Advertisement

ಒಂದೇ ಕುಟುಂಬದ ನಾಲ್ವರು ನೀರುಪಾಲು

07:05 AM Mar 25, 2019 | Team Udayavani |

ಶೃಂಗೇರಿ: ಸ್ನಾನಕ್ಕೆ ತುಂಗಾ ನದಿಗೆ ಇಳಿದ ಒಂದೇ ಕುಟುಂಬದ ನಾಲ್ವರು ನೀರುಪಾಲಾದ ಘಟನೆ ವಿದ್ಯಾರಣ್ಯಪುರದಲ್ಲಿ ರವಿವಾರ ಸಂಭವಿಸಿದೆ.
ಮೃತಪಟ್ಟವರನ್ನು ಶೃಂಗೇರಿಯ ಕಾರು ಮೆಕ್ಯಾನಿಕ್‌ ರಾಮಚಂದ್ರ (38) ಮತ್ತು ಅವರ ಸಂಬಂ ಧಿಗಳಾದ ರತ್ನಾಕರ (35) ನಾಗೇಂದ್ರ (24) ಮತ್ತು ಪ್ರದೀಪ್‌ (26) ಎಂದು ಗುರುತಿಸಲಾಗಿದೆ. ನದಿ ದಡದಲ್ಲೇ ಇದ್ದ ಸುಧಾಕರ್‌ ಮತ್ತು ರಾಮಚಂದ್ರ ಅವರ ಪುತ್ರಿ ಋತಿಕಾ ಬಚಾವ್‌ ಆಗಿದ್ದಾರೆ.

Advertisement

ರವಿವಾರ ಮಧ್ಯಾಹ್ನ ವಿದ್ಯಾರಣ್ಯಪುರ ಸಮೀಪವಿರುವ ತುಂಗಾ ನದಿಗೆ ಸ್ನಾನಕ್ಕೆಂದು 6 ಮಂದಿ ತೆರಳಿದ್ದರು. ಅವರಲ್ಲಿ ನಾಲ್ವರು ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೂಲತಃ ಕೊಪ್ಪ ತಾಲೂಕಿನ ಬೆಳವಿನಕೊಡಿಗೆ ಸಮೀಪದ ಬಾಳೆಹಕ್ಲಿನವರಾದ ರಾಮಚಂದ್ರ ಶೃಂಗೇರಿಯಲ್ಲಿ ಗ್ಯಾರೇಜ್‌ ಒಂದನ್ನು ತೆರೆದು ಮೆಕ್ಯಾನಿಕ್‌ ವೃತ್ತಿಯಲ್ಲಿ ತೊಡಗಿದ್ದರು. ಸೋಮವಾರ ಬಾಳೆಹಕ್ಲಿನಲ್ಲಿ ದೇವತಾ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದರಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದ ಪ್ರದೀಪ್‌ ಆಗಮಿಸಿದ್ದು, ವಿದ್ಯಾರಣ್ಯಪುರದಲ್ಲೇ ವಾಸವಾಗಿದ್ದ ರಾಮಚಂದ್ರ ಅವರ ಮನೆಗೆ ತೆರಳಿದ್ದರು. ಪ್ರದೀಪ್‌ ಮತ್ತವರ ಸಂಬಂಧಿ ಕರ ಸಹಿತ ಆರು ಮಂದಿ ಸ್ನಾನ ಮಾಡಲು ಮಧ್ಯಾಹ್ನ ನದಿಗೆ ತೆರಳಿದ್ದರು.

ನದಿಯಲ್ಲಿ ಈಜಾಡಿ ದಂಡೆಗೆ ಬಂದ ಬಳಿಕವೂ ಪ್ರದೀಪ್‌ ಬಾರದಿರುವುದನ್ನು ಗಮನಿಸಿ ರಾಮಚಂದ್ರ ಮತ್ತೆ ನದಿ ಸಮೀಪ ಹೋಗಿದ್ದಾರೆ. ಆಗ ಪ್ರದೀಪ್‌ ನದಿಯಲ್ಲಿ ಮುಳುಗುತ್ತಿದ್ದುದನ್ನು ಕಂಡು ಅವರನ್ನು ರಕ್ಷಿಸಲು ಮೂವರೂ ನೀರಿಗಿಳಿದಿದ್ದಾರೆ. ಆದರೆ ನೀರಿನ ಸುಳಿಗೆ ಸಿಲುಕಿ ನಾಲ್ವರೂ ಮೃತಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next