Advertisement

ಹುಣಸೂರು : 24 ಗಂಟೆಯಲ್ಲಿ ನಾಲ್ಕು ಸಾವು, 4 ಗ್ರಾಮ ಸೀಲ್ ಡೌನ್

03:35 PM Apr 28, 2021 | Team Udayavani |

ಹುಣಸೂರು: ಹುಣಸೂರು ತಾಲೂಕಿನಲ್ಲಿ ಕೊರೋನಾ ಅಟ್ಟಹಾಸ ಮುಂದುವರೆದಿದ್ದು. ಮಂಗಳವಾರ ಮತ್ತೆ ನಾಲ್ವರು ಕೊರೋನಾಕ್ಕೆ ಬಲಿಯಾಗಿದ್ದಾರೆ. ನಾಲ್ಕು ಗ್ರಾಮಗಳನ್ನು ಸೀಲ್‌ ಡೌನ್ ಮಾಡಲಾಗಿದೆ. ಈವರೆಗೆ 42 ಜನ ಕೋವಿಡ್ ನಿಂದ ಸಾವನ್ನಪ್ಪಿದಂತಾಗಿದೆ.

Advertisement

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಅರಸು ಕಲ್ಲಹಳ್ಳಿಯ ರವೀಂದ್ರ(55), ಶ್ರೀಕಾಂತ್(25) ನಗರದ ಮುಸ್ಲಿಂಬ್ಲಾಕ್‌ನ ನಯಾಜ್‌ ಅಹಮದ್(60), ಎನ್.ಇ.ಎಸ್ ಕ್ವಾಟ್ರಸ್‌ನ ರಫೀಕ್(58) ಸಾವನ್ನಪ್ಪಿದವರು.

ಕಲ್ಲಹಳ್ಳಿಯ ರವೀಂದ್ರರನ್ನು ಸಾರ್ವಜನಿಕ ಆಸ್ಪತ್ರೆಗೆ ಕರೆತರುವಾಗಲೇ ಮೃತಪಟ್ಟಿದ್ದರೆ. ದಾಖಲಾದ ದಿನವೇ ಚಿಕಿತ್ಸೆ ಫಲಕಾರಿಯಾಗದೆ ಶ್ರೀಕಾಂತ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆಂದು  ಟಿ.ಎಚ್.ಓ.ಡಾ.ಕೀರ್ತಿಕುಮಾರ್ ತಿಳಿಸಿದ್ದಾರೆ.

ಭಾನುವಾರ ಮೈಸೂರಿನಲ್ಲಿ ಮೃತಪಟ್ಟ ಕಲ್ಲಹಳ್ಳಿಯ ರಾಜಣ್ಣರ ಶವವನ್ನು ಮೈಸೂರಿನಿಂದಲೇ ಆಗಮಿಸಿದ್ದ ಶವ ಸಂಸ್ಕಾರ ನಡೆಸುವ ಸಿಬ್ಬಂದಿಗಳು ಅಂದೇ ಗ್ರಾಮದಲ್ಲಿ ಕೊವಿಡ್-೧೯ ಮಾರ್ಗಸೂಚಿಯಂತೆ ಅಂತ್ಯಸಂಸ್ಕಾರ ನಡೆಸಿದರು. ೩೦ಕ್ಕೂ ಹೆಚ್ಚು ಮಂದಿಗೆ ಕೊರೋನಾ ಧೃಡಪಟ್ಟಿದೆ.  ಮಂಗಳವಾರ ಮೃತಪಟ್ಟ ರವೀಂದ್ರ ಹಾಗೂ ಶ್ರೀಕಾಂತರ ಶವವನ್ನು ಹುಣಸೂರಿನ ಖಾಸಿಫ್‌ಖಾನ್ ಹಾಗೂ ಮಂಟಿಕೊಪ್ಪಲಿನ ದರ್ಶನ್‌ರವರು ಮೃತರ ಸಂಬಂದಿಗಳಿಗೆ ಪಿಪಿಟಿ ಕಿಟ್ ಹಾಕಿಸಿ. ಕಲ್ಲಹಳ್ಳಿಯ ಅವರವರ ಜಮೀನಿನಲ್ಲಿ  ಅಂತ್ಯಸಂಸ್ಕಾರ ನಡೆಸಿದರು.

