Advertisement

ಐಸಿಸಿ ಏಕದಿನ ರ್‍ಯಾಂಕಿಂಗ್‌: ಇನ್ನೂ ನಾಲ್ಕು ತಂಡಗಳ ಸೇರ್ಪಡೆ

06:00 AM Jun 02, 2018 | |

ದುಬಾೖ: ಐಸಿಸಿ ಏಕದಿನ ರ್‍ಯಾಂಕಿಂಗ್‌ ವ್ಯಾಪ್ತಿಗೆ ಒಳಪಡುವ ತಂಡಗಳ ಸಂಖ್ಯೆಯನ್ನು 12ರಿಂದ 16ಕ್ಕೆ ಏರಿಸಲಾಗಿದೆ. ಇದು ಜೂನ್‌ ಒಂದರಿಂದಲೇ ಅನ್ವಯವಾಗಲಿದೆ ಎಂದು ಐಸಿಸಿ ತಿಳಿಸಿದೆ.

Advertisement

ಹೊಸದಾಗಿ ರ್‍ಯಾಂಕಿಂಗ್‌ ವ್ಯಾಪ್ತಿಗೆ ಒಳಪಡುವ ತಂಡಗಳೆಂದರೆ ನೇಪಾಲ, ಹಾಲೆಂಡ್‌, ಸ್ಕಾಟ್ಲೆಂಡ್‌ ಮತ್ತು ಯುಎಇ. ಹಾಲೆಂಡ್‌ ಕಳೆದ ವರ್ಷ ಐಸಿಸಿ ವರ್ಲ್ಡ್ ಕ್ರಿಕೆಟ್‌ ಲೀಗ್‌ ಚಾಂಪಿಯನ್‌ಶಿಪ್‌ ಗೆಲ್ಲುವ ಮೂಲಕ ಏಕದಿನ ಮಾನ್ಯತೆ ಪಡೆದಿತ್ತು. ಸ್ಕಾಟ್ಲೆಂಡ್‌, ನೇಪಾಲ, ಯುಎಇ  ಐಸಿಸಿ ವಿಶ್ವಕಪ್‌ ಅರ್ಹತಾ ಪಂದ್ಯಾವಳಿಯಲ್ಲಿ ಮೊದಲ 3 ಸ್ಥಾನ ಅಲಂಕರಿಸಿ ಏಕದಿನ ಮಾನ್ಯತೆ ಸಂಪಾದಿಸಿದ್ದವು.

ಈ ತಂಡಗಳು ಮೇ 1, 2015 ಹಾಗೂ ಎ. 30, 2017ರ ಅವಧಿ ಯಲ್ಲಿ ಆಡಿದ ಪಂದ್ಯಗಳಿಗೆ ಶೇ. 50ರ ಲೆಕ್ಕಾಚಾರದಲ್ಲಿ, ಮೇ 1, 2017ರ ಬಳಿಕ ಆಡಿದ ಪಂದ್ಯಗಳಿಗೆ ಶೇ. 100ರ ಲೆಕ್ಕಾಚಾರದಲ್ಲಿ ಅಂಕ ನೀಡಲಾಗಿದೆ. ಅದರಂತೆ ಸ್ಕಾಟ್ಲೆಂಡ್‌ 28 ಅಂಕಗ ಳೊಂದಿಗೆ 13ನೇ ಸ್ಥಾನ, ಯುಎಇ 14ನೇ ಸ್ಥಾನದಲ್ಲಿದೆ (18 ಅಂಕ).

ನೇಪಾಲ ಮತ್ತು ಹಾಲೆಂಡ್‌ ಕನಿಷ್ಠ 4 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಬಳಿಕ ರ್‍ಯಾಂಕಿಂಗ್‌ ಯಾದಿಯಲ್ಲಿ ಕಾಣಿಸಿಕೊಳ್ಳಲಿವೆ.

Advertisement

Udayavani is now on Telegram. Click here to join our channel and stay updated with the latest news.

Next