ಅಹಮದಾಬಾದ್: ಗುಜರಾತ್ ಪೊಲೀಸರು ಸೋಮವಾರ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ನಾಲ್ವರು ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಾಲ್ವರು ಉಗ್ರರು ಶ್ರೀಲಂಕಾ ಪ್ರಜೆಗಳು. ಅವರು ಮೊದಲು ಚೆನ್ನೈಗೆ ಬಂದು ನಂತರ ಅಹಮದಾಬಾದ್ ತಲುಪಿದರು ಎಂದು ವರದಿಯಾಗಿದೆ.
ಅವರು ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಪಾಕಿಸ್ತಾನಿ ಹ್ಯಾಂಡ್ಲರ್‌ಗಳ ಸಂದೇಶಕ್ಕಾಗಿ ಕಾಯುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಭಯೋತ್ಪಾದಕರ ವಶದಿಂದ ಕೆಲವು ಪಾಕ್ ನಿರ್ಮಿತ ವೆಪನ್ ಗಳು ಸಿಕ್ಕಿವೆ.
ಮೂಲಗಳ ಪ್ರಕಾರ, ಯಹೂದಿಗಳ ಪ್ರಮುಖ ತಾಣಗಳನ್ನು ಗುರಿಯಾಗಿಸುವ ಕೆಲಸವನ್ನು ನಾಲ್ವರಿಗೆ ವಹಿಸಲಾಗಿತ್ತು. ಅವರನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬಂಧಿಸಿದೆ.
ಏಪ್ರಿಲ್ ನಲ್ಲಿ, ಗುಜರಾತ್ ಎಟಿಎಸ್ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಗುಜರಾತ್ ಕರಾವಳಿಯಲ್ಲಿ 14 ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಿ ಅವರ ಬಳಿ 602 ಕೋಟಿ ರೂಪಾಯಿ ಮೌಲ್ಯದ 86 ಕಿಲೋಗ್ರಾಂಗಳಷ್ಟು ನಿಷಿದ್ಧ ಡ್ರಗ್ಸ್ ವಶಪಡಿಸಿಕೊಂಡಿತ್ತು.