Advertisement

ಜಮ್ಮು ಮತ್ತು ಕಾಶ್ಮೀರದಲ್ಲಿ ನಾಲ್ಕು ಬಾರಿ ಭೂಕಂಪ

08:32 PM Aug 23, 2022 | Team Udayavani |

ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಮಂಗಳವಾರ ಮುಂಜಾನೆ 4 ಕಡೆ ಭೂಕಂಪ ಸಂಭವಿಸಿದೆ. ಆದರೆ ಸಾವುನೋವು, ಆಸ್ತಿಪಾಸ್ತಿ ನಷ್ಟಗಳು ಸಂಭವಿಸಿಲ್ಲ.

Advertisement

ಘಟನೆಯಿಂದ ಜನತೆಯಂತೂ ಕಂಗಾಲಾಗಿದ್ದಾರೆ. ಮೊದಲ ಘಟನೆ ಜಮ್ಮುವಿನ ಕಟರಾದಿಂದ 61 ಕಿಮೀ ದೂರದಲ್ಲಿ ಸಂಭವಿಸಿದೆ.

2ನೇ ಕಂಪನ ರಿಕ್ಟರ್‌ ಮಾಪಕದಲ್ಲಿ 2.6 ತೀವ್ರತೆಯನ್ನು ದಾಖಲಿಸಿದೆ. ಇದು ದೋಡಾದಿಂದ 9.5 ಕಿ.ಮೀ. ದೂರದಲ್ಲಿ ನಡೆದಿದೆ. 2.8 ತೀವ್ರತೆಯ 3ನೇ ಕಂಪನ ಉಧಾಮಪುರದಿಂದ 29 ಕಿ.ಮೀ.ದಲ್ಲಿ ಸಂಭವಿಸಿದೆ.

2.9 ತೀವ್ರತೆಯ 4ನೇ ಕಂಪನ ಉಧಾಮಪುರದಿಂದ 26 ಕಿಮೀ ದೂರದಲ್ಲಿ ನಡೆದಿದೆ. ಈ ನಾಲ್ಕನೆಯ ಘಟನೆ ಬೆಳಗ್ಗೆ 8.03 ನಿಮಿಷಕ್ಕೆ ಸಂಭವಿಸಿದೆ. ಉಳಿದಿದೆಲ್ಲ ಮಂಗಳವಾರ ಬೆಳಗ್ಗೆ 4 ಗಂಟೆಗೆ ಮುನ್ನವೇ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next