ ಪಡೆಯುತ್ತಿದ್ದಾರೆ ಎಂದು ಗಾಯದ ಗುರುತುಗಳನ್ನು ನ್ಯಾಯಾಧೀಶರಿಗೆ ತೋರಿಸಿದರು.
ಈ ವೇಳೆ ಮಧ್ಯೆ ಪ್ರವೇಶಿಸಿದ ನ್ಯಾ. ಜಗದೀಶ್, ಯಾವುದೇ ಕಾರಣಕ್ಕೂ ದೈಹಿಕವಾಗಿ ಹಲ್ಲೆ ನಡೆಸಬಾರದೆಂದು ಪೊಲೀಸರಿಗೆ ಎಚ್ಚರಿಕೆ ನೀಡಿದರು. ಇನ್ನು ಆರೋಪಿಗಳನ್ನು ಈಗ ವಶಕ್ಕೆ ಪಡೆಯುತ್ತಿರುವುದು ಉಪ್ಪಾರಪೇಟೆ ಪ್ರಕರಣದಲ್ಲಲ್ಲ. ಗೌರಿ ಹತ್ಯೆ ಪ್ರಕರಣದಲ್ಲಿ. ಇದೇ ಮೊದಲ ಬಾರಿ ಎಸ್‌ಐಟಿಯವರು ನಿಮ್ಮನ್ನು ವಶಕ್ಕೆ ಪಡೆಯುತ್ತಿದ್ದು, ತನಿಖೆಗೆ ಸಹಕರಿಸಿ ಎಂದು ಆರೋಪಿಗಳಿಗೆ ಸೂಚಿಸಿದರು.