ನಗರದ ಮುಸ್ಲಿಂಬ್ಲಾಕ್‌ನ ನಯಾಜ್‌ಅಹಮದ್ ಹಾಗೂ ರಫೀಕ್‌ರವರು ಉಸಿರಾಟದ ಸಮಸ್ಯೆಯಿಂದ ಹುಣಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ಇವರಿಬ್ಬರ ಶವವನ್ನು ಶಬ್ಬೀರ್‌ನಗರದ ಸ್ಮಶಾನದಲ್ಲಿ ಪಿಎಫ್‌ಐ ಹಾಗೂ ಸ್ನೇಹಜೀವಿ ಕಾರ್ಯಕರ್ತರು ಅಂತ್ಯಕ್ರಿಯೆ ನಡೆಸಿದರು.

Advertisement

ಪರೀಕ್ಷಾ ವರದಿ ವಿಳಂಬ:

ಸಾರ್ವಜನಿಕರು ತಮ್ಮ ಗಂಟಲು ದ್ರವ ಮಾದರಿಯನ್ನು ಪರೀಕ್ಷಿಸಿಕೊಂಡರೂ ವರದಿ ಬರುವುದು ತಡವಾಗುತ್ತಿದೆ. ನಾಲ್ಕು ದಿನಗಳ ಹಿಂದೆ ಪರೀಕ್ಷೆ ಮಾಡಿಸಿಕೊಂಡವರ ವರದಿಗಳು ತಡವಾಗಿ ವರದಿ ಬರುತ್ತಿರುವುದರಿಂದ ಕೊರೋನಾ ಸೋಂಕಿತರು ಇತರರಿಗೆ ಹರಡಲು ಕಾರಣವಾಗಿದೆ. ಇನ್ನು ದಿನೇದಿನೇ ಕೊರೋನಾ ಸಾವು ಹೆಚ್ಚುತ್ತಿರುವುದು ಹಾಗೂ ಸೋಂಕಿತರು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವುದರಿಂದ ಎಲ್ಲರಲ್ಲೂ ದುಗುಡ ಹೆಚ್ಚಿದೆ.

ನಾಲ್ಕು ಗ್ರಾಮ ಸೀಲ್ ಡೌನ್:

ಕೊರೋನಾ ಸೋಂಕಿತರು ಹೆಚ್ಚಿರುವ ತಾಲೂಕಿನ ಹನಗೋಡು ಹೋಬಳಿಯ ಕಲ್ಲಹಳ್ಳಿ, ಗಾವಡಗೆರೆ ಹೋಬಳಿಯ ಮುಳ್ಳೂರು,ಕೃಷ್ಣಾಪುರ ಹಾಗೂ ಬಿಳಿಕರೆ ಹೋಬಳಿಯ ಕೆಂಪಮ್ಮನಹೊಸೂರಿನಲ್ಲಿ ಸೋಂಕಿತರು ಹೆಚ್ಚಿರುವುದರಿಂದ ಈ ನಾಲ್ಕು ಗ್ರಾಮಗಳಿಗೆ ಮಂಗಳವಾರ ತೆರಳಿದ ತಹಸೀಲ್ದಾರ್ ಬಸವರಾಜ್, .ಪಂ.ಇ.ಓ.ಗಿರೀಶ್ ನೇತೃತ್ವದ ತಂಡ ಗ್ರಾಮಗಳನ್ನು ಗ್ರಾ.ಪಂ. ಹಾಗೂ ಆರೋಗ್ಯ ಇಲಾಖೆ ಸಹಕಾರದಿಂದ ರಸ್ತೆಗಳನ್ನು ಬಂದ್ ಮಾಡಿಸಿದ್ದಾರೆ. ಹಾಲಿನ ಡೇರಿಯನ್ನು ಸಹ ಮುಚ್ಚಿಸಲಾಗಿದೆ. ಹೊರಗಿನ ಜನರು ಗ್ರಾಮದೊಳಕ್ಕೆ ಬಾರದಂತೆ ನಿರ್ಬಂಧಿಸಲಾಗಿದೆ. ಈ ಗ್ರಾಮಗಳಲ್ಲಿ ಕೊರೋನಾ ಪರೀಕ್ಷೆ ಪೂರ್ಣ ಪ್ರಮಾಣದಲ್ಲಿ ನಡೆಯಲಿದೆ. ಆಯಾ ಗ್ರಾಮಗಳಲ್ಲಿ ಪಂಚಾಯ್ತಿಯ ಪಿಡಿಓ ಹಾಗೂ ಸಿಬ್ಬಂದಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next