Advertisement

ಮತ್ತೆ ನಾಲ್ವರಿಗೆ ಕೋವಿಡ್ ಸೋಂಕು: ರಾಜ್ಯದಲ್ಲಿ 705 ಸೋಂಕಿತರು, 366 ಮಂದಿ ಗುಣಮುಖ

08:20 AM May 08, 2020 | keerthan |

ಬೆಂಗಳೂರು: ರಾಜ್ಯದಲ್ಲಿ ಇಂದು ಮತ್ತೆ ಐವರಿಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದೆ. ಇದಿರಿಂದಾಗಿ ಕಳೆದ 24 ಗಂಟೆಯಲ್ಲಿ ಒಟ್ಟು 12 ಕೋವಿಡ್-19 ಸೋಂಕು ಪಾಸಿಟಿವ್ ಪ್ರಕರಣಗಳು ದೃಢವಾಗಿದೆ.

Advertisement

ಬಾಗಲಕೋಟೆಯ ಬಾದಾಮಿಯಲ್ಲಿ ಮೂರು ಪ್ರಕರಣಗಳು ದೃಢವಾಗಿದೆ. ಮತ್ತೊಂದು ಪ್ರಕರಣ ಧಾರವಾಡದಲ್ಲಿ ದೃಢಪಟ್ಟಿದೆ.

ಸೋಂಕಿತ ಸಂಖ್ಯೆ 607ರ ಸಂಪರ್ಕದ ಕಾರಣ ಬಾಗಲಕೋಟೆಯ ಬಾದಾಮಿಯಲ್ಲಿ ಮೂವರಿಗೆ ಸೋಂಕು ತಾಗಿದೆ. 55 ವರ್ಷದ ಮಹಿಳೆ, 80 ವರ್ಷದ ವೃದ್ಧೆ ಮತ್ತು 19 ವರ್ಷದ ಯುವತಿಗೆ ಸೋಂಕು ತಾಗಿರುವದು ದೃಢವಾಗಿದೆ.

ಮತ್ತೊಂದು ಪ್ರಕರಣ ಧಾರವಾಡದಲ್ಲಿ ದೃಢವಾಗಿದ್ದು, 35 ವರ್ಷದ ಪುರುಷನಿಗೆ ಸೋಂಕು ತಾಗಿರುವುದು ದೃಢವಾಗಿದೆ.

ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 705ಕ್ಕೆ ಏರಿಕೆಯಾಗಿದೆ. ಇದರಲ್ಲಿ 30 ಜನ ಸೋಂಕಿತರು ಸಾವನ್ನಪ್ಪಿದರೆ, 366 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next