Advertisement

ಸಿಡಿಲಬ್ಬರದ ಮಳೆಗೆ ನಾಲ್ವರ ಸಾವು

11:02 PM Oct 15, 2019 | Lakshmi GovindaRaju |

ಬೆಂಗಳೂರು: ಮಲೆನಾಡು ಸೇರಿ ರಾಜ್ಯದ ಹಲವೆಡೆ ಸಿಡಿಲು, ಗಾಳಿ ಸಹಿತ ಮಳೆ ಸುರಿಯುತ್ತಿದ್ದು, ಮಳೆ ಸಂಬಂಧಿ ದುರ್ಘ‌ಟನೆಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಕೊಪ್ಪಳ ತಾಲೂಕಿನ ಯಲಬುಗೇರಿ ಗ್ರಾಮದಲ್ಲಿ ಸೋಮವಾರ ಬೆಳಗಿನ ಜಾವ ಮನೆಯಲ್ಲಿ ಮಲಗಿದ್ದ ವೇಳೆ ಮನೆಯ ಮೇಲ್ಛಾವಣಿ ಕುಸಿದು ತಂದೆಯ ಎದುರಲ್ಲೇ ಮೂವರು ಮಕ್ಕಳು ಮೃತಪಟ್ಟಿದ್ದಾರೆ. ಸುಜಾತಾ ಕುದರಿಮೋತಿ (22), ಅಮರೇಶ ಕುದರಿಮೋತಿ (18) ಹಾಗೂ ಗವಿಸಿದ್ದಪ್ಪ ಕುದರಿಮೋತಿ (15) ಮೃತರು.

Advertisement

ಘಟನೆ ಯಲ್ಲಿ ಮೃತ ಮಕ್ಕಳ ತಂದೆ ಸೋಮಣ್ಣ ಕುದರಿಮೋತಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಮೂವರು ಮಕ್ಕಳು ಪಡಸಾಲೆಯಲ್ಲಿ ಮಲಗಿದ್ದರೆ, ತಂದೆ ಅಡುಗೆ ಕೋಣೆಯಲ್ಲಿ ಮಲಗಿದ್ದರು. ಮೃತ ಮಕ್ಕಳ ಕುಟುಂಬಕ್ಕೆ ಪ್ರಕೃತಿ ವಿಕೋಪದಡಿ ತಲಾ 4 ಲಕ್ಷ, ಸಿಎಂ ಪರಿಹಾರ ನಿಧಿಯಿಂದ ತಲಾ 1 ಲಕ್ಷ ಸೇರಿ ಒಟ್ಟು ತಲಾ 5 ಲಕ್ಷ ರೂ.ಪರಿಹಾರ ನೀಡಲಾಗುವುದು ಎಂದು ಕೊಪ್ಪಳ ತಹಶೀಲ್ದಾರ್‌ ಜೆ.ಬಿ.ಮಜಿ ತಿಳಿಸಿದ್ದಾರೆ.

ಸಿಡಿಲಿಗೆ ವ್ಯಕ್ತಿ ಬಲಿ: ರಾಣಿಬೆನ್ನೂರು ತಾಲೂಕಿನ ಕುರಿಹಾಳ ಗ್ರಾಮದಲ್ಲಿ ಸಿಡಿಲು ಬಡಿದು ಶಿವಾನಂದಪ್ಪ ಬಸಪ್ಪ ಬಾಲಣ್ಣನವರ (45) ಅಸುನೀಗಿದ್ದಾರೆ. ಶೃಂಗೇರಿ, ಕೊಪ್ಪ, ಮೂಡಿಗೆರೆ, ನರ ಸಿಂಹರಾಜಪುರ ಸೇರಿ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರೀ ಮಳೆಯಾಗು ತ್ತಿದೆ. ಸಕಲೇಶಪುರ ತಾಲೂಕಿನಲ್ಲಿ ಸುರಿದ ಗುಡುಗು ಮಿಂಚು ಸಹಿತ ಮಳೆಗೆ ಜನಜೀವನ ಅಸ್ತವಸ್ತಗೊಂಡಿತ್ತು.

ಇನ್ನೂ 3 ದಿನ ಮಳೆ?: ಮುಂಗಾರು ಮಾರುತಗಳ ನಿರ್ಗಮನ, ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ತಗ್ಗುಗಳು ಹಾದು ಹೋಗಿರು ವುದರಿಂದ ರಾಜ್ಯ ದಲ್ಲಿ ಮಳೆಯಾಗುತ್ತಿದೆ. ಅದರಲ್ಲೂ ಕರಾವಳಿಯಲ್ಲಿ ಮುಂದಿನ ನಾಲ್ಕು ದಿನಗಳು ಭಾರೀ ಮಳೆಯ ನಿರೀಕ್ಷೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